ಮಂಗಳೂರು: ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಭವನೀಯ ವಿಮಾನ ಅಪಘಾತವು ಪೈಲಟ್ ಸಮಯ ಕಾರಣ ತಪ್ಪಿದೆ.
Advertisement

ಬೆಂಗಳೂರಿಗೆ ತೆರಳುವ ಇಂಡಿಗೊ ವಿಮಾನ ಸಂಜೆ 6:05 ಕ್ಕೆ ಟೇಕ್ ಆಫ್ ಆಗ ಬೇಕಿತ್ತು. ಟೇಕ್ ಆಫ್ ಗೆ ಹೊರಟ ಬಳಿಕ ವಿಮಾನದಲ್ಲಿತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಟೇಕ್ ಆಫ್ ಆಗುವ ಕೊನೆ ಕ್ಷಣದಲ್ಲಿ ಬ್ರೇಕ್ ಹಾಕುವ ಮೂಲಕ ಪೈಲೆಟ್ ವಿಮಾನವನ್ನು ನಿಲ್ಲಿಸಿದ್ದರು.
Advertisement

Advertisement

ವಿಮಾನವನ್ನು ಸುರಕ್ಷಿತವಾಗಿ ಬೇ ಗೆ ಮರಳಿ ಕರೆತಂದರು. ಇದರಿಂದಾಗಿ ಭಾರಿ ಅನಾಹುತ ತಪ್ಪಿತು ಎಂದು ವಿಮಾನ ನಿಲ್ದಾಣದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ವಿಮಾನದಲ್ಲಿ 229 ಪ್ರಯಾಣಿಕರು ಹಾಗೂ 7 ಸಿಬ್ಬಂದಿ ಪ್ರಯಾಣಿಸುತ್ತಿದ್ದರು.
Advertisement

Advertisement

ಪ್ರಯಾಣಿಕರನ್ನು ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿಸಿದರು. ಪ್ರಯಾಣಿಕರಿಗೆ ಇಂಡಿಗೊ ಸಂಸ್ಥೆ ಪರ್ಯಾಯ ವಿಮಾನದ ವ್ಯವಸ್ಥೆ ಕಲ್ಪಿಸಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
Advertisement









































