ಸವಣೂರು, ಎಡಮಂಗಲದಲ್ಲಿ ರೈಲ್ವೆ ಮೇಲ್ಸ್ತುವೆ ನಿರ್ಮಾಣ, ಕಾಣಿಯೂರು ನಿಲ್ದಾಣವನ್ನು ಎಲಡ್ಕಕ್ಕೆ ಸ್ಥಳಾಂತರಿಸಿ ಟರ್ಮಿನಲ್ ನಿರ್ಮಿಸಲು ಆಗ್ರಹ
ಮಂಗಳೂರು: ಮಂಗಳೂರಿಗೆ ನಿನ್ನೆ ಭೇಟಿ ನೀಡಿದ ಕೇಂದ್ರಮತ್ತು ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಮನವಿ ಶಾಸಕ ಭಗೀರಥಿ ಮುರುಳ್ಯ ಅವರು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಮೂಲಕ ಸಲ್ಲಿಸಿದರು.


ಸುಳ್ಯ ಕ್ಷೇತ್ರದ ಸವಣೂರು ಮತ್ತು ಎಡಮಂಗಲದ ಸಾರ್ವಜನಿಕ ಗೇಟ್‌ಗಳಿಂದ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಎರಡೂ ಕಡೆಗಳಲ್ಲಿ ಮೇಲ್ವೇತುವೆ (ಓವರ್ಬ್ರಿಡ್ಜ್) ನಿರ್ಮಿಸಲು ಮನವಿಯಲ್ಲಿ ಒದಗಿಸಲಾಗಿದೆ.


ಜೊತೆಗೆ, ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಳವಡಿಸಬೇಕು. ಕಾಣಿಯೂರು ನಿಲ್ದಾಣವನ್ನು ಸಮೀಪದ ಎಲಡ್ಕ ಪ್ರದೇಶಕ್ಕೆ ಸ್ಥಳಾಂತರಿಸಿ, ಅಲ್ಲಿ ಟರ್ಮಿನಲ್ ನಿಲ್ದಾಣ ನಿರ್ಮಿಸಲು ಶಾಸಕರು ಮನವಿ ಸಲ್ಲಿಸಿದ್ದಾರೆ.


ಹಿಂದೆ ಕೂಡ ಶಾಸಕರು ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ಮತ್ತೊಮ್ಮೆ ಬೇಡಿಕೆಗಳನ್ನು ತಂದು, ಕ್ಷೇತ್ರದ ರೈಲ್ವೆ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.










































