ಪುತ್ತೂರು: ಮೋದಿ ಸರ್ಕಾರದ ಅಮೃತ್ 2.0 (ಅಟಲ್ ಮಿಷನ್ ಫಾರ್ ರಿಜುವಿನೇಷನ್ ಅಂಡ್ ಅರ್ಬನ್ ಟ್ರಾನ್ಸ್‌ಫರ್ಮೇಷನ್) ಯೋಜನೆಯಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಲ್ಯಾಣಿ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ಒಟ್ಟು ರೂ. 3,73,94,992 ವೆಚ್ಚದ ಈ ಕಾಮಗಾರಿಯಲ್ಲಿ 50% ಕೇಂದ್ರ ಸರ್ಕಾರದ ಪಾಲು, 30% ರಾಜ್ಯ ಸರ್ಕಾರದ ಪಾಲು ಮತ್ತು 20% ಪುತ್ತೂರು ನಗರಸಭೆಯ ಪಾಲು ಇರಲಿದೆ.ಡಿಪಿಆರ್ ಪ್ರಕಾರ, ಹಾಲಿ ಕಲ್ಯಾಣಿ ಸುಧಾರಣೆಗೆ ರೂ. 1.09 ಕೋಟಿ, ಕೆರ್ಬ್ಸ್ ಸಹಿತ ನಡಿಗೆ ಪಥಕ್ಕೆ ರೂ. 58.53 ಲಕ್ಷ, ಕಲ್ಲಿನ ಬೆಂಚ್,


ಎಲ್‌ಇಡಿ ದೀಪ, ನಾಮಫಲಕ ಮತ್ತು ಲ್ಯಾಂಡ್‌ಸ್ಕೇಪ್‌ಗೆ ರೂ. 21.76 ಲಕ್ಷ, ಆಂಫಿಥಿಯೇಟರ್‌ಗೆ ರೂ. 3.34 ಲಕ್ಷ, 15 ಮಕ್ಕಳ ಆಟದ ಉಪಕರಣಗಳಿಗೆ ರೂ. 20.05 ಲಕ್ಷ ಮತ್ತು ಪಾರ್ಕ್ ಅಭಿವೃದ್ಧಿಗೆ ರೂ. 57.34 ಲಕ್ಷ ವೆಚ್ಚ ಮಾಡಲಾಗುವುದು.


ಜೊತೆಗೆ ಮುಂದಿನ 5 ವರ್ಷಗಳ ಕಾಲ ಕಲ್ಯಾಣಿ ನಿರ್ವಹಣೆಗಾಗಿ ರೂ. 31.28 ಲಕ್ಷ ಮೀಸಲಿಡಲಾಗಿದೆ.


ಕಾಮಗಾರಿ ಪೂರ್ಣಗೊಂಡ ನಂತರ ಪುಷ್ಕರಣಿ ಶಿಲಾಮಯವಾಗಿ ಮೆರೆದಾಡಲಿದೆ. ದೇವಾಲಯದ ಸುತ್ತಲೂ ಸೌಂದರ್ಯೀಕರಣವಾಗಿ, ಮಹಾಲಿಂಗೇಶ್ವರನ ಸನ್ನಿಧಿ ಇನ್ನಷ್ಟು ಕಂಗೊಳಿಸಲಿದೆ.ಈ ಯೋಜನೆ ಅನುಷ್ಠಾನ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪುತ್ತೂರು ಭಕ್ತ ವೃಂದ ಕೃತಜ್ಞತೆ ಸಲ್ಲಿಸಿದ್ದಾರೆ









































