ಪಡಿತರ ವಿತರಣೆಯಲ್ಲಿ ಬರಲಿದೆ ಭಾರಿ ಬದಲಾವಣೆ: ರೇಷನ್ ಅಕ್ರಮಕ್ಕೆ ಬ್ರೇಕ್ ಹಾಕಲು ಕೇಂದ್ರದ ಹೊಸ ‘ಡಿಜಿಟಲ್ ವೋಚರ್’ ಅಸ್ತ್ರ!

Picture of Savistara

Savistara

Bureau Report

​​​ದೇಶದ ಸುಮಾರು 78.65 ಕೋಟಿ ಫಲಾನುಭವಿಗಳಿಗೆ ತಲುಪುತ್ತಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (PDS) ನಡೆಯುವ ಅಕ್ರಮ ಮತ್ತು ಸೋರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

Advertisement

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2029ರವರೆಗೆ ಉಚಿತ ಪಡಿತರ ವಿತರಣೆ ವಿಸ್ತರಣೆಯಾಗಿರುವ ಬೆನ್ನಲ್ಲೇ, ಈಗ ಎನ್‌ಪಿಸಿಐ (NPCI) ನ ಇ-ರುಪಿ (e-RUPI) ಆಧಾರಿತ ‘ಡಿಜಿಟಲ್ ವೋಚರ್’ ವ್ಯವಸ್ಥೆಯನ್ನು ಜಾರಿಗೆ ತರಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಸಿದ್ಧತೆ ನಡೆಸಿದೆ.
​

Advertisement

Advertisement

ಏನಿದು ಡಿಜಿಟಲ್ ವೋಚರ್ ವ್ಯವಸ್ಥೆ? ಹೇಗೆ ಕೆಲಸ ಮಾಡುತ್ತದೆ?
​

Advertisement

ನಿರ್ದಿಷ್ಟ ಉದ್ದೇಶದ ಇ-ರುಪಿ ವೋಚರ್: ಎಸ್‌ಬಿಐ (SBI) ಮತ್ತು ಎನ್‌ಐಸಿ (NIC) ಸಹಯೋಗದೊಂದಿಗೆ ಫಲಾನುಭವಿಗಳ ಆಧಾರ್ ಸಂಖ್ಯೆಗೆ ಲಿಂಕ್ ಆದ ಪ್ರತ್ಯೇಕ ಡಿಜಿಟಲ್ ವೋಚರ್ ಸೃಷ್ಟಿಯಾಗಲಿದೆ. ಉದಾಹರಣೆಗೆ, ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿ ನಿಗದಿಯಾಗಿದ್ದರೆ, “10 ಕೆಜಿ ಅಕ್ಕಿ” ಎಂಬ ವೋಚರ್ ಬರುತ್ತದೆ. ಇದಕ್ಕೆ ಯಾವುದೇ ನಗದು ಮೌಲ್ಯ ಇರುವುದಿಲ್ಲ; ಹಣವಾಗಿ ಪರಿವರ್ತಿಸಲು ಅಥವಾ ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ.
​

Advertisement

Advertisement

ಸರಳ ವಿತರಣಾ ಪ್ರಕ್ರಿಯೆ: ಫಲಾನುಭವಿಗಳ ಮೊಬೈಲ್‌ಗೆ ಎಸ್‌ಎಂಎಸ್ (SMS) ಅಥವಾ ಕ್ಯೂಆರ್ ಕೋಡ್ (QR Code) ರೂಪದಲ್ಲಿ ವೋಚರ್ ರವಾನೆಯಾಗಲಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ‘ಮೇರಾ ರೇಷನ್’ (Mera Ration) ಆ್ಯಪ್ ಮೂಲಕವೂ ಇದನ್ನು ಪಡೆಯಬಹುದು.
​

Advertisement

ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ: ಪಡಿತರ ಅಂಗಡಿಗೆ ತೆರಳಿ ಮೊಬೈಲ್‌ನಲ್ಲಿರುವ ಕ್ಯೂಆರ್ ಕೋಡ್ ತೋರಿಸಿದಾಗ ಡೀಲರ್ ಅದನ್ನು ಇ-ಪಿಒಎಸ್ (ePoS) ಯಂತ್ರದಲ್ಲಿ ಸ್ಕ್ಯಾನ್ ಮಾಡುತ್ತಾರೆ. ಬಳಿಕ ಆಧಾರ್ ಒಟಿಪಿ ಅಥವಾ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಂಡ ನಂತರವಷ್ಟೇ ಪಡಿತರ ವಿತರಣೆಯಾಗಲಿದೆ.

​

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ (PMGKAY) 2026-27ನೇ ಸಾಲಿನಲ್ಲಿ 2.27 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಮೀಸಲಿಟ್ಟಿರುವ ಕೇಂದ್ರ ಸರ್ಕಾರ, ಈ ಹೊಸ ಡಿಜಿಟಲ್ ತಂತ್ರಜ್ಞಾನದ ಮೂಲಕ ಅರ್ಹ ಬಡವರಿಗೆ ಪಡಿತರ ನೇರವಾಗಿ ತಲುಪುವಂತೆ ಮಾಡಲು ಮುಂದಾಗಿದೆ.

[t4b-ticker]
error: Content is protected !!