2,000 ರೂ ಒಳಗಿನ ಯುಪಿಐ ಪಾವತಿ: 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್​​ಗೆ ಸಂಪುಟ ಅನುಮೋದನೆ; ಏನಿದು ಯೋಜನೆ? ಯಾರಿಗೆ ಅನುಕೂಲ?

Picture of Savistara

Savistara

Bureau Report

ನವದೆಹಲಿ: ಪ್ರಸಕ್ತ ಹಣಕಾಸು ವರ್ಷಕ್ಕೆ ಕಡಿಮೆ ಮೌಲ್ಯದ ಭೀಮ್ ಯುಪಿಐ ಹಣ ಪಾವತಿಗಳಿಗೆ  ಉತ್ತೇಜನ ನೀಡುವ ಯೋಜನೆಗೆ ಕೇಂದ್ರ ಸಂಪುಟ ಇಂದು ಸೋಮವಾರ ಅನುಮೋದನೆ ನೀಡಿದೆ. ಸಣ್ಣ ವ್ಯಾಪಾರಿಗಳಿಗೆ ಗ್ರಾಹಕರಿಂದ ಯುಪಿಐ ಮೂಲಕ ಮಾಡಲಾಗುವ ಪಾವತಿಗಳಿಗೆ 1,500 ಕೋಟಿ ರೂ ಮೊತ್ತದ ಈ ಯೋಜನೆ ಅನ್ವಯ ಆಗುತ್ತದೆ.

ಸಣ್ಣ ವ್ಯಾಪಾರಿಗಳಿಗೆ ಯುಪಿಐ ಬಳಕೆ ಉತ್ತೇಜಿಸಲು ಇರುವ ಈ ಯೋಜನೆಯು 2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರ ಅವಧಿಯ ಯುಪಿಐ ಪಾವತಿಗಳಿಗೆ ಅನ್ವಯ ಆಗುತ್ತದೆ. ಕೆಳ ಸ್ತರದ ವ್ಯಾಪಾರಗಳಲ್ಲಿ ಈಗಲೂ ಕ್ಯಾಷ್ ಮೂಲಕ ಸಾಕಷ್ಟು ಪಾವತಿಗಳಾಗುತ್ತಿವೆ. ಇಲ್ಲಿ ಯುಪಿಐ ಅಳವಡಿಕೆ ಹೆಚ್ಚಿಸಲು ಸರ್ಕಾರವು ಇನ್ಸೆಂಟಿವ್ ಸ್ಕೀಮ್ ತಂದಿದೆ. ಇದು ಸಣ್ಣ ವ್ಯಾಪಾರಿಗಳಿಗೆ ಗ್ರಾಹಕರು ಮಾಡುವ ಸಣ್ಣ ಪಾವತಿಗಳಿಗೆ ಪ್ರೋತ್ಸಾಹಕ ಧನ ನೀಡಲಾಗುತ್ತದೆ. ಇಲ್ಲಿ ಸಣ್ಣ ಪಾವತಿ ಎಂದರೆ 2,000 ರೂ ಒಳಗಿನ ಪಾವತಿ.

ಗ್ರಾಹಕರು ಸಣ್ಣ ವ್ಯಾಪಾರಿಗಳಿಗೆ ಸಣ್ಣ ಮೊತ್ತದ ಹಣ ಪಾವತಿಸಿದಾಗ ಆ ಹಣಕ್ಕೆ ಶೇ. 0.15ರಷ್ಟು ಇನ್ಸೆಂಟಿವ್ ನೀಡಲಾಗುತ್ತದೆ. ಇದು ವ್ಯಾಪಾರಿಗಳಿಗೆ ನೀಡುವ ಇನ್ಸೆಂಟಿವ್. ಉದಾಹರಣೆಗೆ, ಗ್ರಾಹಕರೊಬ್ಬರು 1,000 ರೂ ಹಣ ಪಾವತಿಸಿದಾಗ, ವ್ಯಾಪಾರಿಗೆ ಒಂದೂವರೆ ರೂ ಹೆಚ್ಚುವರಿ ಹಣ ಸಿಗುತ್ತದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!