ಕಳೆದ ಕೆಲವು ದಿನಗಳಿಂದ ರಾಜ್ಯವನ್ನು ಕಾಡುತ್ತಿದ್ದ ಚಳಿ ಮತ್ತು ಒಣ ಹವೆಯ ಬಿಗುವಿಗೆ ಕೊನೆಗೂ ಬ್ರೇಕ್ ಬಿದ್ದಿದೆ.ಹವಾಮಾನದ ಹಠಾತ್ ಬದಲಾವಣೆಯೊಂದಿಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆರಾಯ ಮತ್ತೆ ಮುಖತೋರಿಸಿದ್ದಾನೆ. ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ನವೆಂಬರ್ 28 ರವರೆಗೆ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.

ಆದರೆ, ಈ ಮಳೆಯ ಆಟ ಹೆಚ್ಚು ದಿನಗಳ ಕಾಲ ಇರುವುದಿಲ್ಲ. ನವೆಂಬರ್ 29 ರಿಂದ ಗಾಳಿಯ ದಿಕ್ಕು ಬದಲಾಗಲಿದೆ, ರಾಜ್ಯದಲ್ಲಿ ಮತ್ತೆ ಶುಷ್ಕ ಮತ್ತು ಒಣ ಹವೆ ಮುಂದುವರಿಯುವ ಲಕ್ಷಣಗಳಿವೆ.


ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ನೆಲೆಸಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ತುಂತುರು ಮಳೆ ಸುರಿಯುವ ಮೂಲಕ ದಿನದ ಹವಾಮಾನಕ್ಕೆ ತಂಪು ನೀಡಿದೆ.ಮಧ್ಯಾಹ್ನದ ನಂತರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ರಾಮನಗರ, ಚಾಮರಾಜನಗರ, ಹಾಸನ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಜೊತೆಗೆ ಕೆಲವೆಡೆ ಸಾಧಾರಣ ಮಳೆಯಾಗಲಿದೆ.


ಕರಾವಳಿ ಭಾಗದಲ್ಲೂ ಹವಾಮಾನ ಬದಲಾವಣೆ ಬಿಸಿ ತಟ್ಟಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಸಹಿತ ಸಾಧಾರಣ ಮಳೆಯಾಗುತ್ತದೆ ಮುನ್ಸೂಚನೆ ಇದೆ. ಕಾಸರಗೋಡಿನ ಪ್ರದೇಶದ ಕಡೆ ತುಂತುರು ಮಳೆಯಾದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ.


ಕರಾವಳಿ ಭಾಗದಲ್ಲೂ ಹವಾಮಾನ ಬದಲಾವಣೆ ಬಿಸಿ ತಟ್ಟಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಸಹಿತ ಸಾಧಾರಣ ಮಳೆಯಾಗುತ್ತದೆ ಮುನ್ಸೂಚನೆ ಇದೆ.
ಕಾಸರಗೋಡಿನ ಪ್ರದೇಶದ ಕಡೆ ತುಂತುರು ಮಳೆಯಾದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ.
ಕರಾವಳಿ ಭಾಗದಲ್ಲೂ ಹವಾಮಾನ ಬದಲಾವಣೆ ಬಿಸಿ ತಟ್ಟಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಸಹಿತ ಸಾಧಾರಣ ಮಳೆಯಾಗುತ್ತದೆ ಮುನ್ಸೂಚನೆ ಇದೆ.
ಕಾಸರಗೋಡಿನ ಪ್ರದೇಶದ ಕಡೆ ತುಂತುರು ಮಳೆಯಾದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ.ಸಾಮಾನ್ಯವಾಗಿ, ನವೆಂಬರ್ 28 ರವರೆಗೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಪ್ರಭಾವ ಇರುತ್ತದೆ,
ಹೊರಗೆ ಸಂಚರಿಸುವವರು ಹಾಗೂ ರೈತರು ಹವಾಮಾನ ಈ ಬದಲಾವಣೆಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುವುದು ಒಳಿತು.














































