ದಶ ಸಂಭ್ರಮದಲ್ಲಿ ಮಂಗಳೂರಿನ ರಾಮ -ಲಕ್ಷ್ಮಣ ಜೋಡುಕರೆ ಕಂಬಳ!

Picture of Savistara

Savistara

Bureau Report

ವೈಭವದಿಂದ ನಡೆಯುವ ಕಂಬಳ ಜನವರಿ 02 ರಂದು ಈ ಸಂದರ್ಭದಲ್ಲಿ. ದಶ ಸಂಭ್ರಮದಲ್ಲಿ ಈ ಬಾರಿಯ ಕಂಬಳ ನಡೆಯಲಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಜನಮನ ಕಂಬಳ ಎಂದೆಂದೂ ತುಳುನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ.ಮಂಗಳೂರಿನಂತಹ ಮಹಾನಗರಿಯಲ್ಲಿ ಕಂಬಳ ನಡೆಸುವುದು ಸವಾಲಿನ ಕೆಲಸ.

Advertisement

ಇದನ್ನು ಸಾಧ್ಯವಾಗಿಸಿದವರು ಜಿಲ್ಲೆಯ ಹೆಮ್ಮೆಯ ಸಂಸದ ಕ್ಯಾ.ಬ್ರಿಜೇಶ್ ಚೌಟ. ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಜಾಗ ಕೊಟ್ಟವರು ಡಾ. ಪ್ರಕಾಶ್ ಶೆಟ್ಟಿ. ಕಳೆದ 10 ಡಿಸೆಂಬರ್ ಕೊನೆಯ ವಾರ ಅಥವಾ ಹೊಸ ವರುಷದ ಪ್ರಥಮ ವಾರದಲ್ಲೇ ಈ ಕಂಬಳ ಆಯೋಜನೆಗೊಳ್ಳುವುದು ವಿಶೇಷ.

Advertisement

Advertisement

ಕ್ಯಾ ಬಿಜೇಶ್ ಚೌಟ ಅವರು ಜನಪ್ರತಿನಿಧಿಯಾಗುವ ಮೊದಲೇ ಈ ಕಂಬಳವನ್ನು ಪ್ರಾರಂಭಿಸಿದ್ದು ಗಮನಿಸಬೇಕಾದ ಅಂಶ. ಈ ಕಂಬಳಕ್ಕೆ ಕೇವಲ ತುಳುನಾಡಿನ ಜನತೆಗೆ ಅಂತಾರಾಷ್ಟ್ರೀಯ ಮಟ್ಟದಿಂದ ಅಭಿಮಾನಿಗಳು, ಛಾಯಾಚಿತ್ರಗ್ರಾಹಕರು, ವಿದೇಶಿಗರು ಸೇರಿದಂತೆ ಅನೇಕರು ಆಗಮಿಸುತ್ತಾರೆ.

Advertisement

Advertisement

ಮುಖ್ಯವಾಗಿ, ಸಂಸದರೊಬ್ಬರ ಅಧ್ಯಕ್ಷತೆಯಲ್ಲಿ ನಡೆಯುವ ತುಳುನಾಡಿನ ಏಕೈಕ ಕಂಬಳ ಇದೆ. ಇನ್ನು ಎಲ್ಲಾ ಕಂಬಗಳಲ್ಲಿ ವಯಸ್ಸಾದವರೇ ಹೆಚ್ಚಾಗಿ ಕಾಣಸಿಗುತ್ತಾರೆ.

Advertisement

Advertisement

ಆದರೆ ಕ್ಯಾ. ಚೌಟ ಅವರು ಯುವಕರನ್ನೇ ಹೆಚ್ಚಾಗಿ ಸೇರಿಸಿಕೊಂಡು ಈ ಕಂಬಳವನ್ನು ನಡೆಸಿದ್ದು, ನಮ್ಮನಾಡಿನ ಸಂಸ್ಕೃತಿಯ ಮಹತ್ವವನ್ನು ಯುವಜನಾಂಗಕ್ಕೆ ಸಾರುವ ಕರ್ತವ್ಯ ಮತ್ತು ಪ್ರಸ್ತುತ ದಿನಗಳಲ್ಲಿ ದಾರಿ ತಪ್ಪುತ್ತಿರುವ ಜೆನ್‌ಝೀ ಸಂಸ್ಕಾರ, ಸಂಸ್ಕೃತಿ, ಆಚರಣೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಸಂಸದರು ಮಾಡಿತ್ತಾ ಬಂದಿದ್ದಾರೆ.

ಇನ್ನು ಈ ವರ್ಷದ ಕಂಬಳದ ಜೊತೆಗೆ ಬೇರೆ ಯೋಜನೆಗಳೂ ಇದ್ದು ಅವೆಲ್ಲವೂ ಸಮಾಜಕ್ಕೆ ಪೂರಕವಾದ ಕಂಬಳದ ಪ್ರಮುಖರು. ಕಳೆದ ಕಂಬಳದ ಸಂದರ್ಭದಲ್ಲಿ 10 ಉದ್ಯಮಿಗಳನ್ನು ಸನ್ಮಾನಿಸಿರುವುದು ಹೆಮ್ಮೆಯ ಸಂಗತಿ.

ಸಭೆಯಲ್ಲಿ ರಾಜ್ಯ ಕಂಬಳ ಸಮಿತಿಯ ಮುಚ್ಚೂರು ಕಲ್ಕುಡ ಲೋಕೇಶ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗಾರ ಪಿ.ಆರ್. ಶೆಟ್ಟಿ, ಪ್ರಸಾದ್‌ ಶೆಟ್ಟಿ, ವಿಜಯಕುಮಾರ್‌ ಕಂಗಿನಮನೆ, ಉಪಾಧ್ಯಕ್ಷ ಅನಿಲ್‌ ಕುಮಾರ್‌, ಕಿರಣ್‌ ಕೋಡಿಕಲ್‌, ಮನೋಹರ್‌ ಪ್ರಸಾದ್‌, ಪ್ರಧಾನ ಕಾರ್ಯದರ್ಶಿ ಸುಜಿತ್‌ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯ.

ಸಮಿತಿಯ ಉಪಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಕಾಶ್ ಗರೋಡಿ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಕಂಬಳ ಸಮಿತಿ ಕಾರ್ಯದರ್ಶಿ ಮನ್ಮಥ ಶೆಟ್ಟಿ ನಿರ್ವಹಿಸಿದರು.

[t4b-ticker]
error: Content is protected !!