ಮಂಗಳೂರು: ಕುದುರೆಮುಖ ವನ್ಯಜೀವಿ ವಿಭಾಗದ ವಿವಿಧ ಚಾರಣಪಥಗಳಾದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್, ನರಸಿಂಹ ಪರ್ವತ, ಹಿಡ್ಲುಮನೆ ಫಾಲ್ಸ್, ಕೊಡಚಾದ್ರಿ ಟ್ರೆಕ್‌ಗಳಿಗೆ ಚಾರಣವನ್ನು ಬೆಂಕಿ ಕಾಲದ ಕಾರಣದಿಂದ ನಿರ್ಬಂಧಿಸಲಾಗಿತ್ತು. ಪ್ರಸ್ತುತ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿಯುತ್ತಿರುವುದರಿಂದ ಕುದುರೆಮುಖ ವನ್ಯಜೀವಿ ವಿಭಾಗದ ಎಲ್ಲ ಪಥಗಳಲ್ಲಿ ಮೇ 1ರಿಂದ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು aranyavihara.karnataka.gov.in ಮೂಲಕ ಟಿಕೆಟ್ಕಾಯ್ದಿರಿಸಿ ಚಾರಣ ಮಾಡಬಹುದು ಎಂದು ಡಿಸಿಎಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 1ರಿಂದ ಕುದುರೆಮುಖ ಚಾರಣಕ್ಕೆ ಅವಕಾಶ
Savistara
Bureau Report
[t4b-ticker]













































