‘ನಮ್ಮ ಹಕ್ಕು ನಮಗೆ ನೀಡಿ’: ಗುರುಪುರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಭರತ್ ಶೆಟ್ಟಿ, MLC ಕಿಶೋರ್ ಆಕ್ರೋಶ!

Picture of Savistara

Savistara

Bureau Report

​ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದು, ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ದಿವಾಳಿ ಮಾಡಿ ಭ್ರಷ್ಟಾಚಾರದ ಮೂಲಕ ಜನರ ರಕ್ತ ಹಿಂಡುತ್ತಿದೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಜಂಟಿ ವಾಗ್ದಾಳಿ ನಡೆಸಿದ್ದಾರೆ.​

ಪ್ರತಿಭಟನಾ ಸಭೆಯ ಪ್ರಮುಖ ಮುಖ್ಯಾಂಶಗಳು:​

ಗುರುಪುರದಲ್ಲಿ ಬೃಹತ್ ಹಕ್ಕೊತ್ತಾಯ ಸಭೆ: ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ನಮ್ಮ ಹಕ್ಕು ನಮಗೆ ನೀಡಿ” ಜನಾಂದೋಲನ ಸಭೆಯಲ್ಲಿ ಕಾಂಗ್ರೆಸ್ ದುರಾಡಳಿತದ ವಿರುದ್ಧ ಕಟು ವಾಗ್ದಾಳಿ ನಡೆಸಲಾಯಿತು.

​ಶಾಲಾ ಕೊಠಡಿ ಕಟ್ಟಲೂ ಯೋಗ್ಯತೆಯಿಲ್ಲ: ತೆರಿಗೆ ಮತ್ತು ಪ್ರಮಾಣಪತ್ರಗಳ ಶುಲ್ಕವನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಿರುವ ಸರ್ಕಾರ, ಕಳೆದೆರಡು ವರ್ಷಗಳಲ್ಲಿ ಇಡೀ ಕ್ಷೇತ್ರದಲ್ಲಿ ಒಂದೇ ಒಂದು ಸರ್ಕಾರಿ ಶಾಲಾ ಕೊಠಡಿ ನಿರ್ಮಿಸಿಲ್ಲ, ಶಾಲೆಗಳ ನಿರ್ವಹಣೆಗೆ ಸಿಎಸ್‌ಆರ್ ನಿಧಿಯನ್ನೇ ನೆಚ್ಚಿಕೊಳ್ಳುವ ದುಃಸ್ಥಿತಿ ಬಂದಿದೆ ಎಂದು ಶಾಸಕ ಭರತ್ ಶೆಟ್ಟಿ ಆರೋಪಿಸಿದರು.​

ಪಂಚಾಯಿತಿಗಳು ದಿವಾಳಿ: ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಪರಿಶಿಷ್ಟ ಸಮುದಾಯದ ₹46,000 ಕೋಟಿ ಅನುದಾನ ಲೂಟಿ ಮಾಡಲಾಗಿದೆ. 15ನೇ ಹಣಕಾಸು ಆಯೋಗದ ಕೇಂದ್ರದ ಅನುದಾನ ಬಿಟ್ಟರೆ ಪಂಚಾಯಿತಿಗಳಿಗೆ ಹಳ್ಳಿಗಳ ರಸ್ತೆ ನಿರ್ಮಿಸಲು ರಾಜ್ಯದಿಂದ ಅನುದಾನವೇ ಇಲ್ಲ ಎಂದು MLC ಕಿಶೋರ್ ಕುಮಾರ್ ಕಿಡಿಕಾರಿದರು.​

ಹೋರಾಟದ ಎಚ್ಚರಿಕೆ:ಬಡವರ ವಸತಿ ಯೋಜನೆ, ಪಿಂಚಣಿ ಕಡಿತ ಹಾಗೂ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡದ ಈ ಭ್ರಷ್ಟ ಸರ್ಕಾರದ ವಿರುದ್ಧ ಗ್ರಾಮ ಪಂಚಾಯತ್ ಮಟ್ಟದಿಂದಲೇ ಜನಾಂದೋಲನ ರೂಪಿಸಿ ಅಧಿಕಾರದಿಂದ ಕಿತ್ತೊಗೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ನಾಯಕರು ಎಚ್ಚರಿಸಿದ್ದಾರೆ.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!