ಬೆಂಗಳೂರು: ರಾಜ್ಯದ ಸಾರಿಗೆ ನಿಗಮಗಳ ದುಸ್ಥಿತಿ ಬಯಲು ಮಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, ನಿಗಮಗಳ ಬಳಿ ನೌಕರರ ಸಂಬಳ ಕೊಡಲೂ ದುಡ್ಡಿಲ್ಲ, ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಕಾಸಿಲ್ಲ ಎಂದು ಕೈಚೆಲ್ಲಿದ್ದಾರೆ.
“ಆಗ್ತಾ ಇಲ್ಲ ನಮ್ಮ ಕೈಯಲ್ಲಿ, ಬಸ್ ದರ ಏರಿಕೆ ಮಾಡಲೇಬೇಕು” ಎಂಬ ಸಚಿವರ ಹೇಳಿಕೆ ಇದೀಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದಿಂದಾಗಿ ನಾಲ್ಕು ನಿಗಮಗಳಿಗೆ ಸರ್ಕಾರದಿಂದ ಬರಬೇಕಾದ 2,500 ಕೋಟಿಗೂ ಅಧಿಕ ಹಣ ಬಾಕಿ ಇದೆ. ಪ್ರತಿದಿನ ಡೀಸೆಲ್‌ಗೇ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದ್ದು, ನಿಗಮಗಳು ಸಾಲದ ಸುಳಿಯಲ್ಲಿ ಸಿಲುಕಿವೆ.
ನೌಕರರ ಸಂಬಳ, ಪಿಂಚಣಿ, ಡೀಸೆಲ್ ಬಿಲ್ ಕಟ್ಟಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ದರ ಏರಿಕೆ ಅನಿವಾರ್ಯ ಎಂದು ಸಚಿವರು ಪರೋಕ್ಷವಾಗಿ ಹೇಳಿದ್ದಾರೆ.ಉಚಿತ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ಕೊನೆಗೆ ಅದರ ಹೊರೆ ಸಾಮಾನ್ಯ ಪ್ರಯಾಣಿಕರ ಮೇಲೆ ಬೀಳುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.









































