ಚೆನ್ನೈ, ಅ. 30: ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಈ ವರ್ಷ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಸೀಟುಗಳು ಭರ್ತಿಯಾಗಿಲ್ಲ. ದೇಶಾದ್ಯಂತ ಸುಮಾರು 2 ಸಾವಿರ ಸೀಟುಗಳು ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಕೌನ್ಸೆಲಿಂಗ್ ಸುತ್ತನ್ನು ನಡೆಸಲು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ರಾಜ್ಯಗಳು ಮನವಿ ಮಾಡಿವೆ.72 ವೈದ್ಯಕೀಯ ಕಾಲೇಜುಗಳಿರುವ ಕರ್ನಾಟಕದಲ್ಲಿ ಏಳು ಸುತ್ತಿನ ಕೌನ್ಸೆಲಿಂಗ್ ಅನಂತರವೂ 191 ಎಂಬಿಬಿಎಸ್ ಸೀಟುಗಳು ಖಾಲಿ ಇವೆ. ಈ ರೀತಿ ಸೀಟುಗಳು ಖಾಲಿ ಉಳಿದಿರುವುದು ಐದು ವರ್ಷಗಳಲ್ಲಿ ಇದೇ ಮೊದಲು. ಆದರೆ ದಂತವೈದ್ಯಕೀಯದ ಎಲ್ಲ ಸೀಟುಗಳು ಭರ್ತಿಯಾಗಿವೆ.
ವೈದ್ಯಕೀಯ ಸಮಾಲೋಚನ ಸಮಿತಿಯ (ಎಂಸಿಸಿ) ವರದಿಯ ಪ್ರಕಾರ, ಡೀಮ್ಸ್ ವಿ.ವಿ.ಗಳಲ್ಲಿ 824ಕ್ಕೂ ಹೆಚ್ಚು ಎಂಬಿಬಿಎಸ್ ಸೀಟುಗಳು ಭರ್ತಿಯಾಗಿಲ್ಲ. ಹಂಚಿಕೆ ಯಾದರೂ ಕಾಲೇಜಿಗೆ ಸೇರದ ಕಾರಣ ತಮಿಳುನಾಡಿನ ಖಾಸಗಿ ಸಂಸ್ಥೆಗಳಲ್ಲಿ 16 ಸೀಟುಗಳು ಖಾಲಿ ಉಳಿದಿವೆ. ತೆಲಂಗಾಣ, ಪಶ್ಚಿಮ ಬಂಗಾಲ ಮತ್ತು ರಾಜಸ್ಥಾನದಲ್ಲಿ ಬಹು ಸುತ್ತಿನ ಸಮಾಲೋಚನೆಗಳ ಅನಂ ತರವೂ ತಲಾ 100ಕ್ಕಿಂತ ಹೆಚ್ಚು ಸೀಟುಗಳು ಖಾಲಿ ಇರುವುದಾಗಿ ವರದಿ ಹೇಳಿದೆ.ಈ ನಡುವೆ ಡೀಮ್ಸ್ ವಿ.ವಿ.ಗಳ ಆಡಳಿತ ಮಂಡಳಿಗಳು ಈ ವರ್ಷ ಎಂಬಿಬಿಎಸ್ ಪ್ರವೇಶಕ್ಕಾಗಿ ಅರ್ಹತಾ ಕಟ್-ಆಫ್ ಅಂಕ ಗಳನ್ನು ಕಡಿಮೆ ಮಾಡುವಂತೆ ಮನವಿ ಮಾಡಿವೆ.










































