ಸುಳ್ಯ: ಮುರುಳ್ಯ ಗ್ರಾಮದಲ್ಲಿ ವಿವಾದಕ್ಕೆ ಗುರಿಯಾಗಿರುವ ಕುಮ್ಕಿ ಜಮೀನಿನಲ್ಲಿ ತಲೆತಲಾಂತರದಿಂದ ಆರಾಧಿಸಿಕೊಂಡು ಬರುತ್ತಿದ್ದ ರಕ್ತೇಶ್ವರಿ ದೈವ ಮತ್ತು ಪರಿವಾರ ದೈವಗಳ ಜಾಗವನ್ನು ಜಿಲ್ಲಾಧಿಕಾರಿಗಳು ವಕ್ಫ್ ಬೋರ್ಡ್‌ನ ಮುಸ್ಲಿಂ ದಫನ ಭೂಮಿಗೆ ಮಂಜೂರು ಮಾಡಿರುವುದನ್ನು ವಿರೋಧಿಸಿ, ಜಮೀನಿನ ವಾರಿಸುದಾರರಾದ ಶ್ರೀಮತಿ ಚೇತನಾ ರವರು ಇಂದು ತಹಶೀಲ್ದಾರ್‌ಗೆ ಆಕ್ಷೇಪಣಾ ಮನವಿ ಸಲ್ಲಿಸಿದ್ದಾರೆ.
ಮುಂದಿನ ಹಂತದ ಸರ್ವೆ ಮತ್ತು ಗಡಿ ಗುರುತು ಕಾರ್ಯವನ್ನು ಮಾಡಬಾರದು ಎಂದು ಆಕ್ಷೇಪಣೆಯಲ್ಲಿ ತಿಳಿಸಿದ್ದು, ಈ ಮನವಿಯನ್ನು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ.
ಈ ಸಂದರ್ಭದಲ್ಲಿ ಬೆಳ್ಳಾರೆ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಬಿಳಿಮಲೆ, ತಾರನಾಥ್ ಕೊಚ್ಚಿ, ಸುಳ್ಯ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಜಯನಗರ ಉಪಸ್ಥಿತರಿದ್ದು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.










































