ಸುಳ್ಯ : ಐವರ್ನಾಡಿನ ಎಸ್.ಸಿ ಕಾಲೋನಿ ರಸ್ತೆ ದುರಸ್ತಿಗೆ ಮನವಿ: ಸ್ಥಳ ಪರಿಶೀಲಿಸಿದ ಸಮಾಜ ಕಲ್ಯಾಣ ಅಧಿಕಾರಿಗಳು

Picture of Savistara

Savistara

Bureau Report

ಐವರ್ನಾಡು: ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಐವರ್ನಾಡು ನನ್ಯಡ್ಕ ಎಸ್.ಸಿ ಕಾಲೋನಿ ರಸ್ತೆ ಮತ್ತು ಐವರ್ನಾಡು ಮುಚ್ಚಿನಡ್ಕ ಎಸ್.ಸಿ ಕಾಲೋನಿ ರಸ್ತೆ ತೀರಾ ಹದಗೆಟ್ಟಿದ್ದು, ಇದನ್ನು ದುರಸ್ತಿಗೊಳಿಸುವಂತೆ ಸುಳ್ಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.ಮನವಿಯ ಮೇರೆಗೆ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯನ್ನು ಪರಿಶೀಲಿಸಿದ್ದು, ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲು ಶಿಫಾರಸ್ಸು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪಾಲೆಪ್ಪಾಡಿ ವಾರ್ಡ್ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ನಿವೃತ್ತ ಸೈನಿಕ ಗಣೇಶ್ ಭಜಂತಡ್ಕ ಮಡ್ತಿಲ, ಸಮಾಜ ಕಲ್ಯಾಣ ಅಧಿಕಾರಿಗಳಾದ ಕೃಷ್ಣ ಮತ್ತು ಪ್ರವೀಣ್, ಹಾಗೂ ಕಾಲೋನಿ ನಿವಾಸಿಗಳಾದ ಪ್ರಮೋದ್, ಶಿವಪ್ರಸಾದ್, ಗುರುಪ್ರಸಾದ್, ರಮೇಶ್, ಸಂದೇಶ್, ಪ್ರೇಮ, ಸುಶೀಲಾ ಮೊದಲಾದವರು ಉಪಸ್ಥಿತರಿದ್ದರು.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!