ರ‍್ಯಾಲಿ ವೇಳೆ ಅಂಗಡಿಗಳನ್ನು ಬಿಜೆಪಿ ‘ಬಲವಂತವಾಗಿ’ ಮುಚ್ಚಿಸಿದೆ: ರಾಹುಲ್ ಗಾಂಧಿ

Picture of Savistara

Savistara

Bureau Report

ನವದೆಹಲಿ: ಎಸ್‌ಐಆರ್ ವಿರೋಧಿಸಿ ನಡೆಯುತ್ತಿರುವ ‘ಚಲೋ ದೆಹಲಿ’ ರ‍್ಯಾಲಿ ವೇಳೆ ಕನೌಟ್ ಪ್ಲೇಸ್‌ನ ಅಂಗಡಿಗಳನ್ನು ಬಿಜೆಪಿ ‘ಬಲವಂತವಾಗಿ ಮುಚ್ಚಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ‘ಇಂಡಿಯಾ’ ಮೈತ್ರಿಕೂಟವು ಮಿಂಟೋ ರೋಡ್‌ಯಿಂದ ರಾಮಲೀಲಾ ಮೈದಾನದವರೆಗೆ ‘ಚಲೋ ದೆಹಲಿ’ ರ‍್ಯಾಲಿಯನ್ನು ಹಮ್ಮಿಕೊಂಡಿದೆ.ಈ ವೇಳೆ ರಾಹುಲ್ ಗಾಂಧಿ ಅವರು ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ‘ನಮ್ಮ ರ‍್ಯಾಲಿಯಲ್ಲಿ ಭಾಗವಹಿಸಲು ಬರುವ ಜನರು ಇಲ್ಲಿನ ಅಂಗಡಿಗಳಲ್ಲಿ ಖರೀದಿ ಮಾಡಬೇಕು. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎಂದು ನಾನು ಮನವಿ ಮಾಡಿದ್ದೆ. ಆದರೆ ಕನೌಟ್ ಪ್ಲೇಸ್ ತಲುಪಿದ ನಂತರ, ಬಿಜೆಪಿಯು ಅಲ್ಲಿನ ಎಲ್ಲ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದೆ ಎಂಬ ವಿಷಯ ನಮಗೆ ತಿಳಿಯಿತು. ಬಿಜೆಪಿ ನೇತೃತ್ವದ ಆಡಳಿತಾರೂಢ ಪಕ್ಷವು ಸಣ್ಣ ವ್ಯಾಪಾರಿಗಳಿಗೆ ಹೇಗೆ ನಷ್ಟ ಉಂಟುಮಾಡುತ್ತಿದೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ’ ಎಂದು ಹೇಳಿದ್ದಾರೆ.

ಶನಿವಾರ(ನ.31) ರಾತ್ರಿ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ವಿಡಿಯೊ ಹಂಚಿಕೊಂಡಿದ್ದ ರಾಹುಲ್ ಗಾಂಧಿ, ಚುನಾವಣಾ ಅಕ್ರಮಗಳ ವಿರುದ್ಧ ರ‍್ಯಾಲಿಗಾಗಿ ದೆಹಲಿಗೆ ಆಗಮಿಸುವ ‘ಇಂಡಿಯಾ’ ಮೈತ್ರಿಕೂಟದ ಕಾರ್ಯಕರ್ತರು ಮತ್ತು ಬೆಂಬಲಿಗರು ಹಬ್ಬದ ಋತುವಿನಲ್ಲಿ ಸ್ಥಳೀಯ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಿ ಅವರಿಗೆ ಬೆಂಬಲ ನೀಡಬೇಕೆಂದು ಕೋರಿದ್ದರು.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!