ಮಂಗಳೂರು – ಬೆಂಗಳೂರು ನಡುವೆ ವಾಣಿಜ್ಯ ಸಂಚಾರದಲ್ಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ “ಕಬಕ ಪುತ್ತೂರು” ನಿಲ್ದಾಣದಲ್ಲಿ ನಿಲುಗಡೆ ನೀಡಬೇಕೆಂದು ಗೌರವಾನ್ವಿತ ರೈಲ್ವೆ ಸಚಿವರಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟಅವರು ಮನವಿ ಮಾಡಿದ್ದರು. ಜೊತೆಗೆ ಪುತ್ತೂರು ಭಾಗದ ನಾಗರಿಕರು ಸಹ ಈ ಬಗ್ಗೆ ನಿರಂತರವಾಗಿ ಒತ್ತಾಯಿಸಿದ್ದರು.
ಈ ವಿನಂತಿಯನ್ನು ರೈಲ್ವೆ ಸಚಿವಾಲಯವು ಅನುಕೂಲವಾಗಿ ಪರಿಗಣಿಸಿ, ರೈಲ್ವೆ ಮಂಡಳಿಯು ಅಗತ್ಯ ಅಧಿಸೂಚನೆಯನ್ನು ಜಾರಿಗೊಳಿಸಿದೆ.ಇದರಿಂದ ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ವೇಗವಾಗಿ, ಆರಾಮದಾಯಕವಾಗಿ ಪ್ರಯಾಣಿಸುವ ಅವಕಾಶ ದೊರೆಯಲಿದೆ.
ಇದು ಪ್ರದೇಶದ ರೈಲು ಸಂಪರ್ಕ ವ್ಯವಸ್ಥೆಗೆ ಮಹತ್ವದ ಕೊಡುಗೆಯಾಗಿದೆ.ಈ ಜನಪರ ನಿರ್ಧಾರಕ್ಕಾಗಿ ಗೌರವಾನ್ವಿತ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಶ್ರೀ ವಿ. ಸೋಮಣ್ಣ, ರೈಲ್ವೆ ಸಚಿವಾಲಯ, ರೈಲ್ವೆ ಮಂಡಳಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.ಇದು ನಮ್ಮ ಜನರಿಗೆ ಹೆಮ್ಮೆಯ ಕ್ಷಣ ಮತ್ತು ಕರ್ನಾಟಕದ ಉತ್ತಮ ಸಂಪರ್ಕ ವ್ಯವಸ್ಥೆಯ ಕಡೆಗೆ ಸಾರ್ಥಕ ಹೆಜ್ಜೆಯಾಗಿದೆ.










































