ಹಾಲಿನ ದರ: ವಸೂಲಿ ಮಾಡ್ತಿರೋದು ₹12, ರೈತರಿಗೆ ₹7, ಉಳಿದ 5 ರೂ ನಿಮ್ಮ ಜೇಬಿಗಾ?; DKS ಗೆ Pratap Simha ಪ್ರಶ್ನೆ

Picture of Savistara

Savistara

Bureau Report

ಹಾಲಿನ ದರ ಏರಿಕೆಗೆ ಸಾರ್ವಜನಿಕರು ಆಕ್ರೋಶಗೊಂಡಿರುವ ಬೆನ್ನಲ್ಲೇ ದರ ಏರಿಕೆ ವಿಷಯದಲ್ಲೂ ಸರ್ಕಾರ ತಪ್ಪು ಮಾಹಿತಿ ನೀಡಿದ್ದು, ಹೇಳಿದ್ದಕಿಂತಲೂ ಹೆಚ್ಚು ಏರಿಕೆ ಮಾಡಿದೆ ಎಂಬ ಆರೋಪ ಕೇಳಿಬರುತ್ತಿದೆ.ಸರ್ಕಾರ ಘೋಷಣೆ ಮಾಡಿದ್ದ ದರಕ್ಕೂ ಮಾರುಕಟ್ಟೆ ದರಕ್ಕೂ ವ್ಯತ್ಯಾಸವಿದೆ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರ ನವೆಂಬರ್ 1ರಿಂದ ಅಂದರೆ ಇಂದಿನಿಂದಲೇ ಜಾರಿಗೆ ಬಂದಿದ್ದು, ಸರ್ಕಾರದ ಘೋಷಣೆಯ ಪ್ರಕಾರ ಹಾಲಿನ ದರ ಪ್ರತಿ ಲೀಟರ್‌ಗೆ ₹8 ಹಾಗೂ ಮೊಸರಿನ ದರ ₹14 ರೂ ಹೆಚ್ಚಳವಾಗಿದೆ.ಇನ್ನು ಇಂದು ಹೊಸ ದರಗಳು ಗ್ರಾಹಕರಿಗೆ ಶಾಕ್ ನೀಡಿದ್ದು, ಪ್ರತಿ ಲೀಟರ್ ಹಾಲಿಗೆ 8 ರೂ ಏರಿಕೆ ಎಂದು ಸರ್ಕಾರ ಹೇಳಿತ್ತು. ಆದರೆ ಪ್ರತೀ ಲೀಟರ್ ಹಾಲಿನ ದರ 12ರೂಗೆ ಏರಿಕೆಯಾಗಿದೆ ಎಂದು ಕೆಲ ಗ್ರಾಹಕರು ಆರೋಪಿಸಿದ್ದಾರೆ.

ಈ ವಿಷಯವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದು, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಬಗ್ಗೆ ಟ್ವೀಟ್ (ಎಕ್ಸ್) ಮಾಡಿರುವ ಪ್ರತಾಪ್ ಸಿಂಹ,ಹಾಲಿನ ಬೆಲೆ ಅರ್ಧ ಲೀಟರ್ ಗೆ ನಿನ್ನೆ 27 ರೂ. ಹಾಗೂ ಇಂದು 33 ರೂ!! ಅಲ್ಲಿಗೆ 8 ರೂ ಬದಲಿಗೆ 12 ರೂ ವಸೂಲಿ! ಎಂದು ಬರೆದಿದ್ದಾರೆ.ಇನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಸರ್ಕಾರದ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ಮಾಜಿ ಸಂಸದರು, 8 ರೂಪಾಯಿಗಳಲ್ಲಿ 7 ರೂ ರೈತರಿಗೆ ಕೊಡುತ್ತೇವೆ ಎಂದಿದ್ದೀರಲ್ಲಾ DK ಯವರೇ, 12 ರೂ ವಸೂಲಿ ಮಾಡಿ ರೈತರಿಗೆ 7 ರೂ ಕೊಟ್ಟು 5 ರೂ.ಗಳನ್ನು ನೀವೂ ಮತ್ತು ನಿಮ್ಮ ಸಂಪುಟ ಸಹೋದ್ಯೋಗಿಗಳು ಹಂಚಿಕೊಳ್ಳುತ್ತೀರಾ ಸಾರ್?! ಎಂದು ಪ್ರಶ್ನಿಸಿದ್ದಾರೆ.ಸರ್ಕಾರವನ್ನು ಪ್ರಶ್ನಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವು ಬಳಕೆದಾರರು ಹಾಲಿನ ದರ ಏರಿಕೆ ವಿಷಯದಲ್ಲಿ ವಿಪಕ್ಷ ಬಿಜೆಪಿ ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!