ನವದೆಹಲಿ: ಹಬ್ಬದ ಸಂದರ್ಭದಲ್ಲಿ ಆನ್‌ಲೈನ್ಖರೀದಿ, ಡಿಜಿಟಲ್ ಪಾವತಿ, ಪ್ರಯಾಣದ ಟಿಕೆಟ್ ಕಾಯ್ದಿರಿಸುವಿಕೆ ಹೆಚ್ಚುವುದರಿಂದ ಸೈಬರ್ ವಂಚನೆ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸೈಬರ್ ಭದ್ರತಾ ಸಂಸ್ಥೆ ಆರ್ಕ್ಟಿಕ್ ವುಲ್ಫ್ ಎಚ್ಚರಿಸಿದೆ.ರಿಯಾಯಿತಿ ಕೊಡುಗೆ, ಕೊರಿಯರ್ ವಿತರಣೆ, ಬ್ಯಾಂಕ್ ಎಚ್ಚರಿಕೆ, ಕೆವೈಸಿ ನವೀಕರಣ ಮತ್ತು ಖಾತೆ ಪರಿಶೀಲನೆಯ ಹೆಸರಿನಲ್ಲಿ ವಂಚಕರು ನಕಲಿ ಸಂದೇಶಗಳನ್ನು ಕಳುಹಿಸಬಹುದು. ಎಸ್ ಎಂಎಸ್, ವಾಟ್ಸ್ಆ್ಯಪ್, ಇಮೇಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ಸಂದೇಶಗಳು ಬರಬಹುದು ಎಂದು ಸಂಸ್ಥೆಯ ಭಾರತ
ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ದೇವೇಂದ್ರ ರಾಥ್ ತಿಳಿಸಿದ್ದಾರೆ.ಅಧಿಕೃತ ಆಪ್‌ಗಳ ಹೊರಗಿನಿಂದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಸುವ ಮೂಲಕವೂ ವಂಚನೆ ನಡೆಯಬಹುದು. ಇವು ವೈಯಕ್ತಿಕ ಮಾಹಿತಿ, ಪಾಸ್‌ವರ್ಡ್ ಮತ್ತು ಒಟಿಪಿಗಳನ್ನು ಕದಿಯುವ ಅಪಾಯವಿದೆ. ಬಹುಹಂತದ ದೃಢೀಕರಣ ಬಳಸುವುದು, ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯದಿರುವುದು, ಅಪರಿಚಿತ ಆ್ಯಪ್‌ಗಳನ್ನು ಇನ್ ಸ್ಟಾಲ್ ಮಾಡದಿರುವುದು ಹಾಗೂ ಪೇಮೆಂಟ್ ಸಂದೇಶಗಳ ಸತ್ಯಾಸತ್ಯತೆ ಪರಿಶೀಲಿಸುವುದು ಮುಖ್ಯಎಂದು ತಜ್ಞರು ಸಲಹೆ ನೀಡಿದ್ದಾರೆ.










































