ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಪೂರ್ತಿ ಪಿಕ್ಚರ್ ತೋರಿಸುತ್ತೇನೆ: ಎಚ್‌ಡಿಕೆ

Picture of Savistara

Savistara

Bureau Report

ಬೆಂಗಳೂರು: ‘ಕುಮಾರಸ್ವಾಮಿಯನ್ನು ಯಾರೂ ಮುಟ್ಟಲುಸಾಧ್ಯವಿಲ್ಲ. ನನ್ನನ್ನು ಅಷ್ಟು ಸುಲಭವಾಗಿ ಹೆದರಿಸಲು ಸಾಧ್ಯವಿಲ್ಲ. ಪೂರ್ತಿ ಪಿಕ್ಚ‌ರ್ ನಾನು ತೋರಿಸುತ್ತೇನೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಸರ್ಕಾರ, ಸರ್ಕಾರದ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ಯಾರಿಂದಲೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ನಾಳೆ (ಸೋಮವಾರ) ಬೆಳಿಗ್ಗೆ 11 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಹೇಳಿದರು.ಪ್ರಿಯಾಂಕ್ ಖರ್ಗೆ ಅವರು ‘ಪಿಕ್ಚರ್ ಅಭೀ ಬಾಕಿ ಹೆ’ ಎಂದಿದ್ದಾರೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ನಾಳೆ ಬೆಳಿಗ್ಗೆ ಬನ್ನಿ. ಪೂರ್ತಿ ಪಿಕ್ಟ‌ರ್ ತೋರಿಸುತ್ತೇನೆ. ಇದೆಲ್ಲಾ ಯಾವ ಟ್ರೇಲರ್? ನಾನು ಸಿನಿಮಾ ಮಾಡಿರೋನು. ಇವರು ಈಗ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಇವರ ಸಿನಿಮಾ ಬಗ್ಗೆ ನಾಳೆ ನಾನು ವಿವರವಾಗಿ ಹೇಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.ಪೊಲೀಸ್ ಕಮಿಷನರ್ ಅವರೇ ಹೇಳಿಕೆ ನೀಡಿದ್ದಾರೆ ಎಂದಾಗ, ‘ಯಾರದು ಕಮಿಷನ‌ರ್? ಅವರು ಕಮಿಷನ್ನರಾ? ತನಿಖೆ ಮುಗಿಯುವ ಮುನ್ನವೇ ಹೇಗೆ ಹೇಳಿಕೆ ನೀಡಿದರು. ಇದನ್ನು ತನಿಖೆ ಎನ್ನುತ್ತಾರಾ? ಹೆಡ್‌ಕ್ಲರ್ಕ್‌ಗಿಂತಲೂ ಕಡೆಯಾಗಿ ಮಾತನಾಡಿದ್ದಾನೆ. ಅದು ಯಾವ ತಿರುಗುಬಾಣ ಮತ್ತು ಯಾರಿಗೆ ತಿರುಗುಬಾಣವಾಗಿದೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯ ಸಮೇತ ವಿವರಿಸುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಅವರು ಕುರ್ಚಿ ಉಳಿಸಿಕೊಳ್ಳಲು ಏನೆಲ್ಲಾ ಮಾಡುತ್ತಿದ್ದಾರೆ, ಯಾರನ್ನು ಮೆಚ್ಚಿಸುತ್ತಿದ್ದಾರೆ, ಯಾರ ಮಾತನ್ನು ಕೇಳುತ್ತಿದ್ದಾರೆ ಎಂಬುದು ಎಲ್ಲವೂ ನನಗೆ ಗೊತ್ತಿದೆ. ಅದನ್ನೆಲ್ಲಾ ನಾಳೆ ಸುದ್ದಿಗೋಷ್ಠಿಯಲ್ಲಿ ತೆರೆದಿಡುತ್ತೇನೆ. ‘ಸ್ಟಿಂಗ್’ ವಿಡಿಯೊ ಮಾಡಿದವರನ್ನು ವಿದೇಶಕ್ಕೆ ಓಡಿಸಿದ್ದಾರೆ. ಮತ್ತೊಬ್ಬರು ಟಿ.ವಿಯಲ್ಲಿ ಕೂತು ಮಾತನಾಡುತ್ತಿದ್ದಾರೆ. ಅದನ್ನು ಹೊರಹಾಕಲೆಂದು ವಿಡಿಯೊ ಅಪ್‌ಲೋಡ್ ಮಾಡಿದವರ ಹಿಂದೆ ಬಿದ್ದಿದ್ದಾರೆ. ಏನು ಮಾಡುತ್ತಾರೋ ನೋಡೇಬಿಡುತ್ತೇನೆ’ ಎಂದು ಸವಾಲು ಹಾಕಿದರು.’ಈ ಸರ್ಕಾರ ಯಾರನ್ನೆಲ್ಲಾ ರಕ್ಷಣೆ ಮಾಡುತ್ತಿದೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಅವರು ಯಾಕೆ ತಡೆಯಾಜ್ಞೆ ತಗೊಂಡಿದ್ದಾರೆ? ಯತೀಂದ್ರ ಸಿದ್ದರಾಮಯ್ಯ ತಮ್ಮ ಪಕ್ಷದವರೇ ಸ್ಟಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂಬುದೂ ಗೊತ್ತಿದೆ. ನಾಳೆ ಎಲ್ಲವನ್ನೂ ತಿಳಿಸುತ್ತೇನೆ’ ಎಂದರು.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!