ಸುಳ್ಯ :ಕನಕಮಜಲು ಕೋಟ್ಯಂತರ ರೂ. ಅನುದಾನದ ರಸ್ತೆ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ

Picture of Savistara

Savistara

Bureau Report

ಕನಕಮಜಲು ಅ.26 ರಂದು ಮಾನ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಕನಕಮಜಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿತು.

ಗುದ್ದಲಿ ಪೂಜೆ ನಡೆದ ಕಾಮಗಾರಿಗಳು:

– ಪಂಜಿಗುಂಡಿ ಕಾಲೋನಿ ರಸ್ತೆ – ₹13 ಲಕ್ಷ

– ಅಕ್ಕಿಮಲೆ ಕಾಲೋನಿ ರಸ್ತೆ – ₹12 ಲಕ್ಷ

– ಕಣಜಾಲು ಬಾಳೆಹಿತ್ಲು ರಸ್ತೆ – ₹5.5 ಲಕ್ಷ

– ಬದಿಮೂಲೆ ಕುದ್ಕುಳಿ ರಸ್ತೆ – ₹5.5 ಲಕ್ಷ

– ಕಾರಿಂಜ ರಸ್ತೆ – ₹5.5 ಲಕ್ಷ

– ಜಾಲ್ಸೂರು ಕಲ್ಲಮುರ ಕದಿಕಡ್ಕ ಕೊರೆಕಾನ ರಸ್ತೆ – ₹10 ಲಕ್ಷ

ಉದ್ಘಾಟನೆಗೊಂಡ ಕಾಮಗಾರಿಗಳು:

– ಕನಕಮಜಲು ದೇರ್ಕಜೆ ರಸ್ತೆ – ₹20 ಲಕ್ಷ

– ಕೊರಂಬಡ್ಕ ಕಾಪಿಲ ರಸ್ತೆ – ₹15 ಲಕ್ಷ

– ರಿಕ್ಷಾ ತಂಗುದಾಣ – ₹3 ಲಕ್ಷ

– ಅಗೋಳ್ತೆ ಸೇತುವೆ – ₹15 ಲಕ್ಷ

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋಧ್ ಮೇನಾಲ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹೇಮಂತ್ ಮಠ, ಕಾರ್ಯದರ್ಶಿ ಸುದರ್ಶನ್ ಪಾತಿಕಲ್ಲು, ಶಕ್ತಿಕೇಂದ್ರ ಪ್ರಮುಖರಾದ ಚಂದ್ರಶೇಖರ, ಗೋಪಾಲಕೃಷ್ಣ ಭಟ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಧರ್ ಕುತ್ಯಾಳ, ಶಾರದಾ ಉಗ್ಗಮೂಲೆ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಕ.ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷರಾದ ವೆಂಕಪ್ಪ ದೇರ್ಕಜೆ, ಜಯರಾಮ ರೈ, ಶರತ್ ಐ.ಕೆ., ಕದಿಕಡ್ಕ ಮಾಧವ ಜಾಲ್ಸೂರು, ಗಣಪತಿ ಭಟ್ ಸೇರಿದಂತೆ ಬೂತ್ ಸಮಿತಿ ಅಧ್ಯಕ್ಷರುಗಳಾದ ಜಗನ್ನಾಥ ಮಾಣಿಮಜಲು, ಹರಿಪ್ರಸಾದ್ ಮಾಣಿಕೋಡಿ, ಕಾರ್ಯದರ್ಶಿಗಳಾದ ಸಂತೋಷ ನೆಡಿಲು, ಶ್ರೀಧರ ಅಡ್ಕಾರ್, ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ರಸ್ತೆ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ನಂತರ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಸನ್ಮಾನ: ರಿಕ್ಷಾ ತಂಗುದಾಣಕ್ಕೆ ಅನುದಾನ ನೀಡಿದ ಶಾಸಕರಿಗೆ ರಿಕ್ಷಾ ಚಾಲಕ-ಮಾಲಕ ಸಂಘದ ವತಿಯಿಂದ, ಅಗೋಳ್ತೆ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿದ ಶಾಸಕರಿಗೆ ಫಲಾನುಭವಿಗಳಿಂದ ಹಾಗೂ ಗ್ರಾಮದ ಅಭಿವೃದ್ಧಿಗೆ ಸಹಕರಿಸಿದ ಶಾಸಕರಿಗೆ ಗ್ರಾಮದ ಹಿರಿಯರಾದ ಪರಮೇಶ್ವರ ನರಿಯೂರು, ಗೋಪಾಲಕೃಷ್ಣ ಕುತ್ಯಾಳ, ಹರೀಶ ಮೂರ್ಜೆ, ರಾಮ್ ಪ್ರಸಾದ್ ಭಟ್, ನಾರಾಯಣ ಗೌಡ ಬೊಮ್ಮೆಟ್ಟಿ ಸೇರಿದಂತೆ ಶಕ್ತಿಕೇಂದ್ರ ಕನಕಮಜಲು ಹಾಗೂ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.

ಶಾಸಕರು ಸಭಾಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಕುದ್ದುಳಿ ಸ್ವಾಗತಿಸಿದರು, ಈಶ್ವರ ಕೊರಂಬಡ್ಕ ಕಾರ್ಯಕ್ರಮ ನಿರೂಪಿಸಿದರು.

ಅನಾರೋಗ್ಯಗೊಂಡ ಪಂಜಿಗುಂಡಿ ಯತೀಶರ ಮನೆಗೆ ಶಾಸಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿ 25 ಕೆ.ಜಿ ಅಕ್ಕಿ ನೀಡಿದರು.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!