ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಬೆಳ್ಳಾರೆಯ ಕು. ಧಾತ್ರಿ ಗೌಡ ಬಿ.ಕೆ.

Picture of Savistara

Savistara

Bureau Report

ಮೈಸೂರಿನ ಪ್ರತಿಷ್ಠಿತ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಮೇ 2026 ರಲ್ಲಿ ನಡೆಸಿದ ‘ಭರತನಾಟ್ಯ ಜೂನಿಯರ್’ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಬೆಳ್ಳಾರೆಯ ಧಾತ್ರಿ ಗೌಡ ಬಿ.ಕೆ. ಅವರು ಅತ್ಯುತ್ತಮ ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಧಾತ್ರಿ ಅವರು ಬೆಳ್ಳಾರೆಯ ‘ವೈಷ್ಣವಿ ನಾಟ್ಯಲಯ (ರಿ)’ ಶಾಲೆಯಲ್ಲಿ ಖ್ಯಾತ ನೃತ್ಯ ಗುರು ವಿದುಷಿ ಯೋಗಿಶ್ವರಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.

ಪ್ರಸ್ತುತ ಪುತ್ತೂರಿನ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು, ಬೆಳ್ಳಾರೆಯ ಕಿರಣ್ ಆಟೋವರ್ಕ್ಸ್ ಮಾಲಕರಾದ ಶ್ರೀ ಕಿರಣ್ ಕುಮಾರ್ ಹಾಗೂ ಶ್ರೀಮತಿ ಶೈನಿ ಕಿರಣ್ ದಂಪತಿಯ ಪುತ್ರಿ.

ಧಾತ್ರಿ ಅವರ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ನೃತ್ಯ ಗುರುಗಳು ಹಾಗೂ ಬಂಧು ಮಿತ್ರರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!