ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

Picture of Savistara

Savistara

Bureau Report

ಸುಳ್ಯ: ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಹಿಂದೂ ಕಾರ್ಯಕರ್ತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.ಮಾರ್ಚ್ ಅಂತ್ಯದೊಳಗೆ ಈ ಸ್ಥಳದಲ್ಲಿ ರಕ್ತೇಶ್ವರಿ ದೇಗುಲ ನಿರ್ಮಿಸಿ ಪ್ರತಿಷ್ಠಾ ಕಲಶೋತ್ಸವ ನಡೆಸುವ ಸಂಕಲ್ಪ ಕೈಗೊಳ್ಳಲಾಗಿದ್ದು, ಹಿಂದೂ ಸಮಾಜದ ಸಹಕಾರ ಅಗತ್ಯವಿದೆ ಎಂದು ಪ್ರಮುಖರು ತಿಳಿಸಿದರು.

ಈ ಗ್ರಾಮದಲ್ಲಿ 500 ಹಿಂದೂ ಕುಟುಂಬಗಳಿದ್ದು, ಉಳಿದ ಮುಸ್ಲಿಂ ಕುಟುಂಬಗಳಿವೆ. ಇಂತಹ ಗ್ರಾಮದಲ್ಲಿ ಶಾಂತಿ ಕಾಪಾಡುವುದು ಹಿಂದೂಗಳ ಕೆಲಸ ಮಾತ್ರವಲ್ಲ, ಮುಸ್ಲಿಮರೂ ಸ್ವಯಂಪ್ರೇರಿತವಾಗಿ ದೇವಿಯ ಸ್ಥಳವನ್ನು ನಮಗೆ ಬೇಡವೆಂದು ಅಧಿಕಾರಿಗಳಿಗೆ ತಿಳಿಸಿ ಹಿಂದೂ ಸಮಾಜದ ಭಾವನೆಗಳಿಗೆ ಸಹಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರೇ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿ ಈ ಜಾಗವನ್ನು ವಕ್ಫ್ ಬೋರ್ಡ್ ಗೆ ನೀಡಿರುವುದು ಕಂಡುಬಂದಿದ್ದು, ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಮೋಹನ್ ದಾಸ್ ಪಲ್ಲೋಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಕಿಶೋರ್ ಕುಮಾರ್ ಶಿರಾಡಿ ಅವರು, ತಕ್ಷಣ ಈ ಜಾಗವನ್ನು ವಕ್ಫ್ ಗೆ ನೀಡಿದ ಆದೇಶವನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಸಭೆಯನ್ನು ಉದ್ದೇಶಿಸಿ ವಿನಯ ಕುಮಾರ್ ಕಂದಡ್ಕ, ನವೀನ್ ನೆರಿಯ, ಲೋಕಯ್ಯ ಪರವ ಸೇರಿದಂತೆ ಹಲವರು ಮಾತನಾಡಿದರು. ಕಾನೂನಿನ ಮೊರೆ ಹೋಗುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಯಿತು.*ತಹಶೀಲ್ದಾರ್ ವಿರುದ್ಧ ಆಕ್ರೋಶ:* ಪ್ರತಿಭಟನಾ ಸಭೆಗೆ ಮನವಿ ಸ್ವೀಕರಿಸಲು ತಡವಾಗಿ ಆಗಮಿಸಿದ ತಹಶೀಲ್ದಾರ್ ವಿರುದ್ಧ ನೆರೆದ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ವಸಂತ ನಡುಬೈಲು ಸ್ವಾಗತಿಸಿ, ಅನೂಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಅನೂಪ್ ಬಿಳಿಮಲೆ ವಂದಿಸಿದರು.ಪ್ರತಿಭಟನಾ ಸಭೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ನ. ಸೀತಾರಾಮ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮನವೊಳಿಕೆ, ಪ್ರಮುಖರಾದ ಕೃಷ್ಣಪ್ರಸಾದ್ ಮಡ್ತಿಲ, ಹರೀಶ್ ಕಂಜಿಪಿಲಿ, ಪ್ರಸನ್ನ ಮಾಡ್ತ, ಸುಬೋದ್ ಶೆಟ್ಟಿ ಮೇನಾಲ, ದಿನೇಶ್ ಮೇದು ಸೇರಿದಂತೆ ಸಾವಿರಾರು ಹಿಂದೂ ಕಾರ್ಯಕರ್ತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!