​O’Clock History | ‘2 ಓ ಕ್ಲಾಕ್’, ‘3 ಓ ಕ್ಲಾಕ್’ ಎನ್ನುವಾಗ ಮಧ್ಯೆ ಬರುವ ಈ ‘O’ ಅಕ್ಷರ ಬಂದದ್ದು ಎಲ್ಲಿಂದ ಗೊತ್ತಾ?

Picture of Savistara

Savistara

Bureau Report

​ಬೆಂಗಳೂರು: ನಾವು ಇಂಗ್ಲಿಷ್‌ನಲ್ಲಿ ಸಮಯ ಹೇಳುವಾಗ ಸಾಮಾನ್ಯವಾಗಿ ‘2 O’clock’ ಅಥವಾ ‘3 O’clock’ ಎಂದು ಹೇಳುತ್ತೇವೆ. ಆದರೆ, ಕೇವಲ 2 ಕ್ಲಾಕ್ ಅಥವಾ 3 ಕ್ಲಾಕ್ ಎನ್ನದೆ, ಆ ಮಧ್ಯೆ ಬರುವ ‘O’ ಅಕ್ಷರ ಯಾಕೆ ಬಂತು ಮತ್ತು ಇದರ ಹಿಂದಿನ ರೋಚಕ ಇತಿಹಾಸ ಏನು ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ? ಇಲ್ಲಿದೆ ಆ ಕುತೂಹಲಕಾರಿ ಕಥೆ.​’O’ ಬಂದದ್ದು ಹೇಗೆ?:​

ಮಧ್ಯಕಾಲೀನ ಇತಿಹಾಸ: 14ರಿಂದ 15ನೇ ಶತಮಾನದ ‘ಮಿಡಲ್ ಇಂಗ್ಲಿಷ್’ ಕಾಲದಲ್ಲಿ ಯಾಂತ್ರಿಕ ಗಡಿಯಾರಗಳು ಹೊಸದಾಗಿ ಚಾಲ್ತಿಗೆ ಬಂದಿದ್ದವು.​

ಸೂರ್ಯನ ಸಮಯ vs ಗಡಿಯಾರ: ಅದಕ್ಕೂ ಮುನ್ನ ಜನರು ಸೂರ್ಯನ ಬೆಳಕು ಮತ್ತು ನೆರಳಿನ ಆಧಾರದ ಮೇಲೆ ಸಮಯ ತಿಳಿಯುತ್ತಿದ್ದರು. ಹೊಸ ಗಡಿಯಾರಗಳು ಬಂದಾಗ ಸೂರ್ಯನ ಸಮಯಕ್ಕೂ, ಯಾಂತ್ರಿಕ ಗಡಿಯಾರಕ್ಕೂ ವ್ಯತ್ಯಾಸವಿರುತ್ತಿತ್ತು.​

‘ಆಫ್ ದಿ ಕ್ಲಾಕ್’ ಪ್ರಯೋಗ: ಯಾಂತ್ರಿಕ ಗಡಿಯಾರದ ಸಮಯವನ್ನು ಸೂಚಿಸಲು ಆರಂಭದಲ್ಲಿ ‘Of the clock’ (ಗಡಿಯಾರದ ಪ್ರಕಾರ) ಎಂದು ಬಳಸುತ್ತಿದ್ದರು. ಅಂದರೆ ಸೂರ್ಯನ ಸಮಯವಲ್ಲದೆ, ಗಡಿಯಾರದ ಸಮಯ ಎಂದು ಹೇಳಲು ‘2 ಆಫ್ ದಿ ಕ್ಲಾಕ್’ ಎನ್ನಲಾಗುತ್ತಿತ್ತು.​

ಸಂಕ್ಷಿಪ್ತ ರೂಪ: ಕಾಲಕ್ರಮೇಣ ‘of’ ಪದವು ಬಳಕೆಯಲ್ಲಿ ಬಂದು ಬಂದು ಸಂಕ್ಷಿಪ್ತಗೊಂಡು ಕೇವಲ ‘O” ಅಷ್ಟೇ ಉಳಿಯಿತು. ಹಾಗಾಗಿ ಅದು ‘2 O’clock’ ಆಗಿ ಬದಲಾಯಿತು. ಸೂರ್ಯನ ಸಮಯ ನೋಡುವ ಪದ್ಧತಿ ನಿಂತು ಶತಮಾನಗಳೇ ಕಳೆದರೂ, ಈ ‘O’ ಕ್ಲಾಕ್ ಮಾತ್ರ ಇಂದಿಗೂ ಹಾಗೆಯೇ ಉಳಿದುಕೊಂಡಿದೆ.​

ಕಾಲು, ಅರ್ಧ ಗಂಟೆಗೆ ‘O’ ಬಳಸದಿರಲು ಕಾರಣ:

ಆರಂಭದಲ್ಲಿ ಆವಿಷ್ಕರಿಸಲಾದ ಗಡಿಯಾರಗಳಲ್ಲಿ ನಿಮಿಷದ ಮುಳ್ಳು ಇರಲಿಲ್ಲ, ಕೇವಲ ಗಂಟೆಯ ಮುಳ್ಳು ಮಾತ್ರ ಇರುತ್ತಿತ್ತು. ಹಾಗಾಗಿ ಪೂರ್ಣ ಗಂಟೆಗಳಿಗೆ ಮಾತ್ರ ‘O’ clock ಬಳಸಲಾಗುತ್ತಿತ್ತು. ನಂತರ ನಿಮಿಷದ ಮುಳ್ಳುಗಳು ಬಂದ ಬಳಿಕ ತ್ರೀ ಫಿಫ್ಟೀನ್ ಅಥವಾ ಕ್ವಾರ್ಟರ್ ಪಾಸ್ಟ್ ಥ್ರೀ ಎನ್ನಲು ಆರಂಭಿಸಲಾಯಿತು.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!