ರಾಷ್ಟೋತ್ಥಾನ ಉಡುಪಿಯ ಕಟ್ಟಡಗಳ ಲೋಕಾರ್ಪಣೆ… ಮಾತೃ ಭೂಮಿಯ ರಕ್ಷಣೆಗೆ ಪೇಜಾವರ ಶ್ರೀ ಕರೆ
ಉಡುಪಿ: ‘ವಿಶ್ವಗುರು ಹೇಳಿದರು ಬಹಳವಿಶಿಷ್ಟವಾದದ್ದು,ಅದನ್ನು ಸಾಕಾರಗೊಳಿಸಿ ಭಾರತವು ಜಗತ್ತಿಗೆ ಶಾಂತಿಯುತವಾಗಿ ಬದುಕುವುದನ್ನು ಕಲಿಸಬೇಕು” ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ನಿಕಟಪೂರ್ವ ಅಧ್ಯಕ್ಷ ಡಾ| ಎಸ್.ಸೋಮನಾಥ್ ಹೇಳಿದರು.ರಾಷ್ಟೋತ್ಥಾನ ಪರಿಷತ್ ಚೇರ್ಕಾಡಿ ಗ್ರಾಮದ ರಾಣಿ ಅಬ್ಬಕ್ಕ ರಸ್ತೆಯ ಕೇಶವನಗರದಲ್ಲಿ ಎ.30ರ ಸಂಜೆ ನಡೆದ ರಾಷ್ಟೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಕಟ್ಟಡಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಭಾರತವು ಯೋಗ, ಆಯುರ್ವೇದ, ವಿಜ್ಞಾನವನ್ನು, ಪ್ರಪಂಚಕ್ಕೆ ಮೆದುಳುಗಳನ್ನು ನೀಡಿದೆ, ಹೊಸ ಪೀಳಿಗೆ, ಯಾವುದನ್ನೂ ಬೇರೆಯವರಿಂದ ನಕಲು ಮಾಡಬೇಕಾಗಿಲ್ಲ.ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ಧಾರೆ ಎರೆಯಬೇಕಾಗಿದೆ. ಯುವ ಜನರಿಗೆ ತರಬೇತಿ ನೀಡಿ ಜಗತ್ತಿನ ಆಗ್ರ ರಾಷ್ಟ್ರವಾಗಿಸುವಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.ಶತಮಾನ ಗಳ ಹಿಂದೆಯೇ ನಮ್ಮಲ್ಲಿ ತಂತ್ರಜ್ಞಾನ ಗಳಿದ್ದವು. ಗಣಿತವಾಗಲಿ, ವಿಜ್ಞಾನವಾಗಲಿ, ಗೃಹಗಳ ಚಲನೆಯ ಕುರಿತಾಗಲಿ, ಆಯುಧಗಳಾಗಲಿ ಎಲ್ಲವನ್ನೂ ಬಲ್ಲವರು ನಮ್ಮಲ್ಲಿದ್ದರು. ಜಗತ್ತಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ನಮ್ಮಲ್ಲಿತ್ತು. ಆಕ್ರಮಣ ಗಳ ಮೇಲೆ ಆಕ್ರಮಣ ನಡೆದವು, ಭಾರತದ ತಂತ್ರಜ್ಞಾನವನ್ನು ನಾಶ ಮಾಡಲಾಯಿತು.ನಾವು ಬಡ ರಾಷ್ಟ್ರ ವಾಗಬೇಕಾಯಿತು ಎಂದರು.
‘ನಮ್ಮ 1000 ವರ್ಷಗಳ ಹಿಂದಿನದ್ದನ್ನು ನೆನಪಿಸಿಕೊಳ್ಳಬೇಕು. ಅದನ್ನು ಮಾಡದೇ ಹೋದಲ್ಲಿ ಮುಂದಿನ ಸಾವಿರ ವರ್ಷಗಳಿಗೆ ಪರಿಣಾಮ ಬೀರುತ್ತದೆ.ವಿಶ್ವದ ಅನೇಕ ಸಂಸ್ಕೃತಿಗಳು ಮರೆಯಾಗಿವೆ.ಶಿಕ್ಷಣದೊಂದಿಗೆ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದು ಡಾ । ಎಸ್. ಸೋಮನಾಥ್ ಕರೆ ನೀಡಿದರು.ಅಮೆರಿಕ ಬಹಳ ಹಿಂದೆಯೇ ಚಂದ್ರನ ಮೇಲೆ ಕಾಲಿಟ್ಟಿತ್ತು, ಮತ್ತೆ ನೀವು ಏಕೆ ಹೋದದ್ದು ಎಂದು ನಮ್ಮನ್ನು ಪ್ರಶ್ನಿಸಬಹುದು. ನಾವು ಜಗತ್ತಿನಲ್ಲೇ ಶ್ರೇಷ್ಠ ನಮ್ಮತನವನ್ನು ಮರುಸ್ಥಾಪಿಸು ಯತ್ನಿಸಲು ಚಂದ್ರನ ಮೇಲೆ ಕಡಿಮೆ ಬಜೆಟ್ ನಲ್ಲಿ ಕಾಲಿಟ್ಟು ಭಾರತದ ಶಕ್ತಿ ತೋರಿದ್ದೇವೆ.ಅದು ಬೇರೆ ದೇಶಗಳಿಗೆ ಸಾಧ್ಯವಾಗುತ್ತಿಲ್ಲ ಎಂದರು.
ಮಾತೃ ಭೂಮಿ ರಕ್ಷಣೆಗೆ ಕರೆಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರಾಷ್ಟೋತ್ಥಾನ ವಿದ್ಯಾಕೇಂದ್ರಗಳು ನೆಲದ ಸಂಸ್ಕೃತಿಯನ್ನು ಮಕ್ಕಳಿಗೆ ತುಂಬಬೇಕು. ಇಂದು ಶತ್ರು ದೇಶಕ್ಕೆ ಸ್ವಾಗತ ಕೋರುವ, ವಿಜಯ ಕೋರುವ ಜನಪ್ರತಿನಿಧಿಗಳನ್ನು ಕಾಣುತ್ತಿದ್ದೇವೆ ಎಂದರೆ ಇಂತಹ ಶಿಕ್ಷಣದ ಕೊರತೆಯ ಫಲ ಎಂದರು.ಪೋಷಕರು ವಿಶ್ವಾಮಿತ್ರನ ನೆಲೆಯಲ್ಲಿ ನಿಂತುಕೊಂಡು ನಿಮ್ಮ ಮಕ್ಕಳನ್ನು ವಿದ್ಯಾಕೇಂದ್ರಕ್ಕೆ ಕಳುಹಿಸಿಕೊಡಿ, ಮಾತೃ ಭೂಮಿಯ ದೊಡ್ಡ ಸೇವೆ ಆಗುವ ಅಗತ್ಯವಿದೆ.ದಶರಥ ರಾಮ ನನ್ನು ವಿಶ್ವಾಮಿತ್ರರೊಂದಿಗೆ ಕಳುಹಿಸಿ ಸಹಸ್ರ ರಕ್ಕಸರ ಅಂತ್ಯಕ್ಕೆ ಕಾರಣವಾಗಿದ್ದ ಎಂದರು.
ಕೃಷ್ಣನ ಬಳಿ ಪೂತನಿ ಅಪ್ಸರೆಯ ರೂಪ ತೊಟ್ಟು ಬಂದಿದ್ದಳು. ಕೆಲ ಶಿಕ್ಷಣದ ಸಂಸ್ಥೆಗಳು ನಮ್ಮ ಮಕ್ಕಳನ್ನು ಪೂತನಿಯೋಪಾದಿಯಲ್ಲಿ ಸೆಳೆಯುತ್ತಿವೆ. ದೇಶ ಪ್ರೇಮದ ಶಿಕ್ಷಣ ಸಿಗುತ್ತಿಲ್ಲ. ಮಕ್ಕಳನ್ನು ದೇಶದ ಅಂತಃಸತ್ವ ಕುಗ್ಗುತ್ತಿದೆ, ಅದನ್ನು ಎದುರಿಸುವ ದೊಡ್ಡ ಸಮಾಜ ನಿರ್ಮಾಣ ಆದರೆ ಮಾತ್ರ ದೇಶಕ್ಕೆ ಉಳಿಗಾಲ. ಇಲ್ಲಿನ ನೆಲ ಜಲ, ಆಚಾರ ವಿಚಾರ, ನಡೆ ನುಡಿ ವೇಷ ಭೂಷಣ, ಇಲ್ಲಿನ ಜನ ಇಲ್ಲಿನ ಕಲೆ ಅದೆಲ್ಲರ ರಕ್ಷಣೆ ಆದರೆ ಮಾತೃ ಭೂಮಿಯ ರಕ್ಷಣೆ ಸಾಧ್ಯ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ನಮ್ಮ ಸಂಸ್ಕೃತಿಯ, ರಾಷ್ಟ್ರ ಜಾಗೃತಿ ಮೂಡಿಸುವ ಶಿಕ್ಷಣದ ಅಗತ್ಯ ಇದೆ ಎಂದರು.ಪರಿಷತ್ ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಸಂಚಾಲನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಕಾರ್ಯದರ್ಶಿ ಋಷಿರಾಜ್, ಸಂಚಾಲಕ ವಸಂತ ಕುಮಾರ್, ಪ.ಪೂ. ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್, ವಿದ್ಯಾ ಕೇಂದ್ರ ಪ್ರಾಂಶುಪಾಲೆ ಪೂರ್ಣಿಮಾ, ಆಡಳಿತ ಸುರೇಶ್ ಶೆಣೈ, ಭಾರತೀಶ್ ಡಾ.ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಟ್ಟಡಗಳ ವಾಸ್ತುಪೂಜೆ ನಡೆಯಿತು. ಬೆಳಗ್ಗೆ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ಕಟ್ಟಡಗಳ ಗೃಹಪ್ರವೇಶ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.













































