ನವದೆಹಲಿ: ಎಥನಾಲ್ ಮಿಶ್ರಿತ ಇ20 ಪೆಟ್ರೋಲ್ ವಿರೋಧಿಸಿ,ಸಾರ್ವಜನಿಕರು ಸಹಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು, ಪ್ರಧಾನಮಂತ್ರಿಗಳ ನಿವಾಸಕ್ಕೆ 100 ಜನರೊಂದಿಗೆ ಮಂಗಳವಾರದಂದು (ಆಗಸ್ಟ್ 4) ತೆರಳಲಾಗುವುದು ಎಂದು ಆಮ್‌ಆದ್ಮ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರವಾಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರವಾಲ್, ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದಿಂದ ನಮ್ಮ ಮೇಲೆ ಇ20ಯನ್ನು ಹೇರ ಲಾಗುತ್ತಿದೆ. ಅಮೆರಿಕದಿಂದ ಎಥನಾಲ್ ಖರೀದಿಸಲು ಟ್ರಂಪ್ ಅವರಿಗೆ ಭಾರತ ವನ್ನು ಬಲಿ ನೀಡಲಾಗಿದೆ. ಪೆಟ್ರೋಲ್‌ಗೆ ಎಥನಾಲ್ ಮಿಶ್ರಣ ಮಾಡುವುದು ಮತ್ತು ಅದನ್ನು ಬಳಸುವಂತೆ ನಮ್ಮನ್ನು ಒತ್ತಾಯಿಸುತ್ತಿರುವುದು, ಇದರ ಹಿಂದಿನ ಉದ್ದೇಶ ಬೇರೆಯೇ ಇದೆ ಎಂಬುದನ್ನು ಸೂಚಿಸುತ್ತದೆ. ಅಮೆರಿಕದಿಂದ ಎಥನಾಲ್ ಖರೀದಿ ಸುವಂತೆ ಟ್ರಂಪ್ ಅವರು ಮೋದಿ ಮೇಲೆ ಒತ್ತಡ ಹೇರಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.’ನಾಳೆ ನೂರು ಮಂದಿಯೊಂದಿಗೆ ಪ್ರಧಾನಿ ನಿವಾಸಕ್ಕೆ ಹೋಗುತ್ತೇನೆ. ಇ20 ವಿರೋಧಿಸಿ ಸಾರ್ವಜನಿಕರು ಸಹಿ ಮಾಡಿದ ಅರ್ಜಿಗಳನ್ನು ಪ್ರಧಾನಿಗೆ ಹಸ್ತಾಂತರಿಸುತ್ತೇನೆ. ಪೆಟ್ರೋಲ್‌ಗೆ ಎಥನಾಲ್ ಮಿಶ್ರಣ ಮಾಡುವುದರ ಕುರಿತ ಸಮಸ್ಯೆಗಳನ್ನು ಚರ್ಚಿಸುತ್ತೇನೆ. ಇ20ಯಿಂದ ಜನರು ವಾಹನಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂದರೆ ಇದರ ಹಿಂದಿನ ಉದ್ದೇಶ ಬೇರೆಯೇ ಇದೆ’ ಎಂದರು.’ಇ20 ಕುರಿತು ಚರ್ಚಿಸಲು ಸಮಯ ನಿಗದಿಪಡಿಸುವಂತೆ ಕೋರಿ ಪ್ರಧಾನಿ ಕಚೇರಿಗೆ ಕಳೆದ ತಿಂಗಳು ಸಲ್ಲಿಸಿದ್ದ ಮನವಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಹೇಳಿದರು.
‘ಪೆಟ್ರೋಲ್‌ಗೆ ಇ20 ಮಿಶ್ರಣ ಮಾಡುವುದರ ವಿರುದ್ಧ ನಾವು ಹಮ್ಮಿಕೊಂಡಿದ್ದ ಅಭಿಯಾನದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಸಹಿ ಮಾಡಿದ್ದಾರೆ’ ಎಂದು ಕೇಜ್ರವಾಲ್ ಹೇಳಿದರು.
ಗಡ್ಕರಿ ಮನೆಗೆ ಮುತ್ತಿಗೆ ಯತ್ನ ಯುವ ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆನಾಗುರ: ಪೆಟ್ರೋಲ್‌ಗೆ 220 ಮಿಶ್ರಣ ಮಾಡುವುದನ್ನುವಿರೋಧಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಮಹಾರಾಷ್ಟ್ರದ ನಾಗುರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನವನ್ನು ವಿಫಲಗೊಳಿಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದರು.
ಸಚಿವರ ಮನೆ ಮುಂದೆ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಬ್ಯಾರಿಕೇಡ್ ಹತ್ತಿ ಮನೆಗೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ಯತ್ನಿಸಿದರು.








































