ಭ್ರಷ್ಟರಿಗೆ ಪಟ್ಟ, ಮಹಿಳೆಯರಿಗಿಲ್ಲ ಅವಕಾಶ: ಡಿಕೆಶಿ ಸಂಪುಟದ ವಿರುದ್ಧ BJP ಕಿಡಿ

Picture of Savistara

Savistara

Bureau Report

ಬೆಂಗಳೂರು: ಮಹಿಳೆಯರ ಬಗ್ಗೆ ಭಾಷಣ ಮಾಡುವ ನೀವು,ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧ ಮಾಡಿದ್ದೀರಿ, ಈಗ ಸಂಪುಟದಲ್ಲಿ ಒಬ್ಬರೇ ಒಬ್ಬ ಮಹಿಳೆಗೆ ಸಚಿವ ಸ್ಥಾನ ನೀಡಿಲ್ಲ, ಇದೇನಾ ಮಹಿಳೆಯರ ಬಗ್ಗೆ ನಿಮಗಿರುವ ಕಾಳಜಿ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಎರಡು ತಿಂಗಳು ಹೈಕಮಾಂಡ್ ಮನೆ ಬಾಗಿಲು ಕಾದು ಕೊನೆಗೂ ಭ್ರಷ್ಟಾಚಾರ ಆರೋಪ ಹೊತ್ತಿರುವವರು, ಪಬ್‌ಗಳಲ್ಲಿ ಗಲಾಟೆ ಮಾಡಿರುವವರು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯದವರಿಗೆ ಮಂತ್ರಿ ಸ್ಥಾನ ಕೊಟ್ಟು ರಾಜ್ಯದ ಜನತೆಗೆ ಒಂದು ಅದ್ಭುತ ಸಚಿವ ಸಂಪುಟ ಮಾಡಿದ್ದೀರಿ’ ಎಂದು ಕುಟುಕಿದ್ದಾರೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹183 ಕೋಟಿ ಹಗರಣದಲ್ಲಿ ಭಾಗಿಯಾಗಿ, ಜೈಲಿಗೆ ಹೋಗಿ ಬಂದವರು, ನ್ಯಾಯಾಲಯಕ್ಕೆ ಸಾವಿರ ಪುಟದಷ್ಟು ಆರೋಪಪಟ್ಟಿ ಸಲ್ಲಿಕೆಯಾದವರನ್ನು ಸಚಿವರಾನ್ನಾಗಿ ಮಾಡಿಕೊಂಡಿದ್ದೀರಿ. ಇದು ಭ್ರಷ್ಟಾಚಾರಕ್ಕೆ ನಿಮ್ಮ ಸರ್ಕಾರದ ಸಮ್ಮತಿಯಿದೆ ಎನ್ನುವುದು ತೋರಿಸುತ್ತದೆ ಎಂದಿದ್ದಾರೆ.ಇನ್ನೂ ಒಂದು ಸಾಧನೆ ಅಂದ್ರೆ 8 ಜಿಲ್ಲೆಗಳಿಗೆ ಒಂದೇ ಒಂದು ಸಚಿವ ಸ್ಥಾನ ನೀಡದಿರುವುದು. ಎಂಟು ಜಿಲ್ಲೆಗಳಲ್ಲಿ ಸಚಿವನಾಗುವ ಅರ್ಹತೆ ಹೊಂದಿರುವ ಒಬ್ಬನೇ ಒಬ್ಬ ಸಮರ್ಥ ವ್ಯಕ್ತಿ ಸಿಗಲಿಲ್ಲವೇ ನಿಮಗೆ?. ಎಐಸಿಸಿ ಅಧ್ಯಕ್ಷರು ತಮ್ಮ ಜಿಲ್ಲೆಯ ಮೂವರನ್ನು ಸಚಿವರಾನ್ನಾಗಿ ಮಾಡಿದ್ದಾರೆ. ಪಕ್ಕದ ಯಾದಗಿರಿ, ರಾಯಚೂರು, ವಿಜಯನಗರ ಕಾಣಿಸಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮಹಿಳಾ ವಿರೋಧಿ, ಭ್ರಷ್ಟಾಚಾರ ಪೋಷಣೆ ಮಾಡುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಜನ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೇಮೆಂಟ್ ಕೊಟ್ರೆ ಸಾಕು ಸಚಿವರ ಪಟ್ಟಿಯಲ್ಲಿ ಹೆಸರು

ಭ್ರಷ್ಟ ಕಾಂಗ್ರೆಸ್ ಹೈಕಮಾಂಡ್‌ಗೆ ಪೇಮೆಂಟ್ ಕೊಟ್ರೆ ಸಾಕು ಸಚಿವರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಗುತ್ತೆ. ಅದಕ್ಕೊಂದು ಉದಾಹರಣೆ.

ಎಸ್.ಎಸ್ ಮಲ್ಲಿಕಾರ್ಜುನ

ಮಧ್ಯಾಹ್ನದವರೆಗೆ ಮಂಕಾಳ ವೈದ್ಯ ಹೆಸರು ಮೊದಲ ಪಟ್ಟಿಯಲ್ಲಿತ್ತು. ಮಧ್ಯಾಹ್ನದ ನಂತರ ಮಂಕಾಳ ವೈದ್ಯ ಹೆಸರು ಡಿಲಿಟ್ ಆಗಿ ಎಸ್.ಎಸ್ ಮಲ್ಲಿಕಾರ್ಜುನ ಹೆಸರು ಸೇರ್ಪಡೆ ಆಗಿದೆ ಎಂದು ಬಿಜೆಪಿ ಕುಟುಕಿದೆ.

[t4b-ticker]
error: Content is protected !!