ಗಾಜಾದಿಂದ ಹಿಂದೆ ಸರಿಯುವ ಅಮೆರಿಕದ ನಿರ್ಧಾರಕ್ಕೆ ನಾವು ಒಪ್ಪಿಲ್ಲ ಎಂದ ಇಸ್ರೇಲ್

Picture of Savistara

Savistara

Bureau Report

ಜೆರುಸಲೆಮ್: ಗಾಜಾದಿಂದ ಹಿಂದೆ ಸರಿಯುವ ಅಮೆರಿಕದನಿರ್ಧಾರಕ್ಕೆ ನಾವು ಒಪ್ಪಿಗೆ ನೀಡಿಲ್ಲ. ಹಮಾಸ್ ನಿಶ್ಯಸ್ತ್ರೀಕರಣಗೊಂಡಿದೆ ಎಂದು ನಮಗೆ ಖಾತರಿಯಾದ ನಂತರವೇ ನಾವು ಇಲ್ಲಿಂದ ಹಿಂದೆ ಸರಿಯುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ನೆತನ್ಯಾಹು, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ತಂಡವೊಂದು, ಹಮಾಸ್ ನಿಶ್ಯಸ್ತ್ರೀಕರಣವನ್ನು ಸಾಧಿಸಬಲ್ಲೆವು ಎಂದು ನಾವು ನಂಬುತ್ತೇವೆ ಎಂದು ಹೇಳಿದೆ. ಆ ಕುರಿತು ಅವರು ನಮಗೆ ಕರಡನ್ನು ಕಳುಹಿಸಿದ್ದು, ನಾವು ಅದನ್ನು ಪರಿಶೀಲನೆ ನಡೆಸುತ್ತಿದ್ದೇವೆ. ನಾವು ಅದಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ, ನಮ್ಮ ಅಭಿಪ್ರಾಯಗಳನ್ನು ಅವರಿಗೆ ತಿಳಿಸಿದ್ದೇವೆ’ ಎಂದು ಹೇಳಿದ್ದಾರೆ.ಬೆಂಜಮಿನ್‌ ನೆತನ್ಯಾಹು ಅವರು ಅಮೆರಿಕ ಬೆಂಬಲಿತ ಶಾಂತಿ ಮಂಡಳಿಯನ್ನು ಸೋಮವಾರ(ಆ.3) ಭೇಟಿ ಮಾಡಿದ್ದರು.ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ನಂತರವಷ್ಟೇ ಇಸ್ರೇಲಿ ಸೇನೆಯು ಗಾಜಾದಲ್ಲಿನ ತನ್ನ ಪ್ರಸ್ತುತ ನೆಲೆಗಳಿಂದ ಹಿಂದೆ ಸರಿಯುತ್ತದೆ ಎಂದು ಶಾಂತಿ ಮಂಡಳಿಯೊಂದಿಗಿನ ಸಭೆಯಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದ್ದಾರೆ.

ಗಾಜಾದಿಂದ ಇಸ್ರೇಲ್ ಸೇನೆ ಹಿಂದೆ ಸರಿಯುವ ಒಪ್ಪಂದವನ್ನು ತಿರಸ್ಕರಿಸುವಂತೆ ನೆತನ್ಯಾಹು ಮೇಲೆ ಅವರ ಮೈತ್ರಿಕೂಟದಲ್ಲಿರುವ ಬಲಪಂಥೀಯರು ಒತ್ತಡ ಹೇರುತ್ತಿದ್ದಾರೆ.

[t4b-ticker]
error: Content is protected !!