ಸುಳ್ಯ: ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ, ಆರ್ಥಿಕ ಪಾರದರ್ಶಕತೆ ಮತ್ತು ಗುತ್ತಿಗೆ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿರುವ ಗೊಂದಲಗಳಿಗೆ ಸ್ಪಷ್ಟನೆ ಕೋರಿ ಆ.15ರಂದು ಸಾರ್ವಜನಿಕ ಸಭೆ ಕರೆಯಬೇಕು ಎಂದು ಒತ್ತಾಯಿಸಿ ಸೋಮವಾರ ಭಕ್ತಾದಿಗಳು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯವೈಖರಿ ಮತ್ತು ಹಣಕಾಸಿನ ವ್ಯವಹಾರಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಗಂಭೀರ ಊಹಾಪೋಹಗಳು ಹಾಗೂ ಗೊಂದಲಗಳು ಉಂಟಾಗಿವೆ. ಈ ಬಗ್ಗೆ ಸಾರ್ವಜನಿಕರಿಗೆ ಪಾರದರ್ಶಕವಾದ ಸ್ಪಷ್ಟನೆ ಸಿಗಬೇಕಾಗಿದ್ದು,ಈ ಪತ್ರ ತಲುಪಿದ 13 ದಿನಗಳ ಒಳಗೆ (ಅಂದರೆ ಆಗಸ್ಟ್ 15, 2026 ಶನಿವಾರ) ಸಾರ್ವಜನಿಕ ಸಭೆಯನ್ನುಕರೆದು ಈ ಕೆಳಗಿನ ವಿಷಯಗಳಿಗೆ ಸೂಕ್ತ ಉತ್ತರ ನೀಡಬೇಕಾಗಿ ಆಗ್ರಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಪ್ರಮುಖ ಪ್ರಶ್ನೆಗಳು ಮತ್ತು ಸ್ಪಷ್ಟನೆ ಕೋರಿಕೆ:
1. ಆಚಾರ-ವಿಚಾರಗಳಲ್ಲಿ ಲೋಪದೋಷ:ದೇವಸ್ಥಾನದ ದಿನನಿತ್ಯದ ಆಚಾರ-ವಿಚಾರಗಳಲ್ಲಿ ಮತ್ತು ಪೂಜಾ ಕಾರ್ಯಗಳಲ್ಲಿ ಮೇಲ್ನೋಟಕ್ಕೆಲೋಪದೋಷಗಳು ಕಂಡುಬರುತ್ತಿದ್ದು, ಸಂಪ್ರದಾಯಬದ್ಧವಾಗಿ ನಡೆಯುತ್ತಿದ್ದ ಪೂಜಾ ವಿಧಿವಿಧಾನಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ. ಈ ಬಗ್ಗೆ ಧಾರ್ಮಿಕ ಸ್ಪಷ್ಟನೆ ನೀಡಬೇಕು.
2.ಸಾಲದ ಮತ್ತು ಲೆಕ್ಕಪತ್ರದ ವಿವರ:ಪ್ರಸ್ತುತ ನಮ್ಮ ದೇವಸ್ಥಾನವು ಸಾಲದ ಸುಳಿಯಲ್ಲಿದೆಯೇ? ಹಾಗಿದ್ದರೆ, ಯಾರಿಂದ ಎಷ್ಟು ಮೊತ್ತದ0ಸಾಲವನ್ನು ಪಡೆಯಲಾಗಿದೆ? ಆ ಸಾಲವನ್ನು ಯಾವ ಉದ್ದೇಶಕ್ಕಾಗಿ ವಿನಿಯೋಗಿಸಲಾಗಿದೆ? ಇದರಸಂಪೂರ್ಣ ಲೆಕ್ಕಪತ್ರವನ್ನು ಸಾರ್ವಜನಿಕರಿಗೆ ಒದಗಿಸಬೇಕು.
3. ನಿಶ್ಚಿತ ಠೇವಣಿಗಳ (Fixed Deposits) ವಿವರ:ತಾವು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಹಾಗೂ ಅಧ್ಯಕ್ಷರಾಗಿ ನಿಯೋಜನೆಗೊಂಡಾಗದೇವಸ್ಥಾನದ ಹೆಸರಿನಲ್ಲಿ ಎಷ್ಟು ನಿಶ್ಚಿತ ಠೇವಣಿ (FD) ಇತ್ತು? ಪ್ರಸ್ತುತ ಬ್ಯಾಂಕುಗಳಲ್ಲಿ ಎಷ್ಟು ಠೇವಣಿಬಾಕಿ ಉಳಿದಿದೆ? ಠೇವಣಿ ಹಣವನ್ನು ಹಿಂಪಡೆದಿದ್ದರೆ, ಯಾವ ಕಾರಣಗಳಿಗಾಗಿ ಹಿಂಪಡೆಯಲಾಗಿದೆಮತ್ತು ಯಾವುದಕ್ಕೆ ವಿನಿಯೋಗ ಮಾಡಲಾಗಿದೆ ಎಂಬುದರ ಲೆಕ್ಕದ ವಿವರ ನೀಡಬೇಕು.
4. ಸೇವಿಂಗ್ಸ್ ಬ್ಯಾಂಕ್ (SB) ಖಾತೆಯ ಜಂಟಿ ಸಹಿ (Joint Signatories) ವಿಷಯ:ದೇವಸ್ಥಾನದ ಹೆಸರಿನಲ್ಲಿರುವ ಉಳಿತಾಯ ಖಾತೆಯಿಂದ (SB Account) ಹಣವನ್ನು ಹಿಂಪಡೆಯಲು(Withdrawal) ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ,1997 ನಿಯಮಾವಳಿಗಳಂತೆ ಇಬ್ಬರು ಅಥವಾ ಮೂವರ ಜಂಟಿ ಸಹಿ (Co-signatories | JointSignatures) ಇರುವುದು ಕಡ್ಡಾಯವಾಗಿದೆ. ಆದರೆ, ಪ್ರಸ್ತುತ ಅಧ್ಯಕ್ಷರೊಬ್ಬರ ಏಕಪಕ್ಷೀಯ ಸಹಿಯಿಂದಲೇಹಣ ಹಿಂಪಡೆಯಲಾಗುತ್ತಿದೆ ಎಂಬ ಮಾಹಿತಿ ಇದೆ. ಟ್ರಸ್ಟಿಗಳು ಮತ್ತು ಆಡಳಿತ ಮಂಡಳಿ ಅಸ್ತಿತ್ವದಲ್ಲಿದ್ದರೂಜಂಟಿ ಸಹಿಯ ನಿಯಮವನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ವ್ಯವಹಾರ ನಡೆಸುತ್ತಿರುವುದು ಏಕೆ? ಈ0ಕುರಿತು ಸೂಕ್ತ ಉತ್ತರ ನೀಡಬೇಕು.
5. ಸಿಬ್ಬಂದಿಗಳ ವಜಾ:ದೇವಸ್ಥಾನದ ಕೆಲವು ಸಿಬ್ಬಂದಿಗಳನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿದೆ. ಯಾವ ಸಿಬ್ಬಂದಿಗಳನ್ನುತೆಗೆಯಲಾಗಿದೆ ಎಂಬುದು ತಮಗೆ ತಿಳಿದೇ ಇದೆ. ಆದರೆ, ಯಾವ ಕಾರಣಕ್ಕಾಗಿ ಅವರನ್ನು0ವಜಾಗೊಳಿಸಲಾಗಿದೆ? ಇದರ ಹಿಂದಿನ ಮುಖ್ಯ ಕಾರಣಗಳನ್ನು ಸಾರ್ವಜನಿಕ ವಲಯದಲ್ಲಿ ಬಹಿರಂಗಪಡಿಸಬೇಕು.
6. ತೋಟದ ಗುತ್ತಿಗೆ (Lease) ಮತ್ತು ಕಾನೂನು ಬಾಹಿರ ಜಾಹೀರಾತು:ದೇವಸ್ಥಾನಕ್ಕೆ ಸೇರಿದ ತೋಟವನ್ನು ಗುತ್ತಿಗೆ ನೀಡುವ ಸಂಬಂಧ ಇತ್ತೀಚೆಗೆ ಪತ್ರಿಕೆಗಳಲ್ಲಿ ಜಾಹೀರಾತುನೀಡಲಾಗಿದೆ. ಆದರೆ ಆ ಜಾಹೀರಾತಿನಲ್ಲಿ ಯಾವುದೇ ‘ಆಡಳಿತ ಮಂಡಳಿಯ ನಿರ್ಣಯ ಸಂಖ್ಯೆ’ನಮೂದಿಸಿಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ,1997 ಯಾವ ಕಾಯ್ದೆ/ನಿಯಮ (Section/Clause) ಪ್ರಕಾರ ಈ ಗುತ್ತಿಗೆ ಪ್ರಕ್ರಿಯೆ ನಡೆಸಲಾಗುತ್ತಿದೆ?ದತ್ತಿ ಇಲಾಖೆಯ ಅನುಮತಿಧೆಯೇ? ಇದು ಮೇಲ್ನೋಟಕ್ಕೆ ಕಾನೂನು ಬಾಹಿರ ನಿರ್ಧಾರದಂತೆಕಾಣುತ್ತಿದ್ದು, ಈ ಬಗ್ಗೆ ಸಾರ್ವಜನಿಕ ವಲಯಕ್ಕೆ ಸ್ಪಷ್ಟನೆ ನೀಡಬೇಕು.
7. ಏಕಪಕ್ಷೀಯ ನಿರ್ಣಯಗಳ ಬಗ್ಗೆ:ದೇವಸ್ಥಾನದ ಒಮ್ಮತದಿಂದಎಲ್ಲಾ ನಿರ್ಣಯಗಳನ್ನು ಟ್ರಸ್ಟಿಗಳ ಸಮ್ಮುಖದಲ್ಲಿ ಸಭೆ ನಡೆಸಿ ತೆಗೆದುಕೊಳ್ಳಲಾಗುತ್ತಿದೆಯೇ ಅಥವಾ ಅಧ್ಯಕ್ಷರಾದ ತಾವು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುತ್ತಿದ್ದೀರಾ?ಉದಾಹರಣೆಗೆ, ಇತ್ತೀಚೆಗೆ ದೇವಸ್ಥಾನದ ತೋಟವನ್ನು ಗುತ್ತಿಗೆಗೆ (Lease) ನೀಡುವ ಬಗ್ಗೆ ಪತ್ರಿಕೆಗಳಲ್ಲಿಜಾಹೀರಾತು ನೀಡಲಾಗಿದೆ. ಆದರೆ ಆ ಜಾಹೀರಾತಿನಲ್ಲಿ ಯಾವುದೇ ‘ನಿರ್ಣಯ ಸಂಖ್ಯೆ’ ನಮೂದಿಸಿಲ್ಲ. ಇದುಏಕಪಕ್ಷೀಯ ನಿರ್ಧಾರವೇ? ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಂತಿಮ ಮನವಿ ಮತ್ತು ಎಚ್ಚರಿಕೆ:ಈ ಮೇಲಿನ ಎಲ್ಲಾ ಪ್ರಶ್ನೆಗಳು ದೇವಸ್ಥಾನದ ಪವಿತ್ರತೆ ಮತ್ತು ಆಡಳಿತದ ಮತ್ತು ಆಡಳಿತದ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಸಾರ್ವಜನಿಕರು ಕೇಳುತ್ತಿರುವುದಾಗಿದೆ.
ಆದ್ದರಿಂದ, ಆಗಸ್ಟ್ 15ರಂದು ಆಡಳಿತ ಮಂಡಳಿ ತಿಳಿಸಿದ ನಿಗದಿತ ಸಮಯದಂದು ಸಾರ್ವಜನಿಕ ಸಭೆಯನ್ನು ಕರೆದು ಈ ಎಲ್ಲಾ ವಿಷಯಗಳಿಗೆ ಸೂಕ್ತ ಹಾಗೂ ಪರಿಪೂರ್ಣ ಮಾಹಿತಿಯನ್ನು ಒದಗಿಸಬೇಕಾಗಿ ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಲಾಗಿದೆ. ಮನವಿ ಪತ್ರಕ್ಕೆ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು ಸಹಿತ ನೂರಾರು ಮಂದಿ ಸಹಿ ಮಾಡಿದ್ದಾರೆ.








































