ಕಳೆದ ಆರು ತಿಂಗಳ ಅವಧಿಯಲ್ಲಿ ಆಭರಣ ಚಿನ್ನದ ದರದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಜನೆವರಿ 29ರಂದು ಪ್ರತಿ ಗ್ರಾಮ್‌ಗೆ ದಾಖಲೆಯ ₹16,395 ತಲುಪಿದ್ದ ಬಂಗಾರದ ದರ, ಪ್ರಸ್ತುತ ₹13,220ಕ್ಕೆ ಕುಸಿದಿದೆ. ಅಂದರೆ, ಇತ್ತೀಚಿನ ದಿನಗಳಲ್ಲಿ ಪ್ರತಿ ಗ್ರಾಮ್ ಚಿನ್ನದ ಮೇಲೆ ₹3,175ರಷ್ಟು ದರ ಕಡಿಮೆಯಾಗಿದೆ.
ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ದರ ಸ್ಥಿರ
ಸಾಮಾನ್ಯವಾಗಿ ಜಾಗತಿಕ ಉದ್ವಿಗ್ನತೆ ಅಥವಾ ಯುದ್ಧದ ಸಂದರ್ಭಗಳಲ್ಲಿ ಚಿನ್ನದ ಮೌಲ್ಯ ಏರಿಕೆಯಾಗುತ್ತಿತ್ತು. ಆದರೆ, ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ವಾತಾವರಣವಿದ್ದರೂ ಬಂಗಾರದ ಬೆಲೆ ಹೆಚ್ಚಾಗದಿರುವುದು ಮಾರುಕಟ್ಟೆ ತಜ್ಞರ ಗಮನ ಸೆಳೆದಿದೆ.ಇಂದಿನ ವಹಿವಾಟಿನಲ್ಲಿ ಲೋಹಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇಂದಿನ ಪ್ರಮುಖ ನಗರಗಳ ಚಿನ್ನ ಮತ್ತು ಬೆಳ್ಳಿ ದರ ವಿವರ:
ದೇಶಾದ್ಯಂತ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಮಾರುಕಟ್ಟೆ ದರ ಹೀಗಿದೆ:
22 ಕ್ಯಾರೆಟ್ ಚಿನ್ನ (10ಗ್ರಾಂ ): ₹1,32,20024
24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): ₹1,44,2202
ಬೆಳ್ಳಿ (100ಗ್ರಾಂ ): ₹23,500
ಗರಿಷ್ಠ ₹410 ತಲುಪಿದ್ದ ಬೆಳ್ಳಿಯ ದರ ಈಗ ₹235ಕ್ಕೆ ಕುಸಿದಿದೆ. ಬೆಂಗಳೂರು ಸೇರಿದಂತೆ ತಮಿಳುನಾಡು ಹಾಗೂ ಕೇರಳದಲ್ಲೂ ಬೆಳ್ಳಿಯ ಬೆಲೆ ಸ್ಥಿರವಾಗಿದೆ.








































