ಭಾರತದಲ್ಲಿ ವಾಟ್ಸಾಪ್ ಶಾಕ್: ಮುನ್ಸೂಚನೆ ಇಲ್ಲದೆ 24 ಗಂಟೆಗಳ ರಿವ್ಯೂ’ಗೆ ಬ್ಲಾಕ್ ಆದ ಬಳಕೆದಾರರ ಖಾತೆಗಳು

Picture of Savistara

Savistara

Bureau Report

ದೆಹಲಿ: ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಮೆಟಾ (Meta) ಒಡೆತನದ ಜಗತ್ಪಸಿದ್ಧ (WhatsApp) ಬಳಕೆದಾರರಿಗೆ ಸೋಮವಾರ (ಆಗಸ್ಟ್ 3) ರಾತ್ರಿ ದಿಢೀರ್ ಆಘಾತ ಎದುರಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಹಠಾತ್ತಾಗಿ ಹಲವರ ಖಾತೆಗಳನ್ನು 24 ಗಂಟೆಗಳ ಕಾಲ “ರಿವ್ಯೂ’ಗೆ (Under Review) ಒಳಪಡಿಸಿ, ಆ್ಯಪ್ ಬಳಸದಂತೆ ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದೆ.ಸೋಮವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಈ ಸಮಸ್ಯೆ ಎದುರಾಗಿದ್ದು, ಖಾತೆಗಳು ಬ್ಲಾಕ್ ಆದ ಹಿನ್ನೆಲೆಯಲ್ಲಿ ಕೋಪಗೊಂಡ ಬಳಕೆದಾರರು ಎಕ್ಸ್ (ಟ್ವಿಟರ್) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ವಾಟ್ಸಾಪ್ ಸ್ಟೀನ್‌ನಲ್ಲಿ ಬಂದ ಮೆಸೇಜ್ ಏನು?

ಖಾತೆ ಬ್ಲಾಕ್ ಆದ ಬಳಕೆದಾರರ ಮೊಬೈಲ್‌ ಪರದೆಯ ಮೇಲೆ ಹೀಗೊಂದು ನೋಟಿಫಿಕೇಶನ್ ಪ್ರತ್ಯಕ್ಷವಾಗಿತ್ತು. “ಖಾತೆ ಪರಿಶೀಲನೆಯಲ್ಲಿದೆ (Account in review). ವಿನಂತಿ ದಿನಾಂಕ: 3 ಆಗಸ್ಟ್ 2026. ನಿಮ್ಮ ಖಾತೆಯ ಚಟುವಟಿಕೆ ಹಾಗೂ ಸಾಧನದ ವಿವರಗಳು ನಮ್ಮ ಸೇವಾ ನಿಯಮಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. 24 ಗಂಟೆಗಳ ಒಳಗೆ ಇದರ ಫಲಿತಾಂಶವನ್ನು ನಿಮಗೆ ತಿಳಿಸಲಾಗುವುದು.” ಎಂದು ಹೇಳಿದೆ.ಇದರೊಂದಿಗೆ ವಾಟ್ಸಾಪ್ ಅನ್ನು ಜವಾಬ್ದಾರಿಯುತವಾಗಿ ಬಳಸುವುದು ಹೇಗೆ ಹಾಗೂ ಕಳುವಾದ ಫೋನ್‌ಗಳ ಕುರಿತು ಮಾಹಿತಿ ನೀಡುವ ಲಿಂಕ್‌ಗಳನ್ನು ಆ್ಯಪ್ ತೋರಿಸಿದೆ. ಅಧಿಕೃತ ವಾಟ್ಸಾಪ್ ಆ್ಯಪ್ ಬಳಸುತ್ತಿದ್ದರೂ ಯಾವುದೇ ವಿವರಣೆ ಇಲ್ಲದೆ ಖಾತೆಗಳನ್ನು ನಿರ್ಬಂಧಿಸಿರುವುದರಿಂದ ದೈನಂದಿನ ಹಾಗೂ ವೃತ್ತಿಪರ ಕೆಲಸಗಳಿಗೆ ವಾಟ್ಸಾಪ್ ಅನ್ನೇ ನಂಬಿಕೊಂಡಿದ್ದ ಸಾವಿರಾರು ಬಳಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯಾವುದೇ ಪೂರ್ವ ಸೂಚನೆ ಇಲ್ಲದೆ ನನ್ನ ವಾಟ್ಸಾಪ್ ಖಾತೆಯನ್ನು ಡಿಸೇಬಲ್ ಮಾಡಲಾಗಿದೆ. ನಾನು ಮೇಲ್ಮನವಿ (Appeal) ಸಲ್ಲಿಸಿದ್ದೇನೆ. ಆದರೆ 24 ಗಂಟೆಯಲ್ಲಿ ರಿವ್ಯೂ ಮಾಡಲಾಗುತ್ತದೆ ಎಂಬ ಜನರಿಕ್ ಮೆಸೇಜ್ ಮಾತ್ರ ಬರುತ್ತಿದೆ. ದಯವಿಟ್ಟು ತುರ್ತಾಗಿ ಸಹಾಯ ಮಾಡಿ”. “ನನ್ನ ವಾಟ್ಸಾಪ್ ಖಾತೆ ಇದ್ದಕ್ಕಿದ್ದಂತೆ ಬಂದ್ ಆಗಿದೆ. ನಾನು ಕೇವಲ ಅಧಿಕೃತ ಆ್ಯಪ್ ಮಾತ್ರ ಬಳಸುತ್ತಿದ್ದೇನೆ. ನನ್ನ ಸಂಪೂರ್ಣ ಕಚೇರಿ ಕೆಲಸ ವಾಟ್ಸಾಪ್ ಮೇಲೆಯೇ ಅವಲಂಬಿತವಾಗಿದೆ. ಇದು ಅನಗತ್ಯ ಕಿರಿಕಿರಿ”. ಎಂದು ಬಳಕೆದಾರರು ಹೇಳಿದ್ದಾರೆ.

ವಾಟ್ಸಾಪ್ ಸಂಸ್ಥೆಯ ಸ್ಪಷ್ಟನೆ:ಈ ತಾಂತ್ರಿಕ ಎಡವಟ್ಟಿನ ಕುರಿತು ಪ್ರತಿಕ್ರಿಯಿಸಿರುವ ವಾಟ್ಸಾಪ್ ವಕ್ತಾರರು, “ನಮ್ಮ ಸೇವೆಯನ್ನು ದುರುಪಯೋಗಪಡಿಸಿಕೊಳ್ಳುವವರಿಂದ ವ್ಯವಸ್ಥೆಯನ್ನು ರಕ್ಷಿಸಲು ನಾವು ಸದಾ ಶ್ರಮಿಸುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ನಮ್ಮ ಆಟೋಮೇಟೆಡ್ ವ್ಯವಸ್ಥೆಯಿಂದಾಗಿ ತಪ್ಪಾಗಿ ಖಾತೆಗಳು ನಿಯಂತ್ರಣಕ್ಕೆ ಸಿಲುಕುತ್ತವೆ. ಅಂತಹ ತಪ್ಪುಗಳನ್ನು ನಾವು ಆದಷ್ಟು ಬೇಗ ಸರಿಪಡಿಸಿ ಬಳಕೆದಾರರಿಗೆ ಚಾಟಿಂಗ್ ಮಾಡಲು ಅವಕಾಶ ಕಲ್ಪಿಸುತ್ತೇವೆ” ಎಂದು ತಿಳಿಸಿದ್ದಾರೆ.

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!