100 ಅಡಿ ತುಂಬಿದ ಕೆಆರ್‌ಎಸ್‌ ಜಲಾಶಯ: ಮಳೆ ಮುಂದುವರಿದರೆ ಈ ಬಾರಿಯೂ ಭರ್ತಿ

Picture of Savistara

Savistara

Bureau Report

ಕಾವೇರಿ ಜಲಾನಯದ ಪ್ರದೇಶದಲ್ಲಿ ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಮಂಡ್ಯದ ಕೃಷ್ಣರಾಜಸಾಗರ ಜಲಾಶಯ ನೂರು ಅಡಿಯಷ್ಟು ತುಂಬಿದೆ.ಕಳೆದ ಮೂರು ದಿನಗಳ ಅಂತರದಲ್ಲಿ ಬರೋಬ್ಬರಿ ಎಂಟು ಅಡಿ ಏರಿಕೆ ಕಂಡುಬಂದಿದ್ದು, ಸದ್ಯ ಡ್ಯಾಂನಲ್ಲಿ 23 ಟಿಎಂಸಿ ನೀರು ಸಂಗ್ರಹವಾಗಿದೆ.ನದಿಯ ಮೇಲ್ಬಾಗದಲ್ಲಿ ಮಳೆ ಮುಂದುವರಿದಿರುವುದರಿಂದ ಜಲಾಶಯಕ್ಕೆ ಬರೋಬ್ಬರಿ 32,048 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಹೊರಹರಿವು ಕೇವಲ 1,821 ಕ್ಯೂಸೆಕ್ ಇದೆ. ಹೀಗಾಗಿ ಜಲಾಶಯದ ನೀರಿನ ಮಟ್ಟದಲ್ಲಿ ತೀವ್ರ ಏರಿಕೆ ಕಂಡುಬರುತ್ತಿದೆ.ಇದೇ ವೇಗದಲ್ಲಿ ಹದಿನೈದು ದಿನ ಮಳೆ ಸುರಿದರೆ ಈ ಬಾರಿ ಕೆಆರ್‌ಎಸ್‌ ಭರ್ತಿಯಾಗುವ ಎಲ್ಲಾ ಸಾಧ್ಯತೆ ಇದೆ. ಈಗಾಗಲೇ ಜಲಾಶಯದಲ್ಲಿನ ನೀರು ನೋಡಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇದರ ಜೊತೆಗೆ ನೀರಿನ ಕೊರತೆಯಿಂದಾಗಿ ತೀವ್ರಗೊಂಡಿದ್ದ ಕಾವೇರಿ ಹೋರಾಟದ ಕಾವು ಇದೀಗ ತಣ್ಣಗಾಗಿದೆ.

[t4b-ticker]
error: Content is protected !!