ಹಿಂದುತ್ವಕ್ಕಾಗಿ ಪ್ರಾಣವನ್ನೇ ಕೊಡ್ತೇನೆ ಅಂತಿದ್ದವನ ಜೀವವನ್ನೇ ತೆಗೆದ್ರು: ಸುಹಾಸ್ ಶೆಟ್ಟಿ ತಾಯಿ ಕಣ್ಣೀರು

Picture of Savistara

Savistara

Bureau Report

ಮಂಗಳೂರು: ಹಿಂದುತ್ವಕ್ಕಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ ಅಂತಿದ್ದ. ಈಗ ಅವನ ಪ್ರಾಣವನ್ನೇ ತೆಗೆದರು ಎಂದು ಮೃತ ಸುಹಾಸ್ ಶೆಟ್ಟಿ (Suhas Shetty) ಅವರ ತಾಯಿ ಸುಲೋಚನಾ ಕಣ್ಣೀರು ಹಾಕಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ನಿನ್ನೆ ಬೆಳಗ್ಗೆ ಮದುವೆಯ ಬ್ಯುಸಿಯಲ್ಲಿದ್ದೆವು. ಹಾಗಾಗಿ ಮಗನಿಗೆ ಫೋನ್ ಮಾಡಲು ಆಗಲಿಲ್ಲ. ರಾತ್ರಿ ಕಾಲ್ ಮಾಡಿದಾಗ ಕಾಲ್ ಸಿಗುತ್ತಿರಲಿಲ್ಲ. ಹಿಂದುತ್ವಕ್ಕಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ ಅಂತಿದ್ದ. ಈಗ ಅವನ ಪ್ರಾಣವನ್ನೇ ತೆಗೆದರು ಎಂದು ದುಃಖಿಸಿದರು.

ಹಿಂದೂಗಳು ಹೆದರಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. 85% ಹಿಂದೂಗಳಿದ್ದರೂ ಅವರಿಗೆ ಹೆದರಿ ಬದುಕಬೇಕಾಗಿದೆ. ಹತ್ಯೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗುರುವಾರ ರಾತ್ರಿ ಮಂಗಳೂರಿನಲ್ಲಿ (Mangaluru) ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!