ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಹೊಸ ಯೋಚನೆಗಳನ್ನು ಕಾರ್ಯಗತಗೊಳಿಸುವುದು ಸುಂದರ ಭಾರತ್ ಟ್ರಸ್ಟ್ ಉದ್ದೇಶ ಸಂಸದ ಕ್ಯಾ. ಚೌಟ

Picture of Savistara

Savistara

Bureau Report

ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಜಿಲ್ಲೆಯಲ್ಲಿ ಹೊಸ ಯೋಚನೆಗಳಿಗೆ ಶಕ್ತಿ ಕೊಡುವ ಕಾರ್ಯ ಸುಂದರ ಭಾರತ್ ಟ್ರಸ್ಟ್ ನ ಉದ್ದೇಶವಾಗಿದೆಯೆಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಕ್ಯಾ.ಬ್ರಿಜೇಶ್ ಚೌಟ ಕಚೇರಿ ಮತ್ತು ಸುಂದರ ಭಾರತ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸುಳ್ಯದಲ್ಲಿ ನಡೆದ ಯುವಿವಿಕಾಸ ಕಾರ್ಯಕ್ರಮ ದಲ್ಲಿ ಮಾತನಾಡುತ್ತ ತಿಳಿಸಿದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅನೇಕ ಪ್ರತಿಭಾನ್ವಿತರು,ಸಾಧನೆ ಮಾಡಿದ ಅನೇಕ ಉದಾಹರಣೆಗಳು ನಮ್ಮಲ್ಲಿವೆ ಆದರೆ ಅನೇಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಶಕ್ತಿ ತುಂಬುವ ಕೆಲಸವಾಗುತ್ತಿಲ್ಲ ಈ ಸಂದರ್ಭದಲ್ಲಿ ಅವರಿಗೆ ಪೋಷಣೆ ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ.

ವಿದ್ಯಾರ್ಥಿಗಳು ಭಯ ಮುಕ್ತ ವಾತಾವರಣದಿಂದ ಹೊರ ಬಂದು ಸಾಮಾನ್ಯ ಮನೆತನದ ಮಕ್ಕಳು ಉದ್ಯಮಶೀಲರಾಗುವ ಕನಸು ನಮ್ಮದಾಗಿದೆ ಈ ಹಿನ್ನೆಲೆಯಲ್ಲಿ ಸಮಾಜ,ಶಿಕ್ಷಕರು,ಜನಪ್ರತಿನಿಧಿಗಳ ಜವಾಬ್ದಾರಿ ಹೆಚ್ಚಿದೆ ಅವರ ಸಹಕಾರ ಬಹುಮುಖ್ಯವಾದದ್ದು,ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕವಾಗಿ ,ಶೆಕ್ಷಣಿಕವಾಗಿ ಮುಂದಿದ್ದೇವೆ ಆದರೆ ನಾವು ಆ ಅವಕಾಶಗಳನ್ನು ಬಳಸಿಕೊಂಡು ಮುಂದುವರಿಯಬೇಕಾಗಿದೆ , ಪ್ರಧಾನಿ ಮೋದಿಯವರ ಕನಸಿನ ವಿಕಸಿತ ಭಾರತಕ್ಕೆ ಈ ಕಾರ್ಯಕ್ರಮ ದೊಡ್ಡ ಹೆಜ್ಜೆಯಾಗಲಿದ್ದು ಸುಳ್ಯವನ್ನೇ ನಾವು ಮೊದಲು ಅಯ್ಕೆ ಮಾಡಿದ್ದೇವೆ ಯೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ಕ್ಷೇತ್ರ ಶಿಕ್ಷಣಾಧಿಕಾರಿಗ ಸುಂದರ ಭಾರತ್ ಟ್ರಸ್ಟ್ ನ ಪ್ರತಾಪ್, ವೇಳೆ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು
ಶಾಸಕಿ ಭಾಗೀರಥಿ ‌ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ನಗರ‌ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಶುಭಹಾರೈಸಿದರು.

ಸುಂದರ ಭಾರತ್ ಪ್ರತಿಷ್ಠನಾ ಬೆಂಗಳೂರು ಇದರ ವತಿಯಿಂದ ಜಿಲ್ಲೆಯ 115 ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 12 ಸಾವಿರ ಪುಸ್ತಕವನ್ನು ನೀಡಲಾಗುತ್ತಿದ್ದು, ತಾಲೂಕು ಪಂಚಾಯತ್ ನಲ್ಲಿ ಸಾಂಕೇತಿಕವಾಗಿ ಕೆಲವು ಶಾಲೆಗಳಿಗೆ ವಿತರಿಸಲಾಯಿತು.

ಸುಂದರ ಭಾರತ ಪ್ರತಿಷ್ಠಾನವನ್ನು ಸುಳ್ಯಕ್ಕೆ ಪರಿಚಯಿಸಿದರೆಂಬ ಕಾರಣಕ್ಕೆ ಕೋಲ್ಚಾರು ಶಾಲಾ ಶಿಕ್ಷಕಿ ಜಲಜಾಕ್ಷಿ ಕೆ.ಟಿ. ಯವರನ್ನು ಗೌರವಿಸಲಾಯಿತು.

ಪುಸ್ತಕ ಸ್ವೀಕರಿಸಿದವರ ಪರವಾಗಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಸಹಕರಿಸಿದ ಸುಳ್ಯ ಸರಕಾರಿ ಪ್ರೌಢಶಾಲೆಯ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಆರಂಭದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ನಡೆಯಿತು.‌ ಬಳಿಕ ಅದೇ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ಪಾತ್ರಾಭಿನಯದ ಪ್ರದರ್ಶನ ನಡೆಯಿತು.

ಬೆಂಗಳೂರು ಸುಂದರ ಭಾರತ ಪ್ರತಿಷ್ಠಾನದ ಪ್ರತಾಪ್ ರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಕೋಲ್ಚಾರು ಶಾಲಾ ಶಿಕ್ಷಕಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

[t4b-ticker]
error: Content is protected !!