NEET (UG) Re-Exam 2026: ಭಾರತದಲ್ಲಿ ಜೂ. 22 ರವರೆಗೆ ಟೆಲಿಗ್ರಾಂ ಆ್ಯಪ್ ತಾತ್ಕಾಲಿಕ ನಿಷೇಧ!

Picture of Savistara

Savistara

Bureau Report

ನವದೆಹಲಿ: ಮುಂಬರುವ ನೀಟ್ (NEET UG 2026) ಮರುಪರೀಕ್ಷೆಯಲ್ಲಿ ಅಕ್ರಮ ಹಾಗೂ ಪೇಪರ್ ಲೀಕ್ ದಂಧೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಭಾರಿ ದೊಡ್ಡ ಹೆಜ್ಜೆ ಇಟ್ಟಿದೆ.ದೇಶಾದ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆದ ಟೆಲಿಗ್ರಾಂ (Telegram) ಅನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ನೇರ ಶಿಫಾರಸಿನ ಮೇರೆಗೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ, ಮಾಹಿತಿ 2000 0 3 69A (Section 69A of IT Act) ಅಡಿಯಲ್ಲಿ ಲಭ್ಯವಿರುವ ತುರ್ತು ಅಧಿಕಾರವನ್ನು ಬಳಸಿ ಟೆಲಿಗ್ರಾಂ ಪ್ಲಾಟ್‌ಫಾರ್ಮ್ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧ ಹೇರಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮುಂದಾಗಿದೆ.ಟೆಲಿಗ್ರಾಂ ನಿಷೇಧಕ್ಕೆ ಮುಖ್ಯ ಕಾರಣವೇನು?ಎನ್‌ಟಿಎ (NTA) ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಪರೀಕ್ಷಾ ವಂಚನೆ ಜಾಲಗಳು ಟೆಲಿಗ್ರಾಂ ಆ್ಯಪ್‌ನ ಪ್ರಮುಖ ಫೀಚರ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಟೆಲಿಗ್ರಾಂನಲ್ಲಿರುವ ಮೆಸೇಜ್ ಎಡಿಟ್ ಮಾಡುವ ಆಯ್ಕೆಯನ್ನು ಬಳಸಿ ವಂಚಕರು ಪರೀಕ್ಷೆ ಮುಗಿದ ನಂತರ ಹಳೆಯ ಸಂದೇಶಗಳನ್ನು ಮತ್ತು ಸಮಯವನ್ನು (Timestamps) ಬದಲಾಯಿಸುತ್ತಿದ್ದರು. ಆ ಮೂಲಕ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸುಳ್ಳು ಭ್ರಮೆಯನ್ನು ಸೃಷ್ಟಿಸಿ, ಅಭ್ಯರ್ಥಿಗಳನ್ನು ವಂಚಿಸಲು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರಲು ಸಂಚು ರೂಪಿಸಲಾಗಿತ್ತು.ಅಭ್ಯರ್ಥಿಗಳ ಹಿತರಕ್ಷಣೆ: “ಪರೀಕ್ಷಾ ವಂಚನೆ ಜಾಲಗಳು ಅಭ್ಯರ್ಥಿಗಳನ್ನು ವಂಚಿಸಲು ಸಂಘಟಿತವಾಗಿ ಈ ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದನ್ನು ತಡೆಯಲು ಮತ್ತು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ಎರಡೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.ಜೂನ್ 21 ಕ್ಕೆ ನೀಟ್ ಮರುಪರೀಕ್ಷೆವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ಈ ಮಹತ್ವದ ನೀಟ್ (UG) 2026 ರ ಮರುಪರೀಕ್ಷೆಯು ಈ ಮುಂಬರುವ ಭಾನುವಾರ, ಅಂದರೆ ಜೂನ್ 21, 2026 ರಂದು ದೇಶಾದ್ಯಂತ ನಡೆಯಲಿದೆ. ಪರೀಕ್ಷೆ ಮುಗಿದ ಮರುದಿನ ಅಂದರೆ ಜೂನ್ 22 ರವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!