ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ ! 10 ವರ್ಷಕ್ಕಿಂತ ಹೆಚ್ಚು ಅವಧಿಗೆ ನಿರ್ದೇಶಕರಾಗಿ ಇರುವಂತಿಲ್ಲ ! 3 ವರ್ಷ ಬ್ಯಾಂಕಿನಿಂದ ದೂರ ಉಳಿಯೋದು ಕಡ್ಡಾಯ, ಆರ್‌ಬಿಐ ಖಡಕ್ ನಿಯಮ

Picture of Savistara

Savistara

Bureau Report

ಮುಂಬೈ, ಜೂನ್ 14 : ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿಆಡಳಿತಾತ್ಮಕ ಪಾರದರ್ಶಕತೆ ತರಲು ಮತ್ತು ಅಧಿಕಾರದ ದುರ್ಬಳಕೆಗೆ ಬ್ರೇಕ್ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಹೆಜ್ಜೆ ಇಟ್ಟಿದೆ. ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಗರಿಷ್ಠ ಅಧಿಕಾರಾವಧಿಯನ್ನು 10 ವರ್ಷಗಳಿಗೆ ಸೀಮಿತಗೊಳಿಸಿ, ಆ ಬಳಿಕ ಕಡ್ಡಾಯವಾಗಿ 3 ವರ್ಷಗಳ ಬಿಡುವು (Cooling-off period) ಪಡೆಯಲೇಬೇಕು ಎಂದು ಆರ್‌ಬಿಐ ಖಡಕ್ ಆದೇಶ ಹೊರಡಿಸಿದೆ.

ನಿಯಮ ತರಲು ಕಾರಣವೇನು?

ಕಾನೂನುಗಳ (ತಿದ್ದುಪಡಿ) ಕಾಯ್ದೆಯಡಿ ಸಹಕಾರಿ ಬ್ಯಾಂಕ್ ನಿರ್ದೇಶಕರ ನಿರಂತರ ಅಧಿಕಾರಾವಧಿಯನ್ನು ಗರಿಷ್ಠ 10 ವರ್ಷಗಳಿಗೆ ಸೀಮಿತಗೊಳಿಸಲಾಗಿತ್ತು. ನಿರ್ದೇಶಕರು ತಮ್ಮ 10 ವರ್ಷಗಳ ಅವಧಿ ಮುಗಿಯುವ ಕೆಲವೇ ದಿನಗಳ ಮುನ್ನ ರಾಜೀನಾಮೆ ನೀಡಿ, ಕೇವಲ ಒಂದೆರಡು ವಾರಗಳಲ್ಲಿ ಮತ್ತೆ ಮರು ಆಯ್ಕೆಯಾಗುವ ಅಥವಾ ಸಹ-ಸದಸ್ಯರಾಗಿ (Co-opted) ಮಂಡಳಿ ಸೇರುವ ಮೂಲಕ ನಿಯಮವನ್ನು ಗಾಳಿಗೆ ತೂರುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಬಿಐ ಈ ಲೂಪ್‌ಹೋಲ್ ಮುಚ್ಚಲು ‘ನಗರ/ಗ್ರಾಮೀಣ ಸಹಕಾರಿ ಬ್ಯಾಂಕುಗಳ ಆಡಳಿತ ತಿದ್ದುಪಡಿ ನಿಯಮಾವಳಿ’ಯನ್ನು ಜಾರಿಗೆ ತಂದಿದೆ. ಹೊಸ ಆದರೆ, ಕೆಲವು ಪ್ರಭಾವಿ ನಿಯಮವನ್ನು 2026 ಮೇ 25ರಂದು ಆರ್ ಬಿಐ ಆದೇಶ ಮಾಡಿದೆ.

ಗರಿಷ್ಠ ಅಧಿಕಾರಾವಧಿ 10 ವರ್ಷ ಮಾತ್ರ !

ಇದರಂತೆ, ಒಬ್ಬ ವ್ಯಕ್ತಿ ಯಾವುದೇ ಸಹಕಾರಿ ಬ್ಯಾಂಕಿನಲ್ಲಿ ಸತತವಾಗಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕನಾಗಿರಲು ಸಾಧ್ಯ 10 ವರ್ಷಗಳ ಅವಧಿ ಮುಗಿದ ನಂತರ, ಅದೇ ಬ್ಯಾಂಕಿನಲ್ಲಿ ಮತ್ತೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಅಥವಾ ನಾಮನಿರ್ದೇಶನಗೊಳ್ಳಲು ಕನಿಷ್ಠ 3 ವರ್ಷಗಳ ಕಾಲ ಹೊರಗುಳಿಯಬೇಕು. ಆಡಳಿತ ಮಂಡಳಿಯಿಂದಮೂರು ವರ್ಷಗಳ ‘ಕೂಲಿಂಗ್-ಆಫ್’ ಅವಧಿಯಲ್ಲಿ ಆ ವ್ಯಕ್ತಿ ಬ್ಯಾಂಕಿನ ಯಾವುದೇ ಆಡಳಿತಾತ್ಮಕ ಅಥವಾ ನಿರ್ವಹಣಾ ನಿರ್ಧಾರಗಳಲ್ಲಿ ಭಾಗವಹಿಸುವಂತಿಲ್ಲ. ಆತ ಕೇವಲ ಒಬ್ಬ ಸಾಮಾನ್ಯ ಗ್ರಾಹಕ ಅಥವಾ ಸದಸ್ಯರಾಗಿ ಮಾತ್ರ ಮುಂದುವರಿಯಬಹುದು. ಇವರು ಸೇವೆ ಸಲ್ಲಿಸಿದ ನಿರ್ದಿಷ್ಟ ಬ್ಯಾಂಕಿನಿಂದ ಮಾತ್ರ 3 ವರ್ಷ ದೂರ ಇಡಲಾಗುತ್ತದೆ. ಆದರೆ, ಅವರು ಇಚ್ಛಿಸಿದರೆ ಅರ್ಹತೆ ಆಧಾರದ ಮೇಲೆ ಬೇರೆ ಯಾವುದೇ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಲು ತಡೆ ಇರುವುದಿಲ್ಲ.

ಅಧಿಕಾರಾವಧಿ ಲೆಕ್ಕಾಚಾರ ಹೇಗೆ?

ಒಬ್ಬ ನಿರ್ದೇಶಕ ರಾಜೀನಾಮೆ ನೀಡಿ, 3 ವರ್ಷ ತುಂಬುವ ಮುನ್ನವೇ ಮತ್ತೆ ಮಂಡಳಿ ಸೇರಿದರೆ, ಅವರ ಹಳೆಯ ಅಧಿಕಾರಾವಧಿಯನ್ನು ಹೊಸ ಅವಧಿಗೆ ಸೇರಿಸಿ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ಆರ್ ಬಿಐ ನಿಯಮ ಗಾಳಿಗೆ ತೂರಿದರೆ ಆ ವ್ಯಕ್ತಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ನಿರ್ದೇಶಕರೊಬ್ಬರ ಮೊದಲಿನಿಂದ ಅಧಿಕಾರಾವಧಿ ‘ಕ್ಲಾಕ್’ ಮತ್ತೆ ಆರಂಭವಾಗಬೇಕಾದರೆ, ಅವರು ಕಡ್ಡಾಯವಾಗಿ 3 ವರ್ಷಗಳ ಕಾಲ ಬ್ಯಾಂಕಿನ ಆಡಳಿತ ಮಂಡಳಿಯಿಂದ ಸಂಪೂರ್ಣ ದೂರ ಉಳಿದಿರಲೇಬೇಕು ಎಂದು ಆ‌ರ್ ಬಿಐ ಹೊಸ ನಿಯಮ ಹೇಳುತ್ತದೆ.ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗೆ ಹಾಗೂ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ಈ ನಿಯಮ ಅನ್ವಯವಾಗಲಿದೆ. ಕರ್ನಾಟಕದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳ ಡಿಸಿಸಿ ಬ್ಯಾಂಕುಗಳಲ್ಲಿ ನಿರ್ದೇಶಕರು ಸತತವಾಗಿ ಒಂದೇ ಸ್ಥಾನಕ್ಕೆ ಮರು ಆಯ್ಕೆಯಾಗುತ್ತಿದ್ದು ಬ್ಯಾಂಕುಗಳ ಅಧಿಕಾರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಚಕ್ರಾಧಿಪತ್ಯ ಮಾಡಿಕೊಂಡು ಸರ್ವಾಧಿಕಾರ ನಡೆಸುತ್ತಿದ್ದವರು ಈ ನಿಯಮ ಪ್ರಕಾರ ಕೂಡಲೇ ನೀಡಬೇಕಾಗುತ್ತದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!