ನನ್ನ ಅಧಿಕಾರ ಕಸಿದುಕೊಂಡ ಮೇಲೆ, ನಾನು ಹೇಗೆ ಅಧಿಕಾರ ಹಸ್ತಾಂತರಿಸಲಿ ಉಡುಪಿ ಬಿಜೆಪಿ ನಿರ್ಗಮಿತ ಅಧ್ಯಕ್ಷ ಕಿಶೋರ್ ಕುಮಾರ್ ಮಾರ್ಮಿಕ

Picture of Savistara

Savistara

Bureau Report

ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಹಸ್ತಾಂತರ ಕಾರ್ಯಕ್ರಮದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು ನಿರ್ಗಮಿತ ಅಧ್ಯಕ್ಷ ಕಿಶೋರ್ ಕುಮಾರ್ ವೇದಿಕೆಯಲ್ಲಿ ಪಕ್ಷದ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಚುನಾವಣಾ ಸಂದರ್ಭದಲ್ಲಿ ಹಣ,ಜಾತಿ ಆತನಲ್ಲಿ ಸಂಪನ್ಮೂಲ ಕ್ರೋಡೀಕರಣ ಚರ್ಚೆ ಸಹಜ ಆದರೆ ಜಿಲ್ಲಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಇವೆಲ್ಲ ಬೇಕಾ ಯೆಂದು ಪ್ರಶ್ನಿಸಿದ್ದಾರೆ. ವ್ಯಕ್ತಿಗಿಂತ ಪಕ್ಷ ಮುಖ್ಯವೆನ್ನು ವ ಪಾರ್ಟಿ ಯಾವ ಕಡೇ ಸಾಗುತ್ತಿದೆ, ನನಗೆ ಸಿಕ್ಕ ಒಂದು ವರ್ಷ ಅವಧಿ ಪ್ರಾಮಾಣಿಕವಾಗಿ ಪಕ್ಷ ಕೆಲಸ ಮಾಡಿದ್ದೇನೆ ಆದರೆ ನನಗೆ ಸರಿಯಾಗಿ ತಿಳಿಸದೆ ಅಧ್ಯಕ್ಷ ಸ್ಥಾನದಿಂದ ತೆಗೆದರು ಜನ ನನ್ನಲ್ಲಿ ಪ್ರಶ್ನೆ ಮಾಡುತ್ತಾರೆ ನಿಮ್ಮನ್ನು ಹುದ್ದೆಯಿಂದ ತೆಗೆದರಲ್ಲ ಅದೂ ನನ್ನನ್ನು ತುಂಬಾ ನೋವು ಮಾಡಿದೆ , ಯಾವುದೇ ಕಾರ್ಯಕ್ರಮ ಕ್ಕೆ ಪಕ್ಷದ ಹೆಸರಲ್ಲಿ ದೇಣಿಗೆ ಸಂಗ್ರಹಿಸಲಿಲ್ಲ ದೊಡ್ಡ ನಾಯಕರ ಜೊತೆ ನಿಂತು ಫೋಟೋ ತೆಗೆದು ಪ್ರಚಾರ ಪಡೆದುಕೊಳ್ಳುವ ಕೆಲಸ ಮಾಡಿಲ್ಲ ರಾಜಕಾರಣ ಬಿಟ್ಟು ಪ್ರಪಂಚದ ವಿಶಾಲವಾಗಿದೆ ನಾನು ಹೇಗೆ ಬೆಳೆಯಬೇಕೆಂದು ನನಗೆ ತಿಳಿದಿದ್ದು ಪಕ್ಷ ನೀಡಿದ ಅವಕಾಶಕ್ಕೆ ಋಣಿಎಂದು ಪಕ್ಷದ ಕಡೆಯಿಂದ ಸನ್ಮಾನ ವನ್ನು ನಿರಾಕರಿಸಿ ಸಭೆಯಿಂದ ತೆರಳಿದರು.ಈ ವೇಳೆ ಶಾಸಕ ಸುನಿಲ್ ಕುಮಾರ್,ಗುರ್ಮೆ ಸುರೇಶ್ ಶೆಟ್ಟಿ,ಕಿರಣ್ ಕೋಡ್ಗಿ,ನೂತನ ಅಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ ಬಿಜೆಪಿ ಪ್ರಮುಖ ರು ಉಪಸ್ಥಿತರಿದ್ದರು

[t4b-ticker]
error: Content is protected !!