ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಕರಿಕ್ಕಳ ಆಕ್ರೋಶ

Picture of Savistara

Savistara

Bureau Report

ಹಿಂದೂ ದೇವಸ್ಥಾನ ಹಿಂದೂ ಸಮಾಜದ ಸೊತ್ತುವಾಗಿದ್ದು ಅದೂ ಯಾವತ್ತೂ ಮಠದ ವಶವಾಗರದು, ಕುಕ್ಕೆ ದೇವಸ್ಥಾನ ಮಠಕ್ಕೆ ಸೇರಬೇಕೆಂದು ಅಲ್ಲಿನ ಖಾಸಗಿ ಮಠವೊಂದು ಈ ಹಿಂದೆ ಸಮಿತಿ ಮೇಲೆ ದೂರು ದಾಖಲಿಸಿತ್ತು ಅಲ್ಲದೆ ಸುಮಾರು 55 ಕೇಸ್ ದೇವಸ್ಥಾನ ಮೇಲೆ ದಾವೆ ಹೂಡಿದರೆಂದು ಕುಕ್ಕೆ ದೇವಸ್ಥಾನ ಟ್ರಸ್ಟಿ ಮಹೇಶ್ ಭಟ್ ಕರಿಕ್ಕಳ ತಿಳಿಸಿದ್ದಾರೆ. ಈ ಹಿಂದೆ ದೇವಸ್ಥಾನ ಅಭಿವೃದ್ಧಿ ಸಂದರ್ಭ ಎಲ್ಲರಿಗೂ ಪರಿಹಾರ ಧನ ನೀಡಲಾಗಿತ್ತು ಆದರೆ ಮಠ ಮಾತ್ರ ನೀಡಿದ ಸುಮಾರು 5 ಕೋಟಿ ಪರಿಹಾರ ಧನವನ್ನು ತೆಗೆದುಕೊಂಡಿಲ್ಲ ಸೂಕ್ತವಾದ ದಾಖಲೆ ಅವರಲ್ಲಿಲ್ಲವೇ? ಭೂಮಿಯ ಒಡೆತನವಿದ್ದರೆ ಇಷ್ಟು ವರ್ಷ ಗಳ ಕಾಲ ಯಾಕೆ ಪರಿಹಾರ ತೆಗೆದುಕೊಂಡಿಲ್ಲ ವೆಂದು ಪ್ರಶ್ನಿಸಿದ್ದಾರೆ.ದೇವಸ್ಥಾನ ಒಳಗಿದ್ದ ಗಣಪತಿ ವಿಗ್ರಹವನ್ನು ತೆಗೆದು ಒಳಗಿಟ್ಟು ನರಸಿಂಹ ದೇವರನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಕುಕ್ಕೆ ಶೈವ ದೇವಸ್ಥಾನ ಆ ಪರಂಪರೆಯ ಮೂಲಕ ನಡೆಯಬೇಕೆಂದು ಮಹೇಶ್ ಭಟ್ ಕರಿಕ್ಕಳ ತಿಳಿಸಿದ್ದಾರೆ

[t4b-ticker]
error: Content is protected !!