
ಕೊಡಗು ಹಿತಾಸಕ್ತಿಗೆ ಸದಾ ಧ್ವನಿಯಾಗುತ್ತಿದ್ದ ಸಾಮಾಜಿಕ ಹೋರಾಟಗಾರ ಪ್ರತೀಕ್ ಪೊನ್ನಣ್ಣ ಕಾಂಗ್ರೆಸ್ ಪಕ್ಷ ತೊರೆದಿದ್ದು ಪತ್ರ ಮುಖೇನ ಅಭಿಪ್ರಾಯ ತಿಳಿಸಿದ್ದಾರೆ
ಪ್ರತೀಕ್ ,ಕೆಜಿ ಬೋಪಯ್ಯ ಅವರ ಪರ ಎಂದು ವಾದ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ, ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಅವರ ಶ್ರಮ ಕೂಡ ಇದೆ, ಅದಕ್ಕೆ ಅವರಿಗೆ ಕೃತಜ್ಞತೆಗಳು ಅರ್ಪಿಸುವುದು ಕೊಡಗು ಜಿಲ್ಲೆಯ ಸಂಸ್ಕೃತಿ ಮತ್ತು ಮಾನವೀಯತೆ ಕೂಡ.
ಕಾಂಗ್ರೆಸ್ ಪಕ್ಷದ ಯಾವ ನಾಯಕರು ಕೂಡ ಇದನ್ನು ಅಧಿಕೃತವಾಗಿ ಪ್ರಶ್ನೆ ಮಾಡಿಲ್ಲಾ, ಆದರೆ ಕೊಡವಾಮೆ ಇವರ ಸ್ವತ್ತು ಇಡೀ 2.5 ಲಕ್ಷ ಜನರು ಇವರು ಹೇಳಿದ ಕೊಡವಾಮೆ ಪಾಲಿಸಬೇಕು ಇಲ್ಲವಾದರೆ ಅವರು ಕೊಡವರಲ್ಲಾ ಎಂದು ಬಿಟ್ಟಿ ಪ್ರಮಾಣ ಪತ್ರ ಕೊಡುವ ಮೂಲಭೂತವಾದಿ ಕೆಲವು ಜನರ ಪಡೆ ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ.
ಇಂತಹ ಮನಸ್ಥಿತಿಯ ಜನರು ನಮ್ಮ ಜನಾಂಗಕ್ಕೂ ಮಾರಕ, ಇವರಿಗೆ ಪ್ರತೀಕ್ ಪೊನ್ನಣ್ಣ ಹೆದರುವ ಗಂಡಸಲ್ಲಾ, ನಾನು ಹಾಲಿ ಮತ್ತು ಮಾಜಿ ಶಾಸಕರಿಂದ ವೈಯಕ್ತಿಕವಾಗಿ ಯಾವುದೇ ಲಾಭ ಕೂಡ ಪಡೆದುಕೊಂಡಿಲ್ಲಾ, ಯಾರಿಗೂ ಮುಲಾಜಿಲ್ಲದೆ ನನ್ನ ಕೈಲಾದ ಕೆಲಸ ಸೇವೆ ಮಾಡುತ್ತಿದ್ದೇನೆ.
ಕಾಂಗ್ರೆಸ್ ಪಕ್ಷ ನನಗೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ, ಶಾಸಕರು ಕೂಡ ಯಾವುದೇ ತೊಂದರೆ ಅಥವಾ ನನ್ನ ಸಾಂವಿಧಾನಿಕ ಹಕ್ಕುಗಳಿಗೆ ತೊಂದರೆ ಉಂಟು ಮಾಡಿಲ್ಲಾ, ಅವರ ಮೇಲೆ ಮತ್ತು ಪಕ್ಷದ ಮೇಲೆ ಗೌರವ ಇದೆ.
ಕೆಲವು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲು ಆಗುವುದಿಲ್ಲ ಮತ್ತು ಇರಬಾರದು ಕೂಡ, ಇದು ನಮ್ಮ ವೈಯಕ್ತಿಕ ಹಕ್ಕು ಮತ್ತು ಸಾಂವಿಧಾನಿಕ ಹಕ್ಕು, ಈ ನಿಟ್ಟಿನಲ್ಲಿ ಶಾಸಕರೊಂದಿಗೆ ಚರ್ಚಿಸಿ, ಕಾಂಗ್ರೆಸ್ ಪಕ್ಷಕ್ಕೆ ಮತ್ತು ಶಾಸಕರಿಗೆ ನನ್ನ ಬೆಂಬಲವನ್ನು ರಾಜಿನಾಮೆ ಮೂಲಕ ತಿಳಿಸಲು ಮುಂದಾಗುತ್ತಿದ್ದೇನೆ.
ನನ್ನೊಂದಿಗೆ ನನ್ನ ಗೆಳೆಯರು ಮತ್ತು ಸಹೃದಯಿಗಳು ಇದ್ದಾರೆ ಅವರಿಗೂ ವಿಷಯ ಮುಟ್ಟಿಸಿ, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪಕ್ಷದಿಂದ ಮತ್ತು ಶಾಸಕರ ಬೆಂಬಲದಿಂದ ಹೊರ ಬರಲಿದ್ದೇನೆ.
ಸಮಾಜದ ಮಾಲೀಕರು ಮತ್ತು ದಾರಿದೀಪ ನಾವು ಅಂದುಕೊಂಡ ಕೆಲವರು ನನ್ನ ಬಗ್ಗೆ ಮುಂದಿನ ದಿನಗಳಲ್ಲಿ ಪಿತ್ತೂರಿ ಮಾಡಿ ಅಪಪ್ರಚಾರ ಮಾಡಲಿದ್ದಾರೆ ಅದನ್ನು ಹೆದರಿಸುವ ತಾಕತ್ತು ನನಗೂ ಇದೆ, ನನ್ನನ್ನು ರಾಜಕೀಯವಾಗಿ ಸಾಮಾಜಿಕವಾಗಿ ಪ್ರಶ್ನೆ ಮಾಡಿ, ಅದು ಬಿಟ್ಟು ವೈಯಕ್ತಿಕವಾಗಿ ಬಂದರೆ ಖಂಡಿತಾ ಸಾಂವಿಧಾನಿಕವಾಗಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೊರ ಹಾಕಬೇಕಾಗುತ್ತದೆ.
ಕಾನೂನು ಅಡಿಯಲ್ಲಿ ಸುಳ್ಳು ಮೊಕದ್ದಮೆ ಹಾಕಿ ನನ್ನನ್ನು ಮೌನವಾಗಿಸಬಹುದು ಎಂದು ಅಂದುಕೊಂಡರೆ, ಅದನ್ನು ಸಂವಿಧಾನ ಇಟ್ಟುಕೊಂಡು ಕಾನೂನು ಅಡಿಯಲ್ಲಿಲ್ಲೇ ಏನು ಮಾಡಬೇಕು ಅಂತ ಗೊತ್ತಿದೆ.
ತಾಯಿ ಕಾವೇರಮ್ಮೆ, ಈಶ್ವರ ಇಗ್ಗುತ್ತಪ್ಪ, ಗುರುವಿನ ಸಾಕ್ಷಿಯಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂದಿರುವುದಾಗಿ ತಿಳಿಸಿದ್ದಾರೆ.













































