ಅಮರನಾಥ ಯಾತ್ರೆ ಮಾರ್ಗ ಹಾರಾಟ ನಿಷೇಧ ವಲಯವೆಂದು ಘೋಷಣೆ

Picture of Savistara

Savistara

Bureau Report

ಅಮರನಾಥ ಯಾತ್ರೆಯು ಎರಡು ಮಾರ್ಗಗಳನ್ನು ಹೊಂದಿದೆ.

ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗ ಮತ್ತು ಕಡಿಮೆ ಅಂತರದ ಬಾಲ್ಟಾಲ್ ಮಾರ್ಗ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಆದೇಶದ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಗೃಹ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ, ಯುಎವಿಗಳು(ಮಾನವ ರಹಿತ ವೈಮಾನಿಕ ವಾಹನ ), ಡೋನ್‌ಗಳು, ಬಲೂನ್‌ಗಳು ಸೇರಿದಂತೆ ಯಾವುದೇ ರೀತಿಯ ವಾಯುಯಾನ ಸಾಧನಗಳನ್ನು ಹಾರಿಸುವುದನ್ನು ಜುಲೈ 1 ರಿಂದ ಆಗಸ್ಟ್ 10 ರವರೆಗೆ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಆದರೂ, ವೈದ್ಯಕೀಯ ಸ್ಥಳಾಂತರಿಸುವಿಕೆ, ವಿಪತ್ತು ನಿರ್ವಹಣೆ ಮತ್ತು ಭದ್ರತಾ ಪಡೆಗಳ ಕಣ್ಣಾವಲು ಕಾರ್ಯಗಳಲ್ಲಿ ನಿರ್ಬಂಧಗಳು ಅನ್ವಯಿಸುವುದಿಲ್ಲ. ಅಂತಹ ವಿನಾಯಿತಿಗಳಿಗಾಗಿ ವಿವರವಾದ ಎಸ್‌ಒಪಿಯನ್ನು ನಂತರ ನೀಡಲಾಗುವುದು ಎಂದು ತಿಳಿಸಿದೆ.

[t4b-ticker]
error: Content is protected !!