ನಾಳೆ ( ಜೂ.18) ಸುಳ್ಯ ಜಿ.ಪಂ ಇಂಜಿನಿಯರಿಂಗ್ ಕಚೇರಿ ಕಟ್ಟಡ ಉದ್ಘಾಟನೆ

Picture of Savistara

Savistara

Bureau Report

ಸುಳ್ಯ:ನಾಳೆ ಜ್ಯೋತಿ ಸರ್ಕಲ್ ಬಳಿ ನಿರ್ಮಾಣಗೊಂಡಿರುವ ಜಿ.ಪಂ ಇಂಜಿನಿಯರಿಂಗ್ ಕಚೇರಿ ಕಟ್ಟಡ ಲೋಕಾರ್ಪಣೆಗೊಳ್ಳಲ್ಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರತ್ಯೇಕ ಪ್ರತ್ಯೇಕವಾಗಿ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು ರಾಧಾಕೃಷ್ಣ ಬೊಳ್ಳೂರು ನೇತೃತ್ವದಲ್ಲಿ ಭಾವನಿಶಂಕರ್ ಕಲ್ಮಡ್ಕ,ಭೋಜಪ್ಪ ನಾಯ್ಕ ಮತ್ತಿತರ ರು ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು ಇದೇ ವೇಳೆ ಇಂದು ಪಿ.ಸಿ ಜಯರಾಮ್, ಪಿ.ಯಸ್ ಗಂಗಾಧರ, ಸದಾನಂದ ಮಾವಜಿ ಮತ್ತಿತರರು ಅಧಿಕಾರಿಗಳನ್ನು ಭೇಟಿಯಾಗಿ ಕಟ್ಟಡ ಅಲ್ಲಲ್ಲಿ ಸೋರುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸರಿಪಡಿಸುವಂತೆ ಸೂಚಿಸಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಬೊಳ್ಳೂರು ನೇಮಕಗೊಂಡ ಕೆಲವೇ ಕ್ಷಣದಲ್ಲಿ ತಡೆ ಹಿಡಿಯಲಾಗಿತ್ತು ತದನಂತರ ಆ ಪ್ರಕ್ರಿಯೆ ಅಲ್ಲೇ ನಿಂತು ಹೋಗಿದ್ದು ಇದೀಗ ಕಟ್ಟಡ,ಕಾರ್ಯಕ್ರಮ ಪರಿಶೀಲನೆ ವಿಚಾರವಾಗಿ ಪ್ರತ್ಯೇಕ ತಂಡವಾಗಿ ಭೇಟಿಯಾಗಿರುವುದು ಸುಳ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಜೀವಂತವಾಗಿದ್ದೇ ಅನ್ನೋದಕ್ಕೆ ಪುಷ್ಟಿ ನೀಡಿದಂತಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!