ವಕೀಲ ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ

Picture of Savistara

Savistara

Bureau Report

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಶೆಟ್ಟಿ ಹಾಗೂ ಅಬ್ದುಲ್ ರಹೀಂ ಹತ್ಯೆಯ ಬಳಿಕ ಜನರ ಆಕ್ರೋಶವನ್ನು ತಣಿಸಲು ರಾಜ್ಯ ಸರಕಾರ ಮಂಗಳೂರು ಪೊಲೀಸ್ ಕಮೀಷನ‌ರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿ ಅವರ ಬದಲಿಗೆ ನೂತನ ಪೊಲೀಸ್ ಕಮೀಷನ‌ರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಡಾ. ಅರುಣ್ ಕೆ ಅವರನ್ನು ನೇಮಿಸಲಾಗಿತ್ತು.

ಅಧಿಕಾರ ಸ್ವೀಕರಿಸಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು ಬೇರೆ ಬೇರೆ ಕ್ರಮಗಳನ್ನು ಕೈಗೊಂಡರು. ಅದರಲ್ಲಿ ಬಹಳ ವಿವಾದಕ್ಕೆ ಕಾರಣವಾದ ಕ್ರಮ ಪೊಲೀಸರು ತಡರಾತ್ರಿ ಹಿಂದೂ ಮುಖಂಡರ, ಕಾರ್ಯಕರ್ತರ ಮನೆಗಳಿಗೆ ತೆರಳಿ, ಅವರ ಫೋಟೋ ತೆಗೆದು, ಲೋಕೇಶನ್ ಜೊತೆ ಅಪಲೋಡ್ ಮಾಡಬೇಕು ಎಂದು ನೀಡಿದ ಆದೇಶ. ಇದರ ಉದ್ದೇಶ ಏನೇ ಇರಲಿ, ಇದು ಒಬ್ಬ ವ್ಯಕ್ತಿಯ ಖಾಸಗಿತನಕ್ಕೆ ದಕ್ಕೆ ತಂದ ವಿಷಯದಲ್ಲಿ ಯಾವ ಸಂಶಯವೂ ಇರಲಿಲ್ಲ. ರಾತ್ರಿ 11 ಗಂಟೆ ಮತ್ತು ಅದರ ನಂತರ ಪೊಲೀಸರು ಅಚಾನಕ್ ಆಗಿ ಮನೆಗೆ ಬಂದು ಅಲ್ಲಿ ಮನೆಯ ಯಜಮಾನನ ಫೋಟೋ ತೆಗೆಯುವುದರ ಔಚಿತ್ಯ ಏನು ಎಂದು ಆ ಮನೆಯವರು ಕೇಳಿದರೆ ನಮ್ಮ ಎಸ್ ಪಿಯವರ ಆದೇಶ ಇದೆ ಎಂದು ಪೊಲೀಸ್ ಸಿಬ್ಬಂದಿಗಳು ಹೇಳುತ್ತಿದ್ದರೆ ವಿನ: ಇದಕ್ಕೆ ಕಾನೂನಿನ ಮಾನ್ಯತೆ ಎಷ್ಟಿದೆ ಎನ್ನುವುದರ ಬಗ್ಗೆ ಪೊಲೀಸರ ಬಳಿ ಯಾವುದೇ ದಾಖಲೆ ಇರಲಿಲ್ಲ. ಈ ಒಟ್ಟು ಪ್ರಕ್ರಿಯೆಯಿಂದ ಅನೇಕ ಕುಟುಂಬಗಳು ನೊಂದಿದ್ದವು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ 80 ವರ್ಷ ಪ್ರಾಯದ ಹಿರಿಯರ ಮನೆಗಳಿಗೆ ಹೋಗಿ ಹೀಗೆ ಫೋಟೋ ತೆಗೆದ ಘಟನೆ ಸಮಾಜದಲ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು. ಇದರ ವಿರುದ್ಧ ನ್ಯಾಯವಾದಿ ಗಿರೀಶ್ ಭಾರದ್ವಾಜ್ ಪೊಲೀಸ್ ದೂರು ಪ್ರಾಧಿಕಾರಕ್ಕೆ ಪತ್ರ ಬರೆದು ಈ ಬಗ್ಗೆ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಡೆಯ ಬಗ್ಗೆ ಪೊಲೀಸ್ ದೂರು ಪ್ರಾಧಿಕಾರಕ್ಕೆ ನ್ಯಾಯವಾದಿ ಗಿರೀಶ್ ಭಾರದ್ವಾಜ್ ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ ಇದರಿಂದ ಪ್ರಜ್ಞಾವಂತ ನಾಗರಿಕರ ಮೇಲಿನ ದೌರ್ಜನ್ಯ ಮುಂದುವರೆಯುವ ಬಗ್ಗೆ ಭಾರದ್ವಾಜ್ ಕಳವಳ ವ್ಯಕ್ತಪಡಿಸಿದ್ದರು. ಅರುಣ್ ಭಾರಧ್ವಾಜ್ ಅವರ ಮನವಿಯನ್ನು ಪುರಸ್ಕರಿಸಿರುವ ಪೊಲೀಸ್ ದೂರು ಪ್ರಾಧಿಕಾರ ಈ ಬಗ್ಗೆ ಕ್ರಮ ಕೈಗೊಂಡಿದೆ. ಪೊಲೀಸ್ ಐಜಿಪಿ (ಪಶ್ಚಿಮ ವಲಯ) ಅವರಿಗೆ ಸೂಚಿಸಿರುವ ಪೊಲೀಸ್ ದೂರು ಪ್ರಾಧಿಕಾರ ಈ ಬಗ್ಗೆ ಸ್ಪಷ್ಟನೆ ನೀಡಲು ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಂದ ಮಾಹಿತಿ ಪಡೆದು ಪಶ್ಚಿಮ ವಲಯ ಪೊಲೀಸ್ ಐಜಿಪಿ ಲಿಖಿತ ವಿವರಣೆ ಸಲ್ಲಿಸಬೇಕಿದೆ. ಹಿಂದೂ ಮುಖಂಡರ ಮನೆಗೆ ತಡರಾತ್ರಿ ಭೇಟಿ, ಫೋಟೋ, ಲೋಕೇಶನ್ ಪ್ರಕ್ರಿಯೆ ನಡೆಸಿ ಮಾನಸಿಕ ಕಿರುಕುಳ ನೀಡಿರುವ ಪೊಲೀಸ್‌ ಸಿಬ್ಬಂದಿಗಳಿಗೆ ಈ ರೀತಿಯ ಸೂಚನೆ ನೀಡಿದವರು ಯಾರು, ಅದು ಕಾನೂನು ವ್ಯಾಪ್ತಿಯ ಒಳಗೆ ಬರುವ ವಿಷಯವಾ?, ಮನುಷ್ಯನ ಖಾಸಗಿತನಕ್ಕೆ ದಕ್ಕೆ ತಂದಿರುವುದರ ಬಗ್ಗೆ ಎಲ್ಲವನ್ನು ತಮ್ಮ ವರದಿಯಲ್ಲಿ ಸ್ಪಷ್ಟನೆ ನೀಡಬೇಕಿದೆ.

ಅವರ ವರದಿಯಲ್ಲಿ ನೀಡಲಿರುವ ಸ್ಪಷ್ಠಿಕರಣವನ್ನು ಪರಿಶೀಲಿಸಿ ನಂತರ ರಾಜ್ಯ ಪೊಲೀಸ್‌ ದೂರು ಪ್ರಾಧಿಕಾರ ಮುಂದೇನು ಸೂಚನೆ ಕೊಡಬೇಕು ಎನ್ನುವುದನ್ನು ನಿರ್ಧರಿಸಲಿದೆ. ನ್ಯಾಯವಾದಿ ಗಿರೀಶ್ ಭಾರದ್ವಾಜ್ ಅವರ ಮನವಿ ಪತ್ರದಿಂದ ದಕ್ಷಿಣ ಕನ್ನಡ ಜಿಲ್ಲಾ ಹಿಂದೂ ಮುಖಂಡರು ಹಾಗೂ ಅವರ ಕುಟುಂಬದವರು ಗಿರೀಶ್ ಭಾರದ್ವಾಜ್ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

[t4b-ticker]
error: Content is protected !!