ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಕೆ ಖಚಿತ

Picture of Savistara

Savistara

Bureau Report

ಕರ್ನಾಟಕದ ಎಲ್ಲಾ 39 (ಬಿಜೆಪಿಯ ಸಂಘಟನಾತ್ಮಕ ಜಿಲ್ಲೆಗಳು) ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ಮುಕ್ತಾಯಗೊಂಡಿದೆ.
ಆ ಮೂಲಕ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ. ರಾಜ್ಯಾಧ್ಯಕ್ಷರ ನೇಮಕಕ್ಕೆ ಇದು ಬಹುಮುಖ್ಯವಾದ ಪ್ರಕ್ರಿಯೆಯಾಗಿದೆ. ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕಕ್ಕೆ ಬಂದು ಅಧಿಕೃತ ಘೋಷಣೆಯನ್ನು ಮಾಡಲಿದ್ದಾರೆ. ಇದು ಬಹಳ ಹಿಂದೆನೆಯೇ ಆಗಬೇಕಾಗಿತ್ತು, ಆದರೆ ಕರ್ನಾಟಕ ಬಿಜೆಪಿ ಘಟಕದಲ್ಲಿ ಮನೆಯೊಂದು ಹಲವು ಬಾಗಿಲುಗಳು ಇರುವ ಹಿನ್ನಲೆಯಲ್ಲಿ ಬಿಜೆಪಿ ವರಿಷ್ಠರು ಅಳೆದು ತೂಗಿ ಘೋಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ದಕ್ಷಿಣದ ರಾಜ್ಯದಲ್ಲಿ ಬಿಜೆಪಿ ಬಲಿಷ್ಠ ಎಂದು ಇರುವುದು ಕರ್ನಾಟಕದಲ್ಲಿ. ಬಿಜೆಪಿ ಶಾಸಕರ ಅಭಿಪ್ರಾಯವನ್ನು ಕೆಲವು ತಿಂಗಳ ಹಿಂದೆ ಉಸ್ತುವಾರಿ ಆಲಿಸಿದ್ದರು, ಅದರಲ್ಲಿ ನಾಲೈದು ಶಾಸಕರನ್ನು ಹೊರತು ಪಡಿಸಿ, ಎಲ್ಲರೂ ವಿಜಯೇಂದ್ರ ಪರವಾಗಿಯೇ ಕೈಯೆತ್ತಿದ್ದರು. ಇನ್ನು, ಜಿಲ್ಲಾಧ್ಯಕ್ಷರ ಆಯ್ಕೆಯೂ ಅದೇ ರೀತಿ ಆಗಿರುವುದರಿಂದ, ಸದ್ಯದ ಮಟ್ಟಿಗೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಜೆಪಿ ನಾಯಕರು ಬಯಸುತ್ತಿಲ್ಲ.

ಇನ್ನೂ ಅಕ್ಟೋಬರ್ – ನವೆಂಬರ್ ನಲ್ಲಿ ಬಿಹಾರದ ವಿಧಾನಸಭಾ ಚುನಾವಣೆ ನಡೆಯತ್ತಿರುವುದರಿಂದ, ಕೇಂದ್ರದ ನಾಯಕರು ಅಲ್ಲಿನ ರಾಜಕೀಯದ ವಿಚಾರಕ್ಕೆ ಬ್ಯೂಸಿಯಾಗಲಿದ್ದಾರೆ. ಜೊತೆಗೆ ಇತ್ತೀಚೆಗೆ ಹೊರಬಿದ್ದಿರುವ ಕೆಲವೊಂದು ಸಮೀಕ್ಷೆಗಳು ಎನ್ದಿಎ ಮೈತ್ರಿಕೂಟಕ್ಕೆ ಪೂರಕವಾಗಿರದೇ ಇರುವ ಹಿನ್ನಲೆಯಲ್ಲಿ ಅಲ್ಲಿಗೆ ವಿಶೇಷ ಒತ್ತನ್ನು ನೀಡಬೇಕಿದೆ.

[t4b-ticker]
error: Content is protected !!