ಕುಕ್ಕೆ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಜಿಪಿಎ ಹೋಲ್ಡರ್ ಪ್ರಸನ್ನ ಅನುಮಾನಾಸ್ಪದ ಸಾವು?!

Picture of Savistara

Savistara

Bureau Report

ಸುಬ್ರಹ್ಮಣ್ಯ: ಶ್ರೀ ಸಂಪುಟ ನರಸಿಂಹ ಮಠದ ಜಿಪಿಎ ಹೋಲ್ಡರ್
ಪ್ರಸನ್ನ ಅವರು ಜೂನ್ 19ರಂದು ಬೆಳಗ್ಗೆ, ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸುಬ್ರಹ್ಮಣ್ಯ ಕ್ರಾಸ್ ರೋಡ್ ನಿಂದ ಬೆಂಗಳೂರು ಮಾರ್ಗದಲ್ಲಿ ರೈಲು ಮೈಸೂರು ತಲುಪುವ 10 ಕಿ.ಮೀ ಒಳಗಿನ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅವರು ಬೆಂಗಳೂರಿನ ಬಸವನಗುಡಿಯಲ್ಲಿರುವ ತನ್ನ ಮನೆಗೆ ಬೆಳಿಗ್ಗೆ ತಲುಪಿದ ಹಿನ್ನೆಲೆಯಲ್ಲಿ ಮನೆಯವರು ಗಾಬರಿಗೊಂಡು ಹುಡುಕಿದಾಗ ಸಿಗಲಿಲ್ಲ ಕೊನೆಗೆ ಕಾಲ್ ಮಾಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮಾಹಿತಿ ನೀಡಿದರೆನ್ನಲಾಗಿದೆ.

ದೇವಾಲಯ-ಮಠದ ನಡುವಿನ ಜಾಗ ವಿವಾದ ಸಂಬಂಧ ಹಲವು ಕೋರ್ಟ್ ಪ್ರಕರಣಗಳಲ್ಲಿ ಪ್ರಮುಖರಾಗಿದ್ದು.ಇವರು ಹಲವು ಕಾನೂನು ಪ್ರಕರಣಗಳ ಮಧ್ಯದಲ್ಲಿ ತೊಡಗಿಸಿಕೊಂಡಿದ್ದರು ವಿವಿಧ ಕಡೆಯ ಜಾಗದ ಪ್ರಕರಣಗಳಲ್ಲಿ ಕಾನೂನಿನ ಹೋರಾಟದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರು. ಹೀಗಾಗಿ ಇದು ಸಹಜ ಸಾವೋ ಅಥವಾ ಯಾರಾದರೂ ರೈಲಿನ ಬಾಗಿಲಿನಿಂದ ದೂಡಿ ಮೃತಪಟ್ಟಿರಬಹುದೇ ಎನ್ನುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತಗೊಂಡಿವೆ.

ಸಾವಿನ ನಿಖರ ಕಾರಣವು ತನಿಖಾ ಸಂಸ್ಥೆಯ ತನಿಖೆಯಿಂದ ತಿಳಿದುಬರಬೇಕಿದೆ.

[t4b-ticker]
error: Content is protected !!