ಅಯೋಧ್ಯೆ ರಾಮ ಮಂದಿರ ದುರುಪಯೋಗ ವಿಚಾರ | ಖಡಕ್ ತೀರ್ಮಾನ ಕೈಗೊಂಡ ಯೋಗಿ ಸರ್ಕಾರ,ತನಿಖೆ ಮುಗಿಯುವರೆಗೆ ಟ್ರಸ್ಟ್ ಪದಾಧಿಕಾರಿ ಸಿಬ್ಬಂದಿ ಅಯೋಧ್ಯೆ ಯಲ್ಲಿ ಲಾಕ್ SIT ಸೂಚನೆ

Picture of Savistara

Savistara

Bureau Report

ಅಯೋಧ್ಯೆ: ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ನಿಧಿ ದುರುಪಯೋಗದ ಆರೋಪದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಮಂದಿರದ ಸಿಬ್ಬಂದಿಗಳಿಗೆ ಅನುಮತಿಯಿಲ್ಲದೆ ಅಯೋಧ್ಯೆಯನ್ನು ಬಿಟ್ಟು ಹೊರಹೋಗದಂತೆ ಎಸ್‌ಐಟಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮುಖ್ಯಮಂತ್ರಿಗೆ ದೈನಂದಿನ ವರದಿ:ಮೂರು ಸದಸ್ಯರ ಎಸ್‌ಐಟಿ ತಂಡವು ರವಿವಾರ ಲಖನೌಗೆ ತೆರಳುವ ಮುನ್ನ ಈ ಮಹತ್ವದ ನಿರ್ದೇಶನ ನೀಡಿದೆ. ಮೂಲಗಳ ಪ್ರಕಾರ, ಟ್ರಸ್ಟ್‌ನ ಅಧಿಕಾರಿಗಳ ವಿಚಾರಣೆಯ ವಿವರಗಳು ಮತ್ತು ತನಿಖೆಯ ಹಂತಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗುತ್ತಿದೆ. ಈ ದೈನಂದಿನ ವರದಿಗಳನ್ನು ನೇರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಗೆ ರವಾನಿಸಲಾಗುತ್ತಿದ್ದು. ಶೀಘ್ರದಲ್ಲೇ ಅಂತಿಮ ವರದಿಯನ್ನು ಸಿಎಂಗೆ ಹಸ್ತಾಂತರಿಸಲಾಗುವುದು.

ತನಿಖೆಯ ವ್ಯಾಪ್ತಿ:ಎಸ್‌ಐಟಿ ಕೇವಲ ನಿಧಿ ದುರುಪಯೋಗದ ಬಗ್ಗೆ ಮಾತ್ರವಲ್ಲದೆ, ದೇವಾಲಯಕ್ಕಾಗಿ ನಡೆಸಲಾದ ಭೂಮಿ ಖರೀದಿ ಮತ್ತು ಕಟ್ಟಡ ಸಾಮಗ್ರಿಗಳ ಖರೀದಿಯ ಬಗ್ಗೆಯೂ ತನಿಖೆ ನಡೆಸುತ್ತಿದೆ. ಟ್ರಸ್ಟ್‌ನವರು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ನೀಡಿ ಭೂಮಿ ಖರೀದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು ಸಮಾಜವಾದಿ ಪಕ್ಷ (SP) ಮತ್ತು ಆಮ್ ಆದ್ಮ ಪಕ್ಷಗಳು (AAP) ಪ್ರಬಲವಾಗಿ ಖಂಡಿಸಿವೆ.

ಹಿನ್ನೆಲೆ:ರಾಮಮಂದಿರಕ್ಕೆ ಹರಿದುಬಂದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸ್ವತಃ ಟ್ರಸ್ಟ್ ನೀಡಿದ ಮನವಿಯ ಮೇರೆಗೆ ಜೂನ್ 13ರಂದು ಉತ್ತರ ಪ್ರದೇಶ ಸರ್ಕಾರವು ಎಸ್‌ಐಟಿ ರಚಿಸಿತ್ತು.

ತನಿಖಾ ತಂಡದಲ್ಲಿರುವವರು:ಈ ವಿಶೇಷ ತಂಡದಲ್ಲಿ ಲಖನೌ ವಿಭಾಗೀಯ ಕಮಿಷನ‌ರ್ ವಿಜಯ್ ವಿಶ್ವಾಸ್‌ ಪಂತ್, ಐಜಿಪಿ ಕಿರಣ್ ಎಸ್. ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್‌ ಅವರು ಸದಸ್ಯರಾಗಿದ್ದು, ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!