
ಹೊಸದಿಲ್ಲಿ: ಏರ್ ಇಂಡಿಯಾ ವಿಮಾನ ದುರಂತದಲ್ಲಿ
ಮೃತಪಟ್ಟ 270ಕ್ಕೂ ಹೆಚ್ಚು ಮಂದಿಯ ದೇಹಗಳು ಬರೋ-ಬ್ಬರಿ 1,000 ಡಿ.ಸೆ. ತಾಪವುಳ್ಳ ಜ್ವಾಲೆಯಲ್ಲಿ ಸುಟ್ಟು-ಹೋಗಿದ್ದವು. ಅದಾಗ್ಯೂ ವೈದ್ಯಕೀಯ ತಜ್ಞರು, ಸಿಬಂದಿಯ ಅವಿರತ ಶ್ರಮದಿಂದಾಗಿ ವಾರದಲ್ಲಿಯೇ 200ಕ್ಕೂ ಹೆಚ್ಚು ಮೃ*ತದೇಹಗಳ ಗುರುತು ಪತ್ತೆಯಾಗಿದೆ.
ತಮ್ಮವರ ಮೃತದೇಹಕ್ಕಾಗಿ ಕಾದಿದ್ದವರಿಗೆ ಶವಗಳ ಗುರುತು ಪತ್ತೆ ಮಾಡಿ ಹಸ್ತಾಂತರಿಸುವುದು ಸಮಯ ಮೀರಿದ ಸವಾಲಾಗಿತ್ತು. ದಿನದ 24 ಗಂಟೆಯೂ ಡಿಎನ್‌ಎ ಗುರುತಿ-ಸಲಾಗುತ್ತಿದ್ದು, ಅಹ್ಮದಾಬಾದ್ ವಿಧಿ ವಿಜ್ಞಾನ ಪ್ರಯೋಗಾ-ಲಯ, ಗಾಂಧಿನಗರ ವಿಧಿ ವಿಜ್ಞಾನ ನಿರ್ದೇಶನಾಲಯ, ರಾಷ್ಟ್ರೀಯ ವಿಧಿ ವಿಜ್ಞಾನ ವಿವಿಗಳಲ್ಲಿ ಡಿಎನ್‌ಎ ಮಾದರಿ ಹೊಂದಾಣಿಕೆ ಮಾಡಲಾಗಿದೆ.
ದೇಶದಲ್ಲೇ ಡಿಎನ್‌ಎ ಮಾದರಿ ಪರೀಕ್ಷೆಯ ಅತೀ ದೊಡ್ಡ ಅಭಿಯಾನ ಇದಾಗಿದೆ. 2023ರ ಒಡಿಶಾ ರೈಲು ದುರಂತದ ವೇಳೆ ನಡೆದ ಪರೀಕ್ಷೆ(ಸುಮಾರು 30) ಈವರೆಗಿನ ದೊಡ್ಡ ಅಭಿಯಾನವಾಗಿತ್ತು.













































