ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ನೇತೃತ್ವದಲ್ಲಿ ವ್ಯಾಪಕ ಜನವಿರೋಧಿ ನೀತಿಗಳ ವಿರುದ್ಧ ಪ್ರಬಲ ಪ್ರತಿಭಟನೆ

Picture of Savistara

Savistara

Bureau Report

ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಬಿಜೆಪಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವತಿಯಿಂದ ಆಯೋಜಿಸಿದ ವಿವಿಧ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಮತ್ತು ಪುರಸಭೆ ಕಚೇರಿಗಳ ಎದುರು ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನಿರ್ಧಾರಗಳು, ಬೆಲೆ ಏರಿಕೆ ಹಾಗೂ ನಿರ್ಲಕ್ಷ್ಯ ನೀತಿಯ ವಿರುದ್ಧ ಸ್ಥಳೀಯ ಬಿಜೆಪಿ ಘಟಕಗಳು ಸಂಘಟಿತ ಧರಣಿ ಮತ್ತು ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಹೋರಾಟದ ಅಂಗವಾಗಿ ಹಲವಾರು ಗ್ರಾಮ ಪಂಚಾಯತ್ ಗೆ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ನೇರವಾಗಿ ಹಾಜರಾಗಿ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿದರು.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಫ್ತಿಯಯಲ್ಲಿ ಈ ಕೆಳಕಂಡ ಗ್ರಾಮ ಪಂಚಾಯತ್‌, ಪಟ್ಟಣ ಪಂಚಾಯತ್‌ ಮತ್ತು ಪುರಸಭೆಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

  • ಹರೇಕಳ ಗ್ರಾಮ ಪಂಚಾಯತ್ , ಪಾವೂರು ಗ್ರಾಮ ಪಂಚಾಯತ್, , ಕೊಣಾಜೆ ಗ್ರಾಮ ಪಂಚಾಯತ್,
  • ಪಜೀರು ಗ್ರಾಮ ಪಂಚಾಯತ್ , ಸಜೀಪ ನಡು ಗ್ರಾಮ ಪಂಚಾಯತ್, ಕುರ್ನಾಡು ಗ್ರಾಮ ಪಂಚಾಯತ್ ,
  • ಬಾಳೆಪುಣಿ ಗ್ರಾಮ ಪಂಚಾಯತ್ , ಕೋಟೆಕಾರ್ ಪಟ್ಟಣ ಪಂಚಾಯತ್, ಸೋಮೇಶ್ವರ ಪುರಸಭೆ

ಈ ಸಂದರ್ಭದಲ್ಲಿ ಮಂಗಳೂರು ಮಂಡಲದ ಅಧ್ಯಕ್ಷರಾದ ಶ್ರೀ ಜಗದೀಶ ಆಳ್ವ ಮತ್ತು ಯು.ಮೋ. ಅಧ್ಯಕ್ಷರಾದ ಶ್ರೀ ಮುರಲಿ ಕೊಣಾಜೆ ಹಾಗೂ ಪಂಚಾಯತ್ ಅಧ್ಯಕ್ಷರು, ಸದಸ್ಯರು ಸೇರಿದಂತೆ ಭಾರತೀಯ ಜನತಾ ಪಕ್ಷದ ಮುಖಂಡರು, ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದ ನಾಯಕರ ಉಪಸ್ಥಿತಿಯಲ್ಲಿ ಪ್ರತಿಭಟನೆಗಳು ಯಶಸ್ವಿಯಾಗಿ ನಡೆದವು.

ಈ ಸಂದರ್ಭದಲ್ಲಿ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು:
“ಈ ಸರ್ಕಾರದ ಆಡಳಿತ ಸಂಪೂರ್ಣ ಜನವಿರೋಧಿ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್, ರಸ್ತೆ, ನೀರು, ಆಹಾರ, ವಸತಿ, ಪಡಿತರ – ಪ್ರತಿಯೊಂದು ಕ್ಷೇತ್ರದಲ್ಲೂ ಸರ್ಕಾರದ ವಿಫಲತೆಯು ಸ್ಪಷ್ಟವಾಗಿದೆ ಬೆಲೆ ಏರಿಕೆ ಮಾತ್ರ ಈ ಸರ್ಕಾರದ ಸಾಧನೆ. ಈ ಹೋರಾಟವು ಪ್ರಾರಂಭ ಮಾತ್ರ. ಮುಂದಿನ ದಿನಗಳಲ್ಲಿ ಈ ಧ್ವನಿ ಸದನದಲ್ಲೂ ಕೇಳಿಸಲಿದೆ. ಈ ಭಂಡ-ಭ್ರಷ್ಟ-ಮೂಡ ಸರ್ಕಾರವನ್ನು ಕಿತ್ತೆಸೆಯುವ ತನಕ ನಮ್ಮ ಹೋರಾಟ ನಡೆಯಲಿದೆ” ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ.

ಸಮಾಜಮುಖಿ ಸ್ಪಂದನೆ:

  • ಕೋಟೆಕಾರ್ ನಲ್ಲಿ ಮಂಗಳಮುಖಿ ಸಮುದಾಯದ ಮೂಲಭೂತ ಸೌಕರ್ಯದ ಕೊರತೆಯ ಬಗ್ಗೆ ಸಭೆಯಲ್ಲಿ ಸ್ಪಷ್ಟ ಚರ್ಚೆ ನಡೆಯಿತು. ಶಾಸಕರು ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಪೂರಕ ಸೌಕರ್ಯ ಒದಗಿಸುವ ಭರವಸೆ ನೀಡಿದರು.
[t4b-ticker]
error: Content is protected !!