ಸತ್ಯ ತಿಳಿಯದೇ ಸುದ್ದಿ ಪ್ರಕಟಿಸಬೇಡಿ ಗಡ್ಕರಿ ಆಕ್ರೋಶ

Picture of Savistara

Savistara

Bureau Report

ನವದೆಹಲಿ: ದ್ವಿಚಕ್ರ ವಾಹನಗಳ ಮೇಲೆ ಟೋಲ್‌ ತೆರಿಗೆ

ವಿಧಿಸುವ ಬಗ್ಗೆ ಕೆಲವು ಮಾಧ್ಯಮಗಳು ದಾರಿತಪ್ಪಿಸುವ ಸುದ್ದಿಗಳನ್ನು ಹರಡುತ್ತಿವೆ. ಅಂತಹ ಯಾವುದೇ ನಿರ್ಧಾರವನ್ನು ಪ್ರಸ್ತಾಪಿಸಲಾಗಿಲ್ಲ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಗುರುವಾರ ಎಕ್ಸ್ ಪೋಸ್ಟ್ ಮಾಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

‘ಮಹತ್ವಪೂರ್ಣ ಎಂದು ಎಕ್ಸ್ ಪೋಸ್ಟ್ ಮಾಡಿರುವ ಗಡ್ಕರಿ “ದ್ವಿಚಕ್ರ ವಾಹನಗಳಿಗೆ ಟೋಲ್‌ನಲ್ಲಿ ಸಂಪೂರ್ಣ ವಿನಾಯಿತಿ ಮುಂದುವರಿಯಲಿದೆ. ಸತ್ಯವನ್ನು ತಿಳಿಯದೆ ದಾರಿತಪ್ಪಿಸುವ ಸುದ್ದಿಗಳನ್ನು ಹರಡುವುದು ಮತ್ತು ಸಂಚಲನ ಮೂಡಿಸುವುದು ಆರೋಗ್ಯಕರ ಪತ್ರಿಕೋದ್ಯಮದ ಲಕ್ಷಣವಲ್ಲ. ನಾನು ಅದನ್ನು ಖಂಡಿಸುತ್ತೇನೆ ಎಂದು ಸಚಿವ ನಿತಿನ್ ಗಡ್ಕರಿ ಆಕ್ರೋಶ ಹೊರ ಹಾಕಿದ್ದಾರೆ.

ದ್ವಿಚಕ್ರ ವಾಹನಗಳ ಮೇಲೆ ಟೋಲ್ ಎಂಬ ವರದಿಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ (NHAI) ಗುರುವಾರ ತಳ್ಳಿಹಾಕಿದ್ದು, “ನಕಲಿ ಸುದ್ದಿ” ಎಂದು ಹೇಳಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!