ನನ್ನ ಜೀವವಿರುವ ತನಕ ನಾನು ಬಿಜೆಪಿ,ಬೇರೆ ಪಕ್ಷ ಸೇರಲ್ಲ ಕೆ.ಎಸ್ ಈಶ್ವರಪ್ಪ

Picture of Savistara

Savistara

Bureau Report

ಬಳ್ಳಾರಿ : ಪಕ್ಷದಿಂದ ಉಚ್ಚಾಟಿತರಾಗಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಅವರು ಮತ್ತೆ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನ್ನ ಜೀವ ಇರುವುದೇ ಬಿಜೆಪಿಯಲ್ಲಿ. ಹೀಗಾಗಿ, ನಾನು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಬಿಜೆಪಿಗೆ ಹೋಗೇ ಹೋಗುತ್ತೇನೆ. ಅದು ಇಂದು ನಿನ್ನೆಯ ಪಕ್ಷವಲ್ಲ. ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ, ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಮತ್ತು ನಾನು ಸೇರಿದಂತೆ ಹಲವು ಹಿರಿಯರು ಕಟ್ಟಿದ ಪಕ್ಷ ಎಂದರು.

ಕೆಲವರು ರಕ್ತ ಸುರಿಸಿ ಪಕ್ಷ ಸಂಘಟನೆ ಮಾಡಿದ್ದಾರೆ. ನನ್ನ ಸೈದ್ಧಾಂತಿಕ ಹಿನ್ನೆಲೆಯೂ ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಒಗ್ಗಲ್ಲ. ಹೀಗಾಗಿ, ನಾನು ಬೇರೊಂದು ಪಕ್ಷಕ್ಕೆ ಹೋಗುವ ಪ್ರಮೇಯವೇ ಇಲ್ಲ. ಕೆಲ ಹಿರಿಯರು ಕುಳಿತು ಮಾತಾಡೋಣ ಎಂದಿದ್ದಾರೆ. ನೋಡೋಣ ಮುಂದೇನಾಗುತ್ತೆ ಎಂದು ಹೇಳಿದರು.

ಕಾಂಗ್ರೆಸ್​ ಸೇರಲು ಆಹ್ವಾನ ಬಂದಿತ್ತು: ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸಚಿವರು ಕಾಂಗ್ರೆಸ್​ ಸೇರಲು ಆಹ್ವಾನ ನೀಡಿದ್ದರು. ನನಗೆ, ಪುತ್ರನಿಗೆ ಸ್ಥಾನಮಾನ ನೀಡುವುದಾಗಿ ಹೇಳಿದ್ದರು. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡಾ ಆಫರ್​ ನೀಡಿದ್ದರು. ಆದರೆ, ನಾನು ಹಿಂದುತ್ವವಾಗಿ. ಸತ್ತರೂ ಹಿಂದುತ್ವ ಬಿಡಲ್ಲ. ಬೇರೆ ಪಕ್ಷ ಸೇರಲ್ಲ ಎಂದು ಈಶ್ವರಪ್ಪ ಅವರು ಹೇಳಿದರು.

ರಾಜ್ಯದಲ್ಲಿ ಪಕ್ಷ ಸಂಘಟಿಸಬೇಕಿದೆ: ರಾಜ್ಯದಲ್ಲಿ ಬಿಜೆಪಿಯ ಖದರ್​ ಕುಸಿದಿದೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡಬೇಕಿದೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದು ಮುಗಿದ ಅಧ್ಯಾಯ. ಬಿಜೆಪಿ ಕುರುಬ ಸಮುದಾಯದ ಸಭೆಯಲ್ಲಿ ನನ್ನನ್ನು ಮತ್ತೆ ಬಿಜೆಪಿಗೆ ಕರೆತರಬೇಕು ಎಂಬ ಒತ್ತಾಯ ಕೇಳಿ ಬಂದಿದೆ ಎಂದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!