ಕುಕ್ಕೆ ಸುಬ್ರಹ್ಮಣ್ಯ ನೂತನ ಆಶ್ಲೇಷ ಮಂದಿರ ಶಂಕುಸ್ಥಾಪನೆ ಬದಲು ನಾಮಫಲಕ ಅನಾವರಣ

Picture of Savistara

Savistara

Bureau Report

ಕುಕ್ಕೆಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಆಗಮಿಸಿದ ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೂತನ ಆಶ್ಲೇಷ ಮಂದಿರದ ಶಂಕುಸ್ಥಾಪನೆ ನೆರೆವೇರಿಸದೆ ನಾಮಫಲಕ ಅನಾವರಣ ನಡೆಸಿ ತೆರಳಿದ್ದಾರೆ. ಕ್ಷೇತ್ರಕ್ಕೆ ಅಗಮಿಸಿದ ಸಚಿವರು ವಿವಿಧ ದೇವಾಲಯ ಸಮಿತಿಗಳ ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ದೇವರ ದರ್ಶನ ಪಡೆದರು.ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಫ್ಲೆಕ್ಸ್,ಬ್ಯಾನರ್ ಅಳವಡಿಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ ಆಡಳಿತ ಸಮಿತಿಯವರು ಕೇವಲ ದೇವಸ್ಥಾನ ಮುಂಭಾಗ ನಾಮಫಲಕ ಅನಾವರಣ ನಡೆಸಿರುವುದು ಹಲವು ಗೊಂದಲಕ್ಕೆ ಕಾರಣವಾಗಿದೆ. ಸಭಾಧ್ಯಕ್ಷ ಯುಟಿ ಖಾದರ್ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ , ಸಮಿತಿ ಸದಸ್ಯರು ಸಚಿವ ರಾಮಲಿಂಗ ರೆಡ್ಡಿ ಸಮ್ಮುಖದಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.ಈ ಹಿಂದೆ ಇದೇ ಮಂದಿರಕ್ಕೆ ಶಿಲಾನ್ಯಾಸ ನೆರೆವೇರಿಸಲಾಗಿತ್ತು ಮತ್ತು ಸ್ಥಳ ಬದಲಾವಣೆ ಬಗ್ಗೆ ಕೂಡ ಭಕ್ತರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು, ಬಿಜೆಪಿ ಕೂಡ ಈ ವಿಚಾರವಾಗಿ ಈ ಹಿಂದಿನ ನಿರ್ಧಾರದಂತೆ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.ಕಾರ್ಯಕ್ರಮ ದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಡಿ,ರಮಾನಾಥ್ ರೈ ಸಮಿತಿ ಸದಸ್ಯರು, ಕಾಂಗ್ರೆಸ್ ಮುಖಂಡ ರು ಉಪಸ್ಥಿತರಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!