ಎರಡನೇ ದಿನವೂ ರಣದೀಪ್ ಸುರ್ಜೇವಾಲ ಮುಂದೆ ಕಾಂಗ್ರೆಸ್ ಶಾಸಕರ ದೂರಿನ ಮಳೆ!

Picture of Savistara

Savistara

Bureau Report

20ಕ್ಕೂ ಹೆಚ್ಚು ಶಾಸಕರ ಜತೆ ಮುಖಾಮುಖಿ ಚರ್ಚಿಸಿದ ರಾಜ್ಯ ಉಸ್ತುವಾರಿ, ಸಚಿವರ ಕಾರ್ಯವೈಖರಿಗೆ ಹಲವು ಶಾಸಕರಿಂದ ತೀವ್ರ ಆಕ್ಷೇಪ

ಬೆಂಗಳೂರು: ಸತತ ಎರಡನೇ ದಿನವೂ ಕಾಂಗ್ರೆಸ್ ಶಾಸಕರೊಂದಿಗೆ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಮ್ಯಾರಥಾನ್ ಮುಖಾಮುಖಿ ಸಭೆ ನಡೆಸಿದ್ದು, ಈ ವೇಳೆ ಹಲವು ಶಾಸಕರು ಸಚಿವರ ಕಾರ್ಯವೈಖರಿ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ದೂರುಗಳ ಸುರಿಮಳೆ ಮುಂದುವರಿಯಿತು.ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಒಟ್ಟಾರೆ 20ಕ್ಕೂ ಹೆಚ್ಚು ಶಾಸಕರೊಂದಿಗೆ ಮುಖಾಮುಖೀ ಸಭೆ ನಡೆಯಿತು. ಈ ಪೈಕಿ ಕೆಲ ಶಾಸಕರು ತಮ್ಮ ಕ್ಷೇತ್ರಕ್ಕೆ ಇನ್ನಷ್ಟು ಅನುದಾನ, ಹಲವು ಅಭಿವೃದ್ಧಿ ಕೆಲಸಗಳು, ಕ್ಷೇತ್ರಕ್ಕೆ ಸಂಬಂಧಿಸಿದ ಕಡತಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ಧೋರಣೆ ಬಗ್ಗೆ ಗಮನ ಸೆಳೆದರು ಎನ್ನಲಾಗಿದೆ.

ನೋವನ್ನು ಹೇಳಿಕೊಂಡಿದ್ದೇನೆ:

ರಾಜು ಕಾಗೆಮುಖಾಮುಖೀ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜು ಕಾಗೆ, “ನನ್ನ ನೋವನ್ನು ನಾನು ಹೇಳಿಕೊಂಡಿದ್ದೇನೆ. ಅನುದಾನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ವ್ಯವಸ್ಥೆ ಬಗ್ಗೆ ನನಗೆ ಅಸಮಾಧಾನ ಇದೆ. ಕಡತಗಳು ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಕ್ಷೇತ್ರದಲ್ಲಿ ಕೆಲವು ಆಶ್ವಾಸನೆ ಕೊಟ್ಟಿದ್ದೇವೆ. ಅದನ್ನು ಈಡೇರಿಸಲು ಆಗುತ್ತಿಲ್ಲ. ಇದನ್ನೂ ರಾಜ್ಯ ಉಸ್ತುವಾರಿ ಗಮನಕ್ಕೆ ತಂದಿದ್ದೇನೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.ಶಾಸಕ ಅಶೋಕ್ ರೈ ಮಾತನಾಡಿ, “ಅನುದಾನ ಸರಿಯಾಗಿ ಬಳಕೆ ಆಗುತ್ತಿದೆಯೇ? ಪಕ್ಷ ಸಂಘಟನೆ ತಳಮಟ್ಟದಲ್ಲಿ ಸಮರ್ಪಕವಾಗಿ ಆಗುತ್ತಿದೆಯೇ ಎಂದು ಕೇಳಿದರು. ಒಂದೆರಡು ಯೋಜನೆಗಳ ಬಗ್ಗೆಯೂ ಪ್ರಸ್ತಾವನೆ ಇಟ್ಟಿದ್ದೇನೆ’ ಎಂದು ತಿಳಿಸಿದರು.

ಶಾಸಕ ಎ.ಸಿ.ಶ್ರೀನಿವಾಸ್, “ನನ್ನ ಕ್ಷೇತ್ರಕ್ಕೆ ಯುಜಿಡಿ, ಸೋಲೂರು ಹೋಬಳಿಗೆ ಪೊಲೀಸ್ ಠಾಣೆ ಆಗಬೇಕು. ಇದಲ್ಲದೆ, ಹಲವು ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ಮಾಡಲಾಯಿತು’ ಎಂದು ಮಾಹಿತಿ ನೀಡಿದರು.ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, “ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಆಯಿತು. ಸಿಎಂ ಬದಲಾವಣೆ ಬಗ್ಗೆ ಅವರು ಕೇಳಲೂ ಇಲ್ಲ. ನಾವು ಹೇಳಲೂ ಇಲ್ಲ. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟಿದ್ದೇನೆ ಎಂದರು.

ಯಾರ್ಯಾರ ಜತೆ ಮುಖಾಮುಖಿ?

ಶಾಸಕರಾದ ರಾಜು ಕಾಗೆ, ಕೆ.ವೈ. ನಂಜೇಗೌಡ, ಎ.ಸಿ. ಶ್ರೀನಿವಾಸ್, ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್, ಪ್ರಿಯಕೃಷ್ಣ, ಎಂ. ಕೃಷ್ಣಪ್ಪ, ಬಿ. ಶಿವಣ್ಣ, ಶರತ್ ಬಚ್ಚೇಗೌಡ, ಎನ್. ಶ್ರೀನಿವಾಸಯ್ಯ, ಎಚ್.ಸಿ. ಬಾಲಕೃಷ್ಣ, ಎಚ್.ಎ. ಇಕ್ಸಾಲ್ ಹುಸೇನ್, ಸಿ.ಪಿ. ಯೋಗೇಶ್ವರ, ಅಶೋಕ್‌ ರೈ, ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ಗಣೇಶ ಪ್ರಸಾದ್‌, ತಸ್ವೀರ್ ಸೇಸ್…, ಕೆ. ಹರೀಶ್‌ಗೌಡ, ಡಿ. ರವಿಶಂಕರ್, ಅನಿಲ್ ಚಿಕ್ಕಮಾದು ಅವರೊಂದಿಗೆ ಮಂಗಳವಾರ ಸುಜೆÌ ಮುಖಾಮುಖಿ ಮಾತುಕತೆ.

ಇಂದು ಯಾರ್ಯಾರ ಜತೆ ಮುಖಾಮುಖಿ ಚರ್ಚೆ?

ದರ್ಶನ್ ದ್ರುವನಾರಾಯಣ, ಶಿವಲಿಂಗೇಗೌಡ, ಟಿ.ಡಿ. ರಾಜೇಗೌಡ, ನಯನ ಮೋಟಮ್ಮ, ಎಚ್.ಡಿ. ತಮ್ಮಯ್ಯ, ಜಿ.ಎಚ್. ಶ್ರೀನಿವಾಸ್, ನರೇಂದ್ರಸ್ವಾಮಿ, ಕೆ.ಎಂ. ಉದಯ್, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಮಂಥರ್‌ಗೌಡ, ಎ.ಎಸ್. ಪೊನ್ನಣ್ಣ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!