ಮತ್ತೆ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರು ಅರೆಸೆಸ್ಸ್ ಬ್ಯಾನ್ ಬಗ್ಗೆ ವಿಮರ್ಶೆ ಶಾಸಕ ಮಂಜುನಾಥ್ ಭಂಡಾರಿ ಹೇಳಿಕೆ | ಅರೆಸೆಸ್ಸ್ ಶತಮಾನಗಳಿಂದ ಸಮಾಜ ಜೊತೆಗೆ ಕೆಲಸ ಮಾಡುತ್ತ ಬಂದಿದೆ,ಭಂಡಾರಿ ಹೇಳಿಕೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಹೇಳಿಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ

Picture of Savistara

Savistara

Bureau Report

ಆರ್‌ಎಸ್‌ಎಸ್ – ದೇಶದ ಶಕ್ತಿಯ ಸಂಕೇತವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಅವರು ಆರ್‌ಎಸ್‌ಎಸ್‌ ಅನ್ನು ನಿಷೇಧಿಸುವಂತೆ ನೀಡಿರುವ ಹೇಳಿಕೆ ಅತ್ಯಂತ ಅನೌಚಿತ್ಯಪೂರ್ಣ ಹಾಗೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆಯೆಂದು ದ.ಕ.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಇಂದು ದೇಶದ ಸಂಸ್ಕೃತಿ, ಸಂಸ್ಕಾರ ಮತ್ತು ರಾಷ್ಟ್ರಭಕ್ತಿಯ ಆಶಯದ ಬಿಂಬವಾಗಿದೆ. ದೇಶದ ಸಂಕಷ್ಟದ ಸಂದರ್ಭದಲ್ಲಿ ಸೇವಾ ಚಟುವಟಿಕೆಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಈ ಸಂಘವನ್ನು ನಿಷೇಧಿಸಲು ಆಗ್ರಹಿಸುವುದು, ದೇಶಪ್ರೇಮಿಗಳ ಆತ್ಮಾಭಿಮಾನಕ್ಕೆ ಅಪಮಾನ ಮಾಡುವ ಸಮಾನವಾಗಿದೆ.ಆರ್‌ಎಸ್‌ಎಸ್‌ ಒಂದೂ ಎರಡು ವರ್ಷಗಳ ಸಂಘಟನೆ ಅಲ್ಲ. ಶತಮಾನದಿಂದ ಭಾರತೀಯ ಸಮಾಜದ ಶಕ್ತಿಯಂತೆ ಇರುವ, ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಭಾರತವನ್ನು ಗಟ್ಟಿಗೊಳಿಸುತ್ತಿರುವ ಸಂಘಟನೆ. ಇದು ಯಾವುದೇ ರಾಜಕೀಯ ಪಕ್ಷವಲ್ಲ. ಇದು ದೇಶದ ಮೊತ್ತಮೊದಲ ಸಾಮಾಜಿಕ ಪುನರ್‌ನಿರ್ಮಾಣದ ಚಳವಳಿಯ ಶಕ್ತಿ ಕೇಂದ್ರವಾಗಿದೆ.ನಾನು ಈ ಹೇಳಿಕೆಯನ್ನು ಬಿಜೆಪಿಯ ಜಿಲ್ಲಾಧ್ಯಕ್ಷನಾಗಿ ತೀವ್ರವಾಗಿ ಖಂಡಿಸುತ್ತೇನೆ. ಜನಸೇವೆಗೆ ಅಂಕಿತವಾದ ಆರ್‌ಎಸ್‌ಎಸ್‌ ವಿರೋಧಿಸುವ ಮೊದಲು, ಅದು ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಮೊದಲು ತಿಳಿದುಕೊಳ್ಳಿ. ರಾಷ್ಟ್ರಪ್ರೇಮವನ್ನು ನಿಷೇಧಿಸಲು ಯಾರಿಗೂ ಅವಕಾಶವಿಲ್ಲವೆಂದು ಪತ್ರಿಕಾ ಹೇಳಿಕೆಯಲ್ಲಿ ಸತೀಶ್ ಕುಂಪಲ ಹೇಳಿದ್ದಾರೆ

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!